Headlines

ಜೈಲಿನಿಂದ ಹೊರ ಬರ್ತಾರಾ ದರ್ಶನ್? ಬರ್ತ್‌ಡೇಗೂ ಮುನ್ನ ಫ್ಯಾನ್ಸ್ ಮಾಡೋ ಆ ಕೆಲಸದಿಂದಾಗುತ್ತಾ ಪವಾಡ? | Will Darshan Be Released From Jail Soon Fans Perform Special Pujas Ahead Of His Birthday Kvn

ಜೈಲಿನಿಂದ ಹೊರ ಬರ್ತಾರಾ ದರ್ಶನ್? ಬರ್ತ್‌ಡೇಗೂ ಮುನ್ನ ಫ್ಯಾನ್ಸ್ ಮಾಡೋ ಆ ಕೆಲಸದಿಂದಾಗುತ್ತಾ ಪವಾಡ? | Will Darshan Be Released From Jail Soon Fans Perform Special Pujas Ahead Of His Birthday Kvn



ಜೈಲಿನಿಂದ ಹೊರ ಬರ್ತಾರಾ ದರ್ಶನ್? ಬರ್ತ್‌ಡೇಗೂ ಮುನ್ನ ಫ್ಯಾನ್ಸ್ ಮಾಡೋ ಆ ಕೆಲಸದಿಂದಾಗುತ್ತಾ ಪವಾಡ? | Will Darshan Be Released From Jail Soon Fans Perform Special Pujas Ahead Of His Birthday Kvn

ದರ್ಶನ್ ಜೈಲಿನಿಂದ ಶೀಘ್ರದಲ್ಲೇ ಹೊರಬರಲಿ ಎಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷ ಹೋಮ, ಹವನ ಹಾಗೂ ಪೂಜೆಗಳನ್ನು ಆಯೋಜಿಸಿದ್ದಾರೆ. ಜುಲೈ ಅಥವಾ ಆಗಸ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ವಕೀಲರು ಹೇಳಿದ್ದು, ಅಭಿಮಾನಿಗಳ ಪ್ರಾರ್ಥನೆ ಫಲಿಸುತ್ತದೆಯೇ ಕಾದುನೋಡಬೇಕಿದೆ.

ನಟ ದರ್ಶನ್ ಜೈಲುವಾಸಕ್ಕೆ ಎಳ್ಳು ನೀರು ಬಿಡೋ ಟೈಮ್ ಬಂದೇ ಬಿಡ್ತಾ? ಇಂತದ್ದೊಂದು ಸುದ್ದಿ ದಾಸನ ಹುಟ್ಟುಹಬ್ಬದ ಸಮಯದಲ್ಲೇ ಫ್ಯಾನ್ಸ್​​ ಕಿವಿಗೆ ಕೇಳಿಸುತ್ತಿದ್ದೆ. ದರ್ಶನ್​ ಜೈಲಿನಿಂದ ಹೊರ ಬಂದ್ರೆ ಅದಕ್ಕೆ ಕಾರಣ ಫ್ಯಾನ್ಸ್ ಮಾಡುತ್ತಿರೋ ಆ ಕೆಲಸ. ಹಾಗಾದ್ರೆ ದರ್ಶನ್ ಫ್ಯಾನ್ಸ್ ಮಾಡೋಕೆ ಹೊರಟಿರೋ ಆ ಕೆಲಸ ಏನು? ಇದರಿಂದಲೇ ಕಾಟೇರನ ಜೈಲು ವಾಸದ ಅಂತ್ಯಕ್ಕೆ ಕಾಲ ಕೂಡಿ ಬಂದಿದೆಯಾ? ನೋಡೋಣ ಬನ್ನಿ.

ಜೈಲಿನಿಂದ ಹೊರ ಬರುತ್ತಾರಾ ದರ್ಶನ್?

ನಟ ದರ್ಶನ್​ ಮೈ ಕೈ ಜಡ್ಡುಗಟ್ಟಿದೆ. ಮಂಡೆ ಬಿಸಿಯಾಗಿದೆ. ನಾಲ್ಕು ಗೋಡೆ ಮಧ್ಯೆ ಇದ್ದು ಈ ಜೀವನವೇ ಸಾಕು ಸಾಕಪ್ಪಾ ಎಂದೆನಿಸಿರುತ್ತೆ. ಇದ್ರೆ ನೆಮ್ದಿಯಾಗ್ ಇರಬೇಕು. ಆದ್ರೆ ಅದು ಜೈಲಲ್ಲಲ್ಲ. ಸಮಾಜದಲ್ಲಿ ಅಂತ ದಾಸನ ಮನಸ್ಸು ಪ್ರತಿದಿನ ತನಗೆ ತಾನೇ ಹೇಳಿಕೊಂಡಿರುತ್ತೆ. ಈಗ ಅಂತದ್ದೊಂದು ದಿನಗಳು ಬಂದಂತಿದೆ. ಯಾಕಂದ್ರೆ ದರ್ಶನ್ ಜೈಲಿನಿಂದ ಹೊರ ಬರೋ ನಿರೀಕ್ಷೆ ಇದೆ ಅಂತ ಅವರ ವಕೀಲರು ಹೇಳುತ್ತಿದ್ದಾರೆ.

ಒಂದ್​ ಕಡೆ ದರ್ಶನ್‌ಗೆ ಬೇಲ್​ ಆಗುತ್ತೆ ಅನ್ನೋ ಮಾತುಗಳು. ಇದೇ ಟೈಮ್​ನಲ್ಲಿ ದಾಸನ ಬರ್ತ್​ಡೇ ಬೇರೆ ಬಂದ್​ ಬಿಟ್ಟಿದೆ. ಫೆಬ್ರವರಿ ಅಂದ್ರೆ ನಟ ದರ್ಶನ್ ಫ್ಯಾನ್ಸ್ ಅಂಗಳಲ್ಲಿ ಸಂಭ್ರಮ. ಯಾಕಂದ್ರೆ ಫೆಬ್ರವರಿ 16ಕ್ಕೆ ದರ್ಶನ್‌ಗೆ ಹುಟ್ಟು ಹಬ್ಬ. ಈಗ ದರ್ಶನ್ ಜೈಲಿನಲ್ಲಿದ್ರೂ ಅಭಿಮಾನಿಗಳು ದಾಸನ ಜನ್ಮದಿನವನ್ನ ಜನಮೆಚ್ಚುವಂತೆ ಮಾಡೋ ಪ್ಲಾನ್ ಮಾಡಿದ್ದಾರೆ.

ಫಲಿಸುತ್ತಾ ದಚ್ಚು ಫ್ಯಾನ್ಸ್ ಪೂಜಾ ಫಲ?

ಅತ್ತ ದರ್ಶನ್ ಜೈಲಲ್ಲಿದ್ರೆ ಇತ್ತ ಅಭಿಮಾನಿಗಳು ಹುಟ್ಟುಹಬ್ಬವನ್ನು ಹಬ್ಬದಂತೇ ಆಚರಿಸೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಫೆಬ್ರವರಿ 16ಕ್ಕೆ ದರ್ಶನ್ 49ನೇ ವರ್ಷಕ್ಕೆ ಕಾಲಿಡುತ್ತಾರೆ. ನಮ್ ಬಾಸ್​ ಜೈಲಿನಲ್ಲಿದ್ರೇನಂತೆ ದಾಸ ಬೇಗ ಹೊರ ಬರಲಿ ಅಂತ ದಚ್ಚು ಭಕ್ತಗಣ ಹೋಮ ಹವನ ಮಾಡುತ್ತಿದ್ದಾರೆ.

ದಾಸನಿಗಾಗಿ ನವಗ್ರಹ ಶಾಂತಿ, ಮೃತ್ಯುಂಜಯ ಹೋಮ..!

ಜೆ.ಪಿ ನಗರದ ಪುಟ್ಟೇನಹಳ್ಳಿಯ ನಂಜುಡೇಶ್ವರ ದೇವಾಲದಲ್ಲಿ ಫೆ.14 ರಂದು ದರ್ಶನ್​​ ಜೈಲಿನಿಂದ ಹೊರಬರಲೆಂದು ನವಗ್ರಹ ಶಾಂತಿ, ಮೃತ್ಯುಂಜಯ ಹೋಮ, ಗಣಪತಿ ಹೋಮ, ದುರ್ಗಾ ಹೋಮ ಮಾಡಿಸುತ್ತಿದ್ದಾರೆ ಫ್ಯಾನ್ಸ್. ಅಷ್ಟೆ ಅಲ್ಲ ಫೆ.15 ರಂದು ನಂಜುಂಡೇಶ್ವರನಿಗೆ ರುದ್ರಾಭಿಷೇಕ ದರ್ಶನ್ ಕುಟುಂಬದ ಹೆಸರಲ್ಲಿ ಸಂಕಲ್ಪ ಮಾಡಿಸಿ ಇಡೀ ದಿನ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅವಲಕ್ಕಿ ಪ್ರಸಾದ ವಿತರಣೆ ಆಗಲಿದೆ. ಹಾಗೆ ದರ್ಶನ್ ಹುಟ್ಟುಹಬ್ಬದ ದಿನ ಅಂದ್ರೆ ಫೆಬ್ರವರಿ 16ಕ್ಕೆ ಮತ್ತೆ ನಂಜುಂಡೇಶ್ವರಿನಿಗೆ ವಿಶೇಷ ಪೂಜೆ ಮಾಡಿಸಿ 10 ಸಾವಿರ ಜನಕ್ಕೆ ಅನ್ನದಾನ ಮಾಡಲು ತಯಾರಿ ಮಾಡುತ್ತಿದ್ದಾರೆ ಫ್ಯಾನ್ಸ್.

ಇನ್ನೂ ದರ್ಶನ್ ನಟನೆಯ ಕರಿಯ ಸಿನಿಮಾವನ್ನ ದರ್ಶನ್ ಬರ್ತ್​ ಡೇ ಪ್ರಯುಕ್ತ ಮರು ಬಿಡುಗಡೆ ಕೂಡ ಮಾಡಲಾಗಿದೆ. ಕರಿಯನ ಹುಟ್ಟುಹಬ್ಬದ ದಿನ ಫ್ಯಾನ್ಸ್ ಥಿಯೇಟರ್ ಅಂಗಳದಲ್ಲಿ ಕೆಂಚಾಲೋ ಮಂಚಾಲೋ ಅಂತ ಕುಣೀತಾ ಸೆಲೆಬ್ರೇಟ್ ಮಾಡೋ ಚಾನ್ಸ್ ಕೂಡ ಸಿಕ್ಕಿದೆ. ಒಂದ್​ ಕಡೆ ದರ್ಶನ್ ಹುಟ್ಟುಹಬ್ಬ. ಮತ್ತೊಂದ್ ಕಡೆ ದಾಸನ ಒಳಿತಿಗಾಗಿ ಫ್ಯಾನ್ಸ್ ಹೋಮ ಹವನ ಮಾಡುತ್ತಿದ್ದಾರೆ. ಇದರ ಮಧ್ಯೆ ವಕೀಲರು ಜುಲೈ, ಆಗಸ್ಟ್​ನಲ್ಲಿ ದರ್ಶನ್‌ಗೆ ಬೇಲ್ ಸಿಗೋ ಸಾಧ್ಯತೆ ಇದೆ ಅಂತ ಹೇಳ್ತಾ ಇದ್ದಾರೆ,

ಹೌದು ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆ ಮುಗೀತಾ ಇದ್ದ ಹಾಗೆ , ಆರೋಪಿಗಳು ಮತ್ತೆ ಕೋರ್ಟ್​ ಮುಂದೆ ಜಾಮೀನು ಕೊಡಿ ಅಂತ ಅರ್ಜಿ ಸಲ್ಲಿಕೆ ಮಾಡಬಹುದು. ಯಾಕಂದ್ರೆ ಆಗಲೇ ಸಾಕ್ಷಿಗಳ ಹೇಳಿಕೆ ಕೋರ್ಟ್ ಎದುರು ಹೇಳಿಯಾಗಿರುತ್ತೆ. ಅದು ದಾಖಲೆಯೂ ಆಗಿರುತ್ತೆ. ಸೋ ಆರೋಪಿ ಹೊರಬಂದು ಅದನ್ನ ಬದಲಾಯಿಸೋದಕ್ಕೆ ಆಗೋದಿಲ್ಲ. ಸೋ ವಿಚಾರಣೆ ಮುಂದುವರೆಸಿ ಆದ್ರೆ ನನಗೆ ಅಲ್ಲಿತನಕ ಬೇಲ್ ಕೊಡಿ ಅಂತ ಧಾರಾಳವಾಗಿ ಅರ್ಜಿ ಸಲ್ಲಿಸಬಹುದು.ಸೋ ಬರ್ತ್​ಡೇ ಟೈಮ್​ನಲ್ಲಿ ಫ್ಯಾನ್ಸ್ ಮಾಡೋ ಪೂಜೆಯ ಫಲ ದರ್ಶನ್​ಗೆ ಸಿಗುತ್ತಾ ಕಾದುನೋಡಬೇಕು.

– ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *