Headlines

Vijay Deverakonda: ಮದುವೆನೇ ಬೇಡ ಅಂದಿದ್ದ ಹೀರೋ: ರಶ್ಮಿಕಾ ಬಗ್ಗೆ ವಿಜಯ್ ಮಾವ ಯಶ್ ಹೇಳಿದ್ದೇನು? | Vijay Deverakondas Uncle Reveals Why The Actor Initially Refused Marriage Gvd

Vijay Deverakonda: ಮದುವೆನೇ ಬೇಡ ಅಂದಿದ್ದ ಹೀರೋ: ರಶ್ಮಿಕಾ ಬಗ್ಗೆ ವಿಜಯ್ ಮಾವ ಯಶ್ ಹೇಳಿದ್ದೇನು? | Vijay Deverakondas Uncle Reveals Why The Actor Initially Refused Marriage Gvd



Vijay Deverakonda: ಮದುವೆನೇ ಬೇಡ ಅಂದಿದ್ದ ಹೀರೋ: ರಶ್ಮಿಕಾ ಬಗ್ಗೆ ವಿಜಯ್ ಮಾವ ಯಶ್ ಹೇಳಿದ್ದೇನು? | Vijay Deverakondas Uncle Reveals Why The Actor Initially Refused Marriage Gvd

ವಿಜಯ್ ದೇವರಕೊಂಡ ಅವರ ಮಾವ ಯಶ್ ರಂಗಿನೇನಿ ಅವರು ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ವಿಜಯ್-ರಶ್ಮಿಕಾ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಅವರ ಮಾವ ಯಶ್ ರಂಗಿನೇನಿ ಅವರು ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಜಯ್-ರಶ್ಮಿಕಾ ಮದುವೆ ಹೇಗೆ ನಡೆಯಿತು ಎಂಬುದನ್ನು ಕೂಡ ವಿವರಿಸಿದ್ದಾರೆ.

ವಿಜಯ್ ದೇವರಕೊಂಡ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ, ‘ಈ ಫೀಲ್ಡ್‌ನಲ್ಲಿ ಮದುವೆ ಯಾಕೆ? ಸದ್ಯಕ್ಕೆ ಕೆರಿಯರ್ ಮುಖ್ಯ’ ಎನ್ನುತ್ತಿದ್ದರಂತೆ. ಆದರೆ ರಶ್ಮಿಕಾ ಪರಿಚಯವಾದ ನಂತರ ಅವರ ಅಭಿಪ್ರಾಯ ಬದಲಾಯಿತು. ಇವರಿಬ್ಬರ ಕೆಮಿಸ್ಟ್ರಿ ಅದ್ಭುತವಾಗಿದೆ, ಅವರಿಬ್ಬರೂ ಒಬ್ಬರಿಗೊಬ್ಬರು ಹುಟ್ಟಿದಂತಿದ್ದಾರೆ ಎಂದು ಅವರ ಮಾವ ಯಶ್ ರಂಗಿನೇನಿ ಹೇಳಿದ್ದಾರೆ. ಯಶ್ ಅವರು ವಿಜಯ್ ನಟನೆಯ ‘ಪೆಳ್ಳಿಚೂಪುಲು’ ಚಿತ್ರದ ನಿರ್ಮಾಪಕರೂ ಹೌದು.

ಈ ಡೆಸ್ಟಿನೇಶನ್ ವೆಡ್ಡಿಂಗ್ ಅದ್ದೂರಿಯಾಗಿ ನಡೆಯಲು ವಿಜಯ್, ರಶ್ಮಿಕಾ ಮತ್ತು ವಿಜಯ್ ತಾಯಿ ಮಾಧವಿ ಅವರೇ ಕಾರಣವಂತೆ. ವಿಜಯ್ ತಾಯಿ ಮುಂದೆ ನಿಂತು ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಂಡರು. ಮದುವೆಗಿಂತ ಹೆಚ್ಚಾಗಿ ಇದೊಂದು ಪ್ರವಾಸದಂತೆ ಇತ್ತು. ಬಂದ ಅತಿಥಿಗಳಿಗೆ ಪ್ರತಿದಿನ ಆಟ-ಪಾಠಗಳಿದ್ದವು, ಎಲ್ಲರೂ ಹಾಲಿಡೇ ಎಂಜಾಯ್ ಮಾಡಿದಂತೆ ಸಂಭ್ರಮಿಸಿದೆವು ಎಂದು ಯಶ್ ವಿವರಿಸಿದ್ದಾರೆ.

ವಿಜಯ್‌ಗೆ ತನ್ನ ಅಜ್ಜಿ ಎಂದರೆ ಬಹಳ ಪ್ರೀತಿ. ವಿಜಯ್ ತಂದೆ ಚಿತ್ರರಂಗದಲ್ಲಿ ಯಶಸ್ಸು ಕಾಣದ ಕಾರಣ, ಮೊಮ್ಮಗನೂ ಸಿನಿಮಾಕ್ಕೆ ಹೋಗುವುದು ಅಜ್ಜಿಗೆ ಇಷ್ಟವಿರಲಿಲ್ಲ. ಆದರೆ, ವಿಜಯ್ ಯಶಸ್ಸು ಕಾಣುವ ಮೊದಲೇ, 2012ರಲ್ಲಿ ಅವರ ಅಜ್ಜಿ ನಿಧನರಾದರು. ಮದುವೆಯಾದ ನಂತರ ವಿಜಯ್, ಪತ್ನಿ ರಶ್ಮಿಕಾ ಜೊತೆಗೂಡಿ ಅಜ್ಜಿಯ ಸಮಾಧಿಗೆ ಭೇಟಿ ನೀಡಿ ನಮಿಸಿದ್ದರು ಎಂದು ಯಶ್ ಹೇಳಿದ್ದಾರೆ.

ಮೂರು ಬಾರಿ ಪ್ರತ್ಯೇಕ ಆಮಂತ್ರಣ

ತಮ್ಮ ರಿಸೆಪ್ಷನ್‌ಗೆ ಸಿಎಂ ರೇವಂತ್ ರೆಡ್ಡಿ ಅವರನ್ನು ಆಹ್ವಾನಿಸಲು ಮೊದಲು ವಿಜಯ್, ನಂತರ ಅವರ ತಾಯಿ, ಆಮೇಲೆ ರಶ್ಮಿಕಾ ಕೂಡ ಒಬ್ಬರೇ ಹೋಗಿ ಆಹ್ವಾನ ನೀಡಿದ್ದರು. ಮೂರು ಬಾರಿ ಪ್ರತ್ಯೇಕವಾಗಿ ಹೋಗಿ ಆಮಂತ್ರಣ ನೀಡಿದ್ದರು. ಉಳಿದ ರಾಜಕೀಯ ನಾಯಕರನ್ನು ಕರೆಯುವ ಜವಾಬ್ದಾರಿಯನ್ನು ಮಾವನಾಗಿ ತಾವೇ ತೆಗೆದುಕೊಂಡಿದ್ದಾಗಿ ಯಶ್ ರಂಗಿನೇನಿ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *