bsnl freedom plan : ಕೇವಲ ಒಂದು ರೂ.ಗೆ ಸಿಗ್ತಿದೆ ಸಿಮ್ ಕಾರ್ಡ್, ಉಚಿತ ಕರೆ ಜೊತೆ 2ಜಿಬಿ ಡೇಟಾ ಫ್ರೀ | Bsnl Offering A New Sim Card And 2gb Of Daily Data For Just One Rupee

bsnl freedom plan : ಕೇವಲ ಒಂದು ರೂ.ಗೆ ಸಿಗ್ತಿದೆ ಸಿಮ್ ಕಾರ್ಡ್, ಉಚಿತ ಕರೆ ಜೊತೆ 2ಜಿಬಿ ಡೇಟಾ ಫ್ರೀ | Bsnl Offering A New Sim Card And 2gb Of Daily Data For Just One Rupee



bsnl freedom plan : ಕೇವಲ ಒಂದು ರೂ.ಗೆ ಸಿಗ್ತಿದೆ ಸಿಮ್ ಕಾರ್ಡ್, ಉಚಿತ ಕರೆ ಜೊತೆ 2ಜಿಬಿ ಡೇಟಾ ಫ್ರೀ | Bsnl Offering A New Sim Card And 2gb Of Daily Data For Just One Rupee

bsnl freedom plan : ಮೊಬೈಲ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ನಿಮ್ಮ ನೆಚ್ಚಿನ ಕಂಪನಿ ಕೇವಲ ಒಂದು ರೂಪಾಯಿಗೆ ಸಿಮ್ ನೀಡ್ತಿದೆ. ಅದ್ರ ಜೊತೆ ಉಚಿತ ಕರೆ, ಡೇಟಾ ಲಾಭವನ್ನೂ ಕಂಪನಿ ನೀಡ್ತಿದೆ. 

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ (BSNL) ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಇಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಿಎಸ್ಎನ್ಎಲ್ ಫ್ರೀಡಂ ಪ್ಲಾನ್ ಮತ್ತೆ ವಾಪಸ್ ಆಗಿರುವ ಬಗ್ಗೆ ಮಾಹಿತಿ ನೀಡಿದೆ. ಬಳಕೆದಾರರ ಬೇಡಿಕೆ ಮೇರೆಗೆ ಈ ಪ್ಲಾನ್ ವಾಪಸ್ ತಂದಿರೋದಾಗಿ ಕಂಪನಿ ಹೇಳಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಅಲ್ಪಾವಧಿಗೆ ಬಳಕೆದಾರರು ಇದ್ರ ಲಾಭ ಪಡೆಯಬಹುದು. ಈ ಅತ್ಯಾಕರ್ಷಕ ಆಫರ್ ನಲ್ಲಿ ಕಂಪನಿ ಕೇವಲ ಒಂದು ರೂಪಾಯಿಗೆ ಹೊಸ ಸಿಮ್ ಕಾರ್ಡ್ ನೀಡುತ್ತಿದೆ. ಗ್ರಾಹಕರು ಕಾಲ್, ಡೇಟಾ ಮತ್ತು ಎಸ್ಎಂಎಸ್ ನಂತಹ ಪ್ರಯೋಜನಗಳನ್ನು ಸಹ ಇದ್ರಲ್ಲಿ ಪಡೆಯಲಿದ್ದಾರೆ.

ಬಿಎಸ್ಎನ್ಎಲ್ ಫ್ರೀಡಂ ಪ್ಲಾನ್ (Freedom Plan)

ಬಿಎಸ್ ಎನ್ ಎಲ್ ಫ್ರೀಡಂ ಪ್ಲಾನ್ ನಲ್ಲಿ ಬಳಕೆದಾರರಿಗೆ ಒಂದು ರೂಪಾಯಿಗೆ ಸಿಮ್ ಸಿಗಲಿದೆ. ಈಗಾಗಲೇ ಬಿಎಸ್ ಎನ್ ಎಲ್ ಸಿಮ್ ಇದ್ದು, ಇನ್ನೊಂದು ಸಿಮ್ ಬೇಕು ಎನ್ನುವವರು ಕೂಡ ಒಂದು ರೂಪಾಯಿಗೆ ಸಿಮ್ ಪಡೆಯಬಹುದು. ನೀವು ಈ ಪ್ಲಾನ್ ಅಡಿ ದೇಶಾದ್ಯಂತ ಯಾವುದೇ ಸಂಖ್ಯೆಗೆ ಅನಿಯಮಿತ ಕರೆ ಮಾಡ್ಬಹುದು. ದಿನಕ್ಕೆ 100 ಎಸ್ಎಂಎಸ್ ಕಳಿಸುವ ಅವಕಾಶ ಸಿಗಲಿದೆ. ಹೊಸ ಸಿಮ್ ಕಾರ್ಡ್ ನೊಂದಿಗೆ 30 ದಿನಗಳವರೆಗೆ 2GB ದೈನಂದಿನ ಡೇಟಾ ನಿಮಗೆ ಸಿಗಲಿದೆ.

ಆಂಡ್ರಾಯ್ಡ್‌ನಲ್ಲಿ ಇನ್ಮುಂದೆ ಐಫೋನ್ ಮಾದರಿಯ ‘ಏರ್‌ಡ್ರಾಪ್’: ಫೈಲ್ ಶೇರಿಂಗ್ ಇನ್ನು ಸಿಂಪಲ್!

ಫ್ರೀಡಂ ಪ್ಲಾನ್ ಆಫರ್ ಎಷ್ಟು ದಿನ ಮಾನ್ಯ?

ಗ್ರಾಹಕರ ಬೇಡಿಕೆಯಿಂದಾಗಿ ಈ ಯೋಜನೆಯನ್ನು ಮರುಸ್ಥಾಪಿಸಲಾಗಿದೆ ಎಂದು ಬಿಎಸ್ ಎನ್ ಎಲ್ ಹೇಳಿದೆ. ಈ ಕೊಡುಗೆ ಏಪ್ರಿಲ್ 30 ರವರೆಗೆ ಮಾನ್ಯವಾಗಿರಲಿದೆ. ಏಪ್ರಿಲ್ 30 ರ ಮೊದಲು ಸಿಮ್ ಕಾರ್ಡ್ ಖರೀದಿಸಿದ್ರೆ ಮಾತ್ರ ನಿಮಗೆ ಒಂದು ರೂಪಾಯಿಗೆ ಸಿಮ್ ಸಿಗಲಿದೆ. ನಿಮ್ಮ ಹತ್ತಿರದ BSNL CSC ಅಥವಾ ಅಧಿಕೃತ ಅಂಗಡಿಗೆ ಭೇಟಿ ನೀಡಬಹುದು. KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮಗೆ ಸಿಮ್ ಕಾರ್ಡ್ ನೀಡಲಾಗುತ್ತದೆ. ಈ ಕೊಡುಗೆ ಆನ್ಲೈನ್ನಲ್ಲಿ ಲಭ್ಯವಿಲ್ಲ. ಸಿಮ್ ಕಾರ್ಡ್ ಆಕ್ವಿವ್ ಆದ ದಿನದಿಂದ 30 ದಿನಗಳವರೆಗೆ ಪ್ಲಾನ್ ಮಾನ್ಯವಾಗಲಿದೆ.

ವಾಟ್ಸಾಪ್ ಹೊಸ ಅಪ್‌ಡೇಟ್: ಚಾಟಿಂಗ್‌ನಲ್ಲೇ AI ಫೋಟೋ ಎಡಿಟಿಂಗ್, ಚಾಟ್ ವರ್ಗಾವಣೆ ಸೇರಿ ಹಲವು ಫೀಚರ್ಸ್ ಲಭ್ಯ!

ಜಿಯೋಗೆ ಟಕ್ಕರ್

ಬಿಎಸ್ ಎನ್ ಎಲ್ ಫ್ರೀಡಂ ಪ್ಲಾನ್ ಕೇವಲ ಒಂದು ರೂಪಾಯಿಗೆ 2ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನೀಡುತ್ತದೆ. ಜಿಯೋದಲ್ಲೀ ಈ ಪ್ಲಾನ್ ಲಭ್ಯವಿದೆ. ಆದ್ರೆ ಜಿಯೋ ಬಳಕೆದಾರರು ಈ ಪ್ಲಾನ್ ಗೆ 349 ರೂಪಾಯಿ ಪಾವತಿಸಬೇಕು. ಜಿಯೋದ 349 ಪ್ಲಾನ್ 28 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಉಚಿತ ಕರೆ, ದಿನಕ್ಕೆ 100 SMS, 2GB ದೈನಂದಿನ ಡೇಟಾ ಮತ್ತು ಅನಿಯಮಿತ 5G ಡೇಟಾವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಜಿಯೋ ಗ್ರಾಹಕರಿಗೆ ಗೂಗಲ್ ಜೆಮಿನಿ ಪ್ರೊ ಪ್ಲಾನ್ ಮತ್ತು ಜಿಯೋ ಹಾಟ್ಸ್ಟಾರ್ಗೆ ಉಚಿತವಾಗಿ ನೀಡುತ್ತಿದೆ.



Source link

Leave a Reply

Your email address will not be published. Required fields are marked *