Headlines

ಕಳೆದ ವರ್ಷ ಕಾಂಗ್ರೆಸ್ ಪಕ್ಷಕ್ಕೆ ₹ 517 ಕೋಟಿ ದೇಣಿಗೆ – ಕಾಂಗ್ರೆಸ್‌ ನಾಯಕ ಚಿದಂಬರಂ ಒಬ್ಬರಿಂದಲೇ 3 ಕೋಟಿ ರು. ದಾನ | Congress Received Rs 517 Crore In Donations Last Year

2024-25ನೇ ಆರ್ಥಿಕ ವರ್ಷದಲ್ಲಿ ಪಕ್ಷಕ್ಕೆ 517 ಕೋಟಿ ರು.ಗೂ ಅಧಿಕ ದೇಣಿಗೆ ಬಂದಿದೆ. ಇದರಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ಬಂದ ದೇಣಿಗೆ ಮೊತ್ತ 313 ಕೋಟಿ ರು. ಸೇರಿದೆ ಎಂದು ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ.

ನವದೆಹಲಿ: 2024-25ನೇ ಆರ್ಥಿಕ ವರ್ಷದಲ್ಲಿ ಪಕ್ಷಕ್ಕೆ 517 ಕೋಟಿ ರು.ಗೂ ಅಧಿಕ ದೇಣಿಗೆ ಬಂದಿದೆ. ಇದರಲ್ಲಿ ಚುನಾವಣಾ ಟ್ರಸ್ಟ್‌ಗಳಿಂದ ಬಂದ ದೇಣಿಗೆ ಮೊತ್ತ 313 ಕೋಟಿ ರು. ಸೇರಿದೆ ಎಂದು ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ.

ಕಾರ್ಪೊರೇಟ್‌ ಕಂಪನಿಗಳ ದೇಣಿಗೆ

ಕಾರ್ಪೊರೇಟ್‌ ಕಂಪನಿಗಳಾದ ಐಟಿಸಿ ಲಿ., ಹಿಂದೂಸ್ಥಾನ್ ಝಿಂಕ್ ಲಿ. ಹಾಗೂ ಸೆಂಚುರಿ ಪ್ಲೈವುಡ್ ಮೊದಲಾದವು ದೇಣಿಗೆ ನೀಡಿವೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರೇ 3 ಕೋಟಿ ರು. ನೀಡಿದ್ದಾರೆ. ಚುನಾವಣಾ ಟ್ರಸ್ಟ್‌ಗಳ ಪೈಕಿ ನ್ಯೂ ಡೆಮಾಕ್ರಟಿಕ್ ಎಲೆಕ್ಟೋರಲ್ ಟ್ರಸ್ಟ್ ಮತ್ತು ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್‌ಗಳು ದೇಣಿಗೆಯಿತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಬಿಜೆಪಿಗೆ ಕೇವಲ ಚುನಾವಣಾ ಟ್ರಸ್ಟ್‌ಗಳಿಂದಲೇ 959 ಕೋಟಿ ರು. ದೇಣಿಗೆ ಹರಿದುಬಂದಿದೆ. ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ 184.5 ಕೋಟಿ ರು. (ಚುನಾವಣಾ ಟ್ರಸ್ಟ್‌ಗಳಿಂದ 153.5 ಕೋಟಿ ರು.) ದೇಣಿಗೆ ಬಂದಿದೆ.

ಎಲೆಕ್ಟೋರಲ್‌ ಟ್ರಸ್ಟ್‌ ಎಂದರೇನು?:

ಕಂಪನಿಗಳು ಚುನಾವಣೆಗೆಂದು ಪಕ್ಷಗಳಿಗೆ ನೀಡಲು ಟ್ರಸ್ಟ್‌ ರಚಿಸಿರುತ್ತವೆ. ಅವುಗಳಿಗೆ ಎಲೆಕ್ಟೋರಲ್‌ ಟ್ರಸ್ಟ್‌ ಎನ್ನುತ್ತಾರೆ.

Source link

Leave a Reply

Your email address will not be published. Required fields are marked *