Headlines

ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್‌: ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆ | India Supplies 38000 Metric Tonnes Of Petrol Diesel To Sri Lanka Centre Allows Delivery Of Kerosene At Petrol Stations

ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್‌: ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆ | India Supplies 38000 Metric Tonnes Of Petrol Diesel To Sri Lanka Centre Allows Delivery Of Kerosene At Petrol Stations



ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್‌: ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆ | India Supplies 38000 Metric Tonnes Of Petrol Diesel To Sri Lanka Centre Allows Delivery Of Kerosene At Petrol Stations

ಯುದ್ಧದಿಂದ ಎಲ್‌ಪಿಜಿ ಪೂರೈಕೆಯ ಮೇಲೆ ಉಂಟಾದ ಪರಿಣಾಮದಿಂದಾಗಿ, ಕೇಂದ್ರ ಸರ್ಕಾರವು 21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಯನ್ನು ಪುನರಾರಂಭಿಸಿದೆ. ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್‌ಗೆ ಯಾವುದೇ ಕೊರತೆಯಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

ಸೀಮೆಎಣ್ಣೆ ವಿತರಣೆಗೆ ಕೇಂದ್ರ ಸರ್ಕಾರ ಅನುಮತಿ

ನವದೆಹಲಿ: ಎಲ್‌ಪಿಜಿ ಪೂರೈಕೆ ಮೇಲೆ ಯುದ್ದದ ಕರಿನೆರಳು ಬೀರಿರುವ ಕಾರಣ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಸರ್ಕಾರ ಅನುಮತಿಸಿದೆ. ಈ ರಾಜ್ಯಗಳನ್ನು ಈ ಹಿಂದೆ ಸೀಮೆಎಣ್ಣೆ ಮುಕ್ತ ಎಂದು ಪ್ರಕಟಿಸಲಾಗಿತ್ತು. ಭಾನುವಾರ ಈ ಸಂಬಂಧ ಅಧಿಸೂಚನೆ ಪ್ರಕಟಿಸಲಾಗಿದ್ದು, 60 ದಿನಗಳ ಮಟ್ಟಿಗೆ ಮನೆಗಳಿಗೆ ಸೀಮೆಎಣ್ಣೆ ವಿತರಣೆ ಮೇಲೆ ಇದ್ದ ನಿರ್ಬಂಧ ಸಡಿಲಗೊಳಿಸಿದೆ. ಇದು ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ ನಿರ್ವಹಿಸಲ್ಪಡುವ ನಿರ್ದಿಷ್ಟ ಪೆಟ್ರೋಲ್ ಪಂಪ್‌ಗಳು ಸೀಮೆಎಣ್ಣೆಯನ್ನು ಸಂಗ್ರಹಿಸಿ ವಿತರಿಸಲು ಅನುವು ಮಾಡಿಕೊಡುತ್ತದೆ. 5000 ಲೀಟರ್‌ಗಳವರೆಗೆ ಸೀಮೆಎಣ್ಣೆಯನ್ನು ಸಂಗ್ರಹಿಸಲು ಅವಕಾಶವಿದೆ. ಪ್ರತಿ ಜಿಲ್ಲೆಗೆ ಎರಡು ಅಂತಹ ಸೇವಾ ಕೇಂದ್ರಗಳನ್ನು ಗೊತ್ತುಪಡಿಸಬಹುದು ಎಂದು ತೈಲ ಸಚಿವಾಲಯ ಹೇಳಿದೆ.

ಆತಂಕ ಬೇಡ: ತೈಲ ಮತ್ತು ಗ್ಯಾಸ್ ವ್ಯತ್ಯಯವಾಗಿದ್ದರೂ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್ ಖರೀದಿಗೆ ಮುಗಿಬೀಳಬಾರದು ಎಂದು ಕೇಂದ್ರ ಸರ್ಕಾರ ಮತ್ತೆ ಮನವಿ ಮಾಡಿದೆ. ಅಡುಗೆ ಅನಿಲ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ. ವಾಣಿಜ್ಯ ಗ್ಯಾಸ್ ಪೂರೈಕೆ ಪ್ರಮಾಣವನ್ನು ಇದೀಗ ಶೇ.80ರ ವರೆಗೆ ಹೆಚ್ಚಿಸಲಾಗಿದೆ. ಗೊಬ್ಬರ ಕಾರ್ಖಾನೆಗಳಿಗೆ ಶೇ.75ರಷ್ಟು ಗ್ಯಾಸ್ ಪೂರೈಕೆ ಆಗುತ್ತಿದೆ ಎಂದಿದೆ.

ಇದನ್ನೂ ಓದಿ: ದೆವ್ವ ಹಿಡಿದಿದೆ ಅಂತ ಫ್ಲೈಟ್ ತುರ್ತು ದ್ವಾರ ತೆರೆಯಲೆತ್ನಿಸಿವನ ಬಂಧನ: ಬೆಂಗಳೂರು ಕಾಶಿ ವಿಮಾನದಲ್ಲಿ ಆತಂಕದ ಘಟನೆ

ಯುದ್ಧ ಮುಂದುವರಿದ್ರೆ ಕೆಲವು ಕ್ಷೇತ್ರಗಳಿಗೆ ಕೇಂದ್ರ ಪ್ಯಾಕೇಜ್

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಇನ್ನೂ ದೀರ್ಘಕಾಲ ಮುಂದುವರಿದರೆ, ಎಂಎಸ್‌ಎಂಇ ಸೇರಿದಂತೆ ಆರ್ಥಿಕವಾಗಿ ದುರ್ಬಲ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ವಿಶೇಷ ಸಹಾಯಧನ ಘೋಷಿಸಬಹುದು ಎಂದು ಮೂಲಗಳು ತಿಳಿಸಿವೆ. ಇದು ಆ ವಲಯಗಳನ್ನು ರಕ್ಷಿಸಿ, ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಲಿದೆ. ಯುದ್ಧದ ಹಿನ್ನೆಲೆಯಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂ ಡಿವೆ. ಇದನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ. 1 ತಿಂಗಳಿನಿಂದ ಸಮರದಿಂದಾಗಿ, ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ರಫ್ತು ಮತ್ತು ಸಾಗಣಿಕೆಗೆ ಭಾರೀ ಹೊಡೆತ ಬಿದ್ದಿದೆ. ಇದರ ಪರಿಣಾಮಗಳಿಂದ ಆರ್ಥಿಕವಾಗಿ ದುರ್ಬಲ ವಲಯಗಳನ್ನು ರಕ್ಷಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: 2.5 ವರ್ಷದ ಮಗು ಮೇಲೆ ತಂದೆ ರೇಪ್ ಕೇಸ್ :ತಾಯಿ ಅನುಪಸ್ಥಿತಿಯಲ್ಲಿ ಬಾಲಕಿ ಹೇಳಿಕೆ ದಾಖಲಿಗೆ ಹೈಕೋರ್ಟ್‌ ಆಕ್ಷೇಪ



Source link

Leave a Reply

Your email address will not be published. Required fields are marked *