Headlines

ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು.. | Doctors Did Vasectomy To Man Telling He Was Had Boy And Gave Him A Girl Baby

ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು.. | Doctors Did Vasectomy To Man Telling He Was Had Boy And Gave Him A Girl Baby



ಗಂಡು ಮಗು ಆಗಿದೆ ಎಂದು ತಂದೆಗೆ ಸಂತಾನಹರಣ ಚಿಕಿತ್ಸೆ ಮಾಡಿ ಹೆಣ್ಣು ಮಗು ನೀಡಿದ ವೈದ್ಯರು.. | Doctors Did Vasectomy To Man Telling He Was Had Boy And Gave Him A Girl Baby

ವೈದ್ಯರು ತನಗೆ ಗಂಡು ಮಗು ಜನಿಸಿದೆ ಎಂದು ಸುಳ್ಳು ಹೇಳಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಲ ಎಷ್ಟೇ ಮುಂದುವರೆಯಲಿ ಹೆಣ್ಣು ಗಂಡು ಸಮಾನರು ಎಂದು ಎಷ್ಟೇ ಜಾಗೃತಿ ಮೂಡಿಸಲಿ ಗಂಡು ಮಗು ಪಡೆಯಬೇಕು ಎಂಬ ಆಸೆ ಅನೇಕ ಕುಟುಂಬಗಳದ್ದು, ಹೀಗಾಗಿ ಕಾನೂನು ಬಾಹಿರವಾಗಿದ್ದರು ಕದ್ದುಮುಚ್ಚಿ ಭ್ರೂಣ ಹತ್ಯೆಗಳು ನಡೆಯುತ್ತಲೇ ಇರುತ್ತವೆ. ಅದೇನೆ ಇರಲಿ ಆದರೆ ವ್ಯಕ್ತಿಗೆ ಸುಳ್ಳು ಹೇಳಿ ಯಾವುದೇ ಚಿಕಿತ್ಸೆಯನ್ನು ಯಾವುದೇ ವೈದ್ಯರು ನೀಡುವಂತಿಲ್ಲ, ಆದರೆ ಇಲ್ಲೊಂದು ಕಡೆ ವೈದ್ಯರು ಗಂಡು ಮಗು ಆಗಿದೆ ಎಂದು ಹೇಳಿ ತನಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದರು ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಳು ಹೇಳಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಆರೋಪ:

ಮಗು ಹೆಣ್ಣೆ ಇರಲಿ ಗಂಡೇ ಇರಲಿ ಮಗು ಮಗುವೇ, ಆದರೂ ಗಂಡು ಮಗು ಕುಲ ಉದ್ಧಾರಕ ವಂಶವನ್ನು ಬೆಳೆಸುವವನು, ಮೋಕ್ಷಕ್ಕೆ ಕಾರಣವಾಗುವವನು ಎಂಬ ನಂಬಿಕೆ ಅನೇಕರಲಿದೆ. ಇದೇ ಕಾರಣಕ್ಕೆ ಒಂದು ಗಂಡು ಮಗು ಜನಿಸುವವರೆಗೂ ಕೆಲವರು ಮಕ್ಕಳು ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲವರು ಗಂಡಿರಲಿ ಹೆಣ್ಣಿರಲಿ ಎರಡು ಅಥವಾ ಒಂದು ಮಗು ಸಾಕು ಎಂಬ ಚಿಂತನೆಯವರಾಗಿದ್ದರೆ ಗಂಡು ಮಗುವೊಂದು ಬೇಕೆ ಬೇಕು ಎಂಬುದು ಅನೇಕರ ಒತ್ತಾಸೆ.

ಆದರೆ ಸುಳ್ಳು ಹೇಳಿ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡುವ ಹಕ್ಕು ಯಾರಿಗೂ ಇಲ್ಲ, ಆದರೆ ಇಲ್ಲೊಂದು ಕಡೆ ವೈದ್ಯರು ತಮಗೆ ಜನಿಸಿದ ಹೆಣ್ಣು ಮಗುವನ್ನು ಗಂಡು ಮಗು ಎಂದು ಹೇಳಿ ತನಗೆ ಸಂತಾನಹಣ ಶಸ್ತ್ರಚಿಕಿತ್ಸೆ ಮಾಡಿಸಿದರು ಎಂದು ಮಗುವಿನ ತಂದೆ ಅರೋಪಿಸಿದ್ದಾರೆ. ಗಂಡು ಮಗು ಎಂದು ಹೇಳಿದ ಕಾರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆ ಎಂದು ಅವರು ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಅವರು ಮಾತನಾಡುತ್ತಿದ್ದು, ಬಹುಶಃ ಉತ್ತರ ಭಾರತದಲ್ಲಿ ನಡೆದ ಘಟನೆಯಂತೆ ಕಾಣುತ್ತಿದೆ. ಆದರೆ ಈ ಘಟನೆ ನಡೆದಿದ್ದು ಎಲ್ಲಿ ಎಂಬ ಬಗ್ಗೆ ಮಾಹಿತಿ ಇಲ್ಲ.

ಇದನ್ನೂ ಓದಿ: ಅತ್ತಿಗೆ ನಾದಿನಿ ಕಲಹ: ಸೋದರನ ಬಿಡುಗಡೆಗೆ ಜತೆಯಾಗಿ ಕೆಲಸ ಮಾಡುವಂತೆ ಸೆಲೀನಾ ಜೇಟ್ಲಿ, ಅತ್ತಿಗೆಗೆ ಸೂಚಿಸಿದ ಕೋರ್ಟ್

ಆದರೆ ವೀಡಿಯೋ ನೋಡಿದ ಅನೇಕರು ಮಿಶ್ರ ಪತ್ರಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವನ ಮಗುವಿನ ಲಿಂಗ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವನ ನಿರ್ಧಾರಕ್ಕೆ ಯಾವುದೇ ಸಂಬಂಧವಿರಬಾರದು. ನಾವು ಒಂದು ಸಮಾಜವಾಗಿ ಯಾವಾಗ ವಿಕಸನಗೊಳ್ಳುತ್ತೇವೆ? ಇಷ್ಟೆಲ್ಲಾ ಹೇಳಿದ ಮೇಲೆ, ಆಸ್ಪತ್ರೆ ಮತ್ತು ವೈದ್ಯರು ಮೋಸ ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಚೆನ್ನಾಗಿ ಶಿಕ್ಷಣ ಕೊಡಿ ಅವರು ನಿಮಗೆ ವೃದ್ದಾಪ್ಯದಲ್ಲಿ ಆಶ್ರಯ ನೀಡುತ್ತಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಆ ವ್ಯಕ್ತಿ ಆಸ್ಪತ್ರೆ ವಿರುದ್ಧ ದೂರು ಕೊಡಬೇಕು ಇದು ತಮಾಷೆ ವಿಚಾರ ಅಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕೊಲೆಯಾದ ಪತ್ನಿ ಜೀವಂತವಾಗಿ ಪತ್ತೆ: ಆಧಾರ್‌ ಕಾರ್ಡ್ ಅಪ್‌ಡೇಟ್ ನೀಡಿತ್ತು ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಅವರಿಗೆ ತಪ್ಪು ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವೈದ್ಯಕೀಯ ಕಾನೂನಿನ ಪ್ರಕಾರ ಇದು ತಪ್ಪು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಅನೇಕರು ಎಲ್ಲಾ ಕಡೆ ಇಂತಹ ವೈದ್ಯರೇ ಇರಬೇಕು. ವೈದ್ಯರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ವೈದ್ಯರು ಯಾವುದೇ ರೋಗಿಗೆ ಅನುಮತಿ ಇಲ್ಲದೇ ಅಥವಾ ಸುಳ್ಳು ಮಾಹಿತಿ ನೀಡಿ ಶಸ್ತ್ರಚಿಕಿತ್ಸೆ ನಡೆಸುವಂತಿಲ್ಲ.



Source link

Leave a Reply

Your email address will not be published. Required fields are marked *