Headlines

ಪ್ರಾಣಿಗಳಿಗಿದೆ, ಮನುಷ್ಯರಿಗೇಕಿಲ್ಲ ಮಿಲನಕ್ಕೊಂದು (mating season) ಪ್ರತ್ಯೇಕ ಕಾಲ? | Why There Is No Mating Season For Humans Bni

ಪ್ರಾಣಿಗಳಿಗಿದೆ, ಮನುಷ್ಯರಿಗೇಕಿಲ್ಲ ಮಿಲನಕ್ಕೊಂದು (mating season) ಪ್ರತ್ಯೇಕ ಕಾಲ? | Why There Is No Mating Season For Humans Bni



ಪ್ರಾಣಿಗಳಿಗಿದೆ, ಮನುಷ್ಯರಿಗೇಕಿಲ್ಲ ಮಿಲನಕ್ಕೊಂದು (mating season) ಪ್ರತ್ಯೇಕ ಕಾಲ? | Why There Is No Mating Season For Humans Bni

ಹೆಚ್ಚಿನ ಪ್ರಾಣಿಗಳಿಗೆ ನಿರ್ದಿಷ್ಟ ಮಿಲನದ ಕಾಲ ಅಥವ ಮೇಟಿಂಗ್‌ ಸೀಸನ್ ಇದ್ದರೆ, ಮಾನವರು ವರ್ಷಪೂರ್ತಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ. ಕುತೂಹಲ ಇದ್ದರೆ ಮುಂದೆ ಓದಿ. 

ಹೆಚ್ಚಿನ ಪ್ರಾಣಿಗಳಿಗೆ ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಸಂಭೋಗ ಮತ್ತು ಸಂತಾನೋತ್ಪತ್ತಿ ನಡೆಯುತ್ತದೆ. ಉದಾಹರಣೆಗೆ ಜಿಂಕೆಗಳಲ್ಲಿ ಅದಕ್ಕೇ ಸೂಕ್ತ ಋತು ಕಾಲ ಇರುತ್ತದೆ. ಕೆಲವು ಪ್ರಾಣಿಗಳು ವಸಂತ ಋತುವಿನಲ್ಲಿ ಮಾತ್ರ ಜೋಡಿಯಾಗುತ್ತವೆ. ಆದರೆ ಮಾನವರಲ್ಲಿ ಇಂತಹ ಒಂದು ನಿಗದಿತ ಮಿಲನ ಕಾಲ (mating season) ಇಲ್ಲ. ಮನುಷ್ಯರು ವರ್ಷದಲ್ಲಿ ಯಾವ ಸಮಯದಲ್ಲಾದರೂ ಸಂತಾನೋತ್ಪತ್ತಿ ಮಾಡಲು ಸಾಮರ್ಥ್ಯ ಹೊಂದಿದ್ದಾರೆ. ಇದು ಯಾಕೆ ಹೀಗಿದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ಜೀವಶಾಸ್ತ್ರದಲ್ಲಿ “ಮೇಟಿಂಗ್ ಸೀಸನ್” ಎಂದರೆ ಪ್ರಾಣಿಗಳು ವರ್ಷದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಸಂಭೋಗ ಮಾಡುವ ಅವಧಿ. ಆ ಸಮಯದಲ್ಲಿ ಹೆಣ್ಣು ಪ್ರಾಣಿಗಳು ಗರ್ಭಧಾರಣೆಗೆ ಸಿದ್ಧವಾಗುತ್ತವೆ ಮತ್ತು ಗಂಡು ಪ್ರಾಣಿಗಳು ಜೋಡಿ ಹುಡುಕುತ್ತವೆ. ಇದರಿಂದಾಗಿ ಮರಿ ಜನಿಸುವ ಸಮಯವೂ ಪ್ರಕೃತಿಗೆ ಅನುಕೂಲಕರವಾಗಿರುತ್ತದೆ. ಉದಾಹರಣೆಗೆ: ವಸಂತದಲ್ಲಿ ಕುರಿಮರಿ ಜನಿಸುವುದು, ಬೇಸಿಗೆಯಲ್ಲಿ ಜಿಂಕೆ ಮರಿಗಳು ಹುಟ್ಟುವುದು. ಕೆಲವು ಪ್ರಾಣಿಗಳಲ್ಲಿ ಚಳಿಗಾಲದ ಕೊನೆಯಲ್ಲಿ ಸಂತಾನೋತ್ಪತ್ತಿ.

ಆದರೆ ಮಾನವರು ಈ ಮಾದರಿಯಲ್ಲಿ ಸೇರುವುದಿಲ್ಲ. ಮಾನವರು “continuous breeders” ಎಂದು ಕರೆಯಲ್ಪಡುವ ವರ್ಗಕ್ಕೆ ಸೇರಿದ್ದಾರೆ. ಅಂದರೆ ವರ್ಷಪೂರ್ತಿ ಸಂತಾನೋತ್ಪತ್ತಿ ಸಾಧ್ಯ. ಮಾನವ ಮಹಿಳೆಯರಲ್ಲಿ ಸಾಮಾನ್ಯವಾಗಿ ಪ್ರತಿ 28 ದಿನಗಳಿಗೊಮ್ಮೆ ಅಂಡೋತ್ಪತ್ತಿ (ovulation) ನಡೆಯುತ್ತದೆ. ಪುರುಷರಲ್ಲಿ ವೀರ್ಯಕಣಗಳು ನಿರಂತರವಾಗಿ ಉತ್ಪತ್ತಿಯಾಗುತ್ತವೆ. ಇದರಿಂದ ವರ್ಷಪೂರ್ತಿ ಗರ್ಭಧಾರಣೆ ಸಾಧ್ಯವಾಗುತ್ತದೆ.

ಗುಪ್ತ ಅಂಡೋತ್ಪತ್ತಿ ಒಂದು ಕಾರಣ

ಮಾನವರಿಗೆ ಸಂಗಮ ಕಾಲ ಇಲ್ಲದಿರುವುದಕ್ಕೆ ಪ್ರಮುಖ ಕಾರಣವೆಂದರೆ “concealed ovulation” ಅಥವಾ ಗುಪ್ತ ಅಂಡೋತ್ಪತ್ತಿ. ಬಹುತೇಕ ಪ್ರಾಣಿಗಳಲ್ಲಿ ಹೆಣ್ಣು ಪ್ರಾಣಿಗಳು ಗರ್ಭಧಾರಣೆಗೆ ಸಿದ್ಧವಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಉದಾಹರಣೆಗೆ: ಮರ್ಮಾಂಗದಲ್ಲಿ ಉಬ್ಬಿಕೊಳ್ಳುವಿಕೆ, ಮೈವಾಸನೆ ಬದಲಾವಣೆ, ವರ್ತನೆಯಲ್ಲಿ ಬದಲಾವಣೆ ಇತ್ಯಾದಿ. ಈ ಸಂಕೇತಗಳನ್ನು ಕಂಡು ಗಂಡು ಪ್ರಾಣಿಗಳು ಆ ಸಮಯದಲ್ಲಿ ಸಂಭೋಗ ಮಾಡುತ್ತವೆ.

ಆದರೆ ಮಾನವ ಮಹಿಳೆಯರಲ್ಲಿ ಗರ್ಭಧಾರಣೆಗೆ ಸಿದ್ಧವಾಗಿರುವುದನ್ನು ಹೊರಗೆ ಕಂಡುಹಿಡಿಯುವ ಸ್ಪಷ್ಟ ಸಂಕೇತಗಳಿಲ್ಲ. ಇದನ್ನು ವಿಕಾಸದ ಒಂದು ವಿಶೇಷ ಗುಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರಿಂದ ಸಂಭೋಗವು ಕೇವಲ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗದೆ, ದೀರ್ಘಕಾಲದ ಜೋಡಿ ಸಂಬಂಧ ಮತ್ತು ಸಾಮಾಜಿಕ ಸಹಕಾರವನ್ನು ಬಲಪಡಿಸುವತ್ತ ಬೆಳೆಯಿತು.

ಆದರೂ ಕೆಲವು ಋತು ಮಾದರಿಗಳು ಕಾಣುತ್ತವೆ

ಮಾನವರಿಗೆ ನಿಗದಿತ ಸಂಗಮ ಕಾಲ ಇಲ್ಲದಿದ್ದರೂ, ಕೆಲವು ಸಂಶೋಧನೆಗಳು ಜನನಗಳಲ್ಲಿ ಸಣ್ಣ ಮಟ್ಟದ ಋತು ಮಾದರಿಗಳು ಇರುವುದನ್ನು ತೋರಿಸಿವೆ. ಒಂದು ವಿಮರ್ಶಾ ಅಧ್ಯಯನದ ಪ್ರಕಾರ, ಹಲವಾರು ದೇಶಗಳಲ್ಲಿ ಜನನಗಳ ಸಂಖ್ಯೆ ಕೆಲವು ಸಮಯಗಳಲ್ಲಿ ಹೆಚ್ಚಾಗುತ್ತದೆ. ಇದಕ್ಕೆ ಕಾರಣಗಳು ಅಲ್ಲಿನ ತಾಪಮಾನ, ಆಹಾರ ಲಭ್ಯತೆ, ದಿನದ ಉದ್ದ ಇತ್ಯಾದಿ. ಇವುಗಳು ಕೆಲ ಮಟ್ಟಿಗೆ ಮಾನವರ ಹಾರ್ಮೋನ್ ಮತ್ತು ವರ್ತನೆಗೆ ಪ್ರಭಾವ ಬೀರುತ್ತವೆ. ಆದರೆ ಇದರರ್ಥ ಮಾನವರಿಗೆ ನಿಗದಿತ ಸಂಗಮ ಕಾಲ ಇದೆ ಎಂಬುದಲ್ಲ. ವರ್ಷಪೂರ್ತಿ ಗರ್ಭಧಾರಣೆ ಸಾಧ್ಯವಾಗುತ್ತದೆ.

ಸಂಸ್ಕೃತಿ ಕೂಡ ದೊಡ್ಡ ಪಾತ್ರ ವಹಿಸುತ್ತದೆ

ಮಾನವ ಸಂತಾನೋತ್ಪತ್ತಿ ಸಮಯವನ್ನು ಕೇವಲ ಜೀವಶಾಸ್ತ್ರವೇ ನಿರ್ಧರಿಸುವುದಿಲ್ಲ. ಸಂಸ್ಕೃತಿ ಮತ್ತು ಜೀವನಶೈಲಿಯೂ ದೊಡ್ಡ ಪಾತ್ರ ವಹಿಸುತ್ತವೆ. ಅನೇಕ ದೇಶಗಳಲ್ಲಿ ಗಮನಿಸಿದರೆ, ಕೆಲವು ಹಬ್ಬಗಳ ನಂತರ ಜನನಗಳ ಸಂಖ್ಯೆ ಹೆಚ್ಚಾಗುತ್ತದೆ. ಉದಾಹರಣೆಗೆ ಕ್ರಿಸ್ಮಸ್, ಹೊಸ ವರ್ಷ, ಪ್ರೇಮಿಗಳ ದಿನ ಹೀಗೆ. ಈ ಸಮಯಗಳಲ್ಲಿ ಜನರಿಗೆ ಹೆಚ್ಚು ವಿಶ್ರಾಂತಿ ಮತ್ತು ವೈಯಕ್ತಿಕ ಸಮಯ ಸಿಗುತ್ತದೆ. ಇದರಿಂದ ಗರ್ಭಧಾರಣೆ ಸಾಧ್ಯತೆ ಹೆಚ್ಚಾಗುತ್ತದೆ.

2017ರಲ್ಲಿ ಸೈಂಟಿಫಿಕ್‌ ರಿಪೋರ್ಟ್‌ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ಕೂಡ ಇದನ್ನೇ ಸೂಚಿಸಿದೆ. ಸಂಶೋಧಕರು ಇಂಟರ್‌ನೆಟ್‌ನಲ್ಲಿ ಲೈಂಗಿಕ ವಿಷಯಗಳ ಹುಡುಕಾಟ ಮತ್ತು ಜನರ ಮನೋಭಾವವನ್ನು ವಿಶ್ಲೇಷಿಸಿದರು. ಅದರ ಪ್ರಕಾರ, ಲೈಂಗಿಕ ಆಸಕ್ತಿ ಹೆಚ್ಚಾಗುವ ಸಮಯಗಳು ಸಾಮಾನ್ಯವಾಗಿ ಹಬ್ಬಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ಜೊತೆ ಹೊಂದಿಕೆಯಾಗುತ್ತವೆ.

ವರ್ಷಪೂರ್ತಿ ಸಂತಾನೋತ್ಪತ್ತಿ ಯಾಕೆ?

ವಿಜ್ಞಾನಿಗಳ ಪ್ರಕಾರ ಮಾನವರಿಗೆ ವರ್ಷಪೂರ್ತಿ ಸಂತಾನೋತ್ಪತ್ತಿ ಸಾಧ್ಯವಾಗಿರುವುದು ಕೆಲವು ಪ್ರಮುಖ ಕಾರಣಗಳಿಂದ.

1. ಮಾನವ ಮಕ್ಕಳಿಗೆ ಹೆಚ್ಚು ಆರೈಕೆ ಬೇಕು. ಮಾನವ ಶಿಶುಗಳು ಬಹಳ ಅವಲಂಬಿತವಾಗಿರುತ್ತವೆ. ಕುದುರೆ ಅಥವಾ ಆನೆ ಮರಿಗಳು ಹುಟ್ಟಿದ ತಕ್ಷಣವೇ ನಡೆಯಲು ಸಾಧ್ಯ. ಆದರೆ ಮಾನವ ಮಕ್ಕಳಿಗೆ ಹಲವಾರು ವರ್ಷಗಳ ಆರೈಕೆ ಬೇಕಾಗುತ್ತದೆ. ಆದ್ದರಿಂದ ದೀರ್ಘಕಾಲದ ಜೋಡಿ ಸಂಬಂಧ ಮತ್ತು ಒಟ್ಟಾಗಿ ಮಕ್ಕಳನ್ನು ಬೆಳೆಸುವ ವ್ಯವಸ್ಥೆ ಮಾನವರಿಗೆ ಹೆಚ್ಚು ಉಪಯುಕ್ತವಾಯಿತು.

2. ಪರಿಸರದ ಮೇಲೆ ಕಡಿಮೆ ಅವಲಂಬನೆ. ಅನೇಕ ಕಾಡು ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಆಹಾರ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಮಾನವರು ಅಭಿವೃದ್ಧಿಪಡಿಸಿದ ಕೆಲವು ವ್ಯವಸ್ಥೆಗಳು ಈ ಒತ್ತಡವನ್ನು ಕಡಿಮೆ ಮಾಡಿವೆ: ಮನೆಗಳು, ಬೆಂಕಿ ಬಳಕೆ, ಕೃಷಿ, ಆಹಾರ ಸಂಗ್ರಹ ಇವುಗಳಿಂದ ವರ್ಷಪೂರ್ತಿ ಬದುಕಲು ಸಾಧ್ಯವಾಗುತ್ತದೆ.

3. ಸಾಮಾಜಿಕ ಸಂಬಂಧಗಳು. ಮಾನವರಲ್ಲಿ ಜಟಿಲ ಸಾಮಾಜಿಕ ವ್ಯವಸ್ಥೆ ಇದೆ. ದೀರ್ಘಕಾಲದ ಸಂಬಂಧಗಳು ಮತ್ತು ಕುಟುಂಬ ವ್ಯವಸ್ಥೆ ಮಕ್ಕಳನ್ನು ಬೆಳೆಸಲು ಅನುಕೂಲಕರವಾಗಿವೆ. ಇದರಿಂದ ನಿಗದಿತ ಸಂಗಮ ಕಾಲದ ಅವಶ್ಯಕತೆ ಕಡಿಮೆಯಾಯಿತು.

ಮಾನವರು ಮಾತ್ರವಲ್ಲ

ಮಾನವರು ಮಾತ್ರವೇ ಹೀಗಿಲ್ಲ. ಕೆಲವು ಇತರ ಕಪಿಗಳಲ್ಲಿಯೂ ನಿಗದಿತ ಸಂಗಮ ಕಾಲವಿಲ್ಲ. ಉದಾಹರಣೆಗೆ: ಚಿಂಪಾಂಜಿ, ಬೊನೊಬೊ. ವಿಶೇಷವಾಗಿ ಬೋನೋಬೋಗಳಲ್ಲಿ ಸಂಭೋಗವು ಕೇವಲ ಸಂತಾನೋತ್ಪತ್ತಿಗೆ ಮಾತ್ರವಲ್ಲ, ಸಾಮಾಜಿಕ ಸಂಬಂಧಗಳನ್ನು ಬಲಪಡಿಸಲು ಮತ್ತು ಒತ್ತಡ ಕಡಿಮೆ ಮಾಡಲು ಸಹ ಬಳಸಲಾಗುತ್ತದೆ.



Source link

Leave a Reply

Your email address will not be published. Required fields are marked *