Headlines

ಪ್ರೇಮಿಗಳ ದಿನದ ಖುಷಿಯಲ್ಲೇ ಗರ್ಲ್‌ಫ್ರೆಂಡ್‌ ರಿವೀಲ್‌ ಮಾಡಿದ ಯುಟ್ಯೂಬರ್‌ ಸ್ಯಾಮ್‌ ಸಮೀರ್! | Kannada Youtuber Sam Sameer New Girlfriend Face Reveal

ಪ್ರೇಮಿಗಳ ದಿನದ ಖುಷಿಯಲ್ಲೇ ಗರ್ಲ್‌ಫ್ರೆಂಡ್‌ ರಿವೀಲ್‌ ಮಾಡಿದ ಯುಟ್ಯೂಬರ್‌ ಸ್ಯಾಮ್‌ ಸಮೀರ್! | Kannada Youtuber Sam Sameer New Girlfriend Face Reveal



ಪ್ರೇಮಿಗಳ ದಿನದ ಖುಷಿಯಲ್ಲೇ ಗರ್ಲ್‌ಫ್ರೆಂಡ್‌ ರಿವೀಲ್‌ ಮಾಡಿದ ಯುಟ್ಯೂಬರ್‌ ಸ್ಯಾಮ್‌ ಸಮೀರ್! | Kannada Youtuber Sam Sameer New Girlfriend Face Reveal

Sameer Sm Youtube: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಅವರು ಹುಡುಗಿಯ ಜನ್ಮದಿನವನ್ನು ಆಚರಿಸಿದ್ದರು. ಆ ವಿಡಿಯೋವನ್ನು ಅವರು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದರೂ ಕೂಡ ಮುಖವನ್ನು ತೋರಿಸಿಲ್ಲ. ಇದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ.

ಪ್ರೇಮಿಗಳ ದಿನ ಹತ್ತಿರ ಬರುತ್ತಿವೆ. ಅನೇಕರು ವ್ಯಾಲೆಂಟೈನ್ಸ್‌ ಡೇ ಖುಷಿಯಲ್ಲಿದ್ದಾರೆ. ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಅವರು ಹುಡುಗಿಯ ಜನ್ಮದಿನವನ್ನು ಆಚರಿಸಿದ್ದಾರೆ. ಆದರೆ ಆ ಹುಡುಗಿ ಮುಖವನ್ನು ರಿವೀಲ್‌ ಮಾಡಿಲ್ಲ. ಅಷ್ಟೇ ಅಲ್ಲದೆ ಹುಡುಗಿಯ ಮುಖವನ್ನು ತೋರಿಸದೆ, ಯಾಕೆ ಬ್ಲರ್‌ ಮಾಡಿದರು ಎಂಬ ಪ್ರಶ್ನೆ ಇತ್ತು. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಸ್ಯಾಮ್‌ ಸಮೀರ್‌ ಅವರು ಲವ್‌ನಲ್ಲಿದ್ದಾರೆ. ಹೋಟೆಲ್‌ನಲ್ಲಿ ಗ್ರ್ಯಾಂಡ್‌ ಆಗಿ, ಸಿನಿಮೀಯ ಸ್ಟೈಲ್‌ನಲ್ಲಿ ಅವರು ಹುಡುಗಿಯ ಜನ್ಮದಿನವನ್ನು ಆಚರಿಸಿದ್ದರು. ಆದರೆ ಹುಡುಗಿ ಮುಖವನ್ನು ಮಾತ್ರ ತೋರಿಸಿಲ್ಲ.

ಆ ಹುಡುಗಿ ಯಾರು?

ಸಮೀರ್‌ ಸ್ಯಾಮ್‌ ಹಾಗೂ ಆ ಹುಡುಗಿ ಕುಟುಂಬದವರು ಸೇರಿಕೊಂಡು ವಯನಾಡಿಗೆ ಟ್ರಾವೆಲ್‌ ಮಾಡುತ್ತಿದ್ದಾರೆ. ಹುಡುಗಿ ಜೊತೆ ಹೊರಡೆ ಓಡಾಟ ಮಾಡಿದಾಗಲೂ ಕೂಡ, ವ್ಲಾಗ್‌ ಮಾಡಲಾಗುತ್ತಿಲ್ಲ. ಒಂದು ಹಂತಕ್ಕೆ ಬರೋವರೆಗೂ ಹೇಳೋದು ಸರಿ ಅಲ್ಲ, ಎರಡು ಕುಟುಂಬಗಳು ಸೇರಿಕೊಂಡು ಮಾತನಾಡಬೇಕು, ಇನ್ನೂ ಮಾತುಕತೆ ಆಗಬೇಕಿದೆ. ಪರ್ಸನಲ್‌ ಆಗಿ ಮಾತನಾಡಬೇಕು. ನಮ್ಮಿಬ್ಬರ ಕುಟುಂಬಕ್ಕೆ, ಸ್ನೇಹಿತರಿಗೆ ನಾನು ಯಾರನ್ನು ಲವ್‌ ಮಾಡ್ತಿದ್ದೀನಿ ಎನ್ನೋದು ಗೊತ್ತಿದೆ ಎಂದು ಸಮೀರ್‌ ಅವರು ಹೇಳೋದು ಸರಿ ಅಲ್ಲ ಎಂದು ಸ್ಯಾಮ್‌ ಸಮೀರ್‌ ಹೇಳಿದ್ದಾರೆ.

ಮದುವೆ ಯಾವಾಗ?

ನಾನು ಯಾವಾಗ ಆ ಹುಡುಗಿಯ ಮುಖವನ್ನು ರಿವೀಲ್‌ ಮಾಡಬಹುದೋ? ಯಾವಾಗ ನನಗೆ ಅನುಮತಿ ಸಿಗತ್ತೋ? ಯಾವಾಗ ಮದುವೆ ಡೇಟ್‌ ಫಿಕ್ಸ್‌ ಆಗುತ್ತೋ ಅಂದು ಮುಖ ರಿಈಲ್‌ ಮಾಡ್ತೀನಿ ಎಂದು ಸ್ಯಾಮ್‌ ಸಮೀರ್‌ ಅವರು ಹೇಳಿದ್ದಾರೆ.

ಮುಖ ತೋರಿಸದೆ ವ್ಲಾಗ್‌ ಮಾಡೋದು ಯಾಕೆ?

ಹತ್ತು ವರ್ಷದ ಬಳಿಕ ಕೂಡ ಈ ಕ್ಷಣವನ್ನು ನೆನಪು ಇಟ್ಟುಕೊಳ್ಳಬೇಕು ಎಂದು ನಾನು ವ್ಲಾಗ್‌ ಮಾಡಿ, ಮುಖ ಬ್ಲರ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದೇನೆ. ಎಲ್ಲದಕ್ಕಿಂತ ಜಾಸ್ತಿ ಇದು ನನ್ನ ಜರ್ನಿ ಎಂದು ಸ್ಯಾಮ್‌ ಸಮೀರ್‌ ಹೇಳಿದ್ದಾರೆ.

ಈ ಹಿಂದೆ ಬ್ರೇಕಪ್‌ ಆಗಿತ್ತು

ಈ ಹಿಂದೆ ಸ್ಯಾಮ್‌ ಸಮೀರ್‌ ಅವರು ಇನ್ನೊಬ್ಬ ಯುಟ್ಯೂಬರ್‌ ಜೊತೆ ಲವ್‌ನಲ್ಲಿದ್ದರು. ಆಮೇಲೆ ಇವರಿಬ್ಬರು ಬ್ರೇಕಪ್‌ ಮಾಡಿಕೊಂಡಿದ್ದರು. ಈ ಬಗ್ಗೆ ಇವರು ಎಂದೂ ಅವರ ಹೆಸರು ಹೇಳದೆ, ಬ್ರೇಕಪ್‌ ಕಾರಣವನ್ನು ಹೇಳಿಲ್ಲ, ಆದರೆ ಬ್ರೇಕಪ್‌ ಆಗಿದೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *