
ಬಿಗ್ ಬಾಸ್ ಮನೆಯಲ್ಲಿ ಅರಸಿಯಾಗಿ ದಬ್ಬಾಳಿಕೆ ಮಾಡುತ್ತಿದ್ದ ನಿರೂಪಕಿ ಜಾಹ್ನವಿಗೆ ಇದೀಗ ಸಂಕಷ್ಟ ಎದುರಾಗಿದೆ. ಧ್ರುವಂತ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಸೇರಿದಂತೆ ಹಲವು ಸ್ಪರ್ಧಿಗಳು ಆಕೆಯನ್ನು ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದಾರೆ. ಈ ಕಾರಣದಿಂದ ಜಾಹ್ನವಿ ಡೇಂಜರ್ ಜೋನ್‌ಗೆ ತಲುಪಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಿರೂಪಕಿ ಜಾಹ್ನವಿ ಅವರು ಒಂಟಿಗಳ ತಂಡದಲ್ಲಿ ಅರಸಿಯಾಗಿದ್ದಾರೆ. ಆದರೆ, ಎಲ್ಲ ಸಹ ಸ್ಪರ್ಧಿಗಳಿಗೆ ತುಂಬಾ ದಬ್ಬಾಳಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇನ್ನು ತಮಗೆ ಗೊತ್ತಿಲ್ಲದ ವಿಚಾರಗಳಿಗೂ ಸುಖಾಸುಮ್ಮನೆ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದಾರೆ. ಇದೀಗ ಎಲ್ಲರೂ ಟಾರ್ಗೆಟ್ ಮಾಡಿ ನಿರೂಪಕಿ ಜಾಹ್ನವಿಯನ್ನು ಹೊರಗೆ ಕಳುಹಿಸಲು ನಾಮಿನೇಟ್ ಮಾಡಿ ಡೇಂಜರ್ ಜೋನ್‌ಗೆ ಕಳಿಸುತ್ತಿದ್ದಾರೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆ ಮಾಡಲಾದ ಪ್ರೋಮೋದಲ್ಲಿ ನಟ ಧ್ರುವಂತ್ ಜಾಹ್ನವಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದಾದ ನಂತರ ಗಿಲ್ಲಿ ನಟ ಮತ್ತು ಕಾವ್ಯ ಶೈವ ಜೋಡಿ ಬಂದು ಜಾಹ್ನವಿಯವರನ್ನೇ ಎಲಿಮಿನೇಷನ್‌ಗೆ ನಾಮಿನೇಟ್ ಮಾಡುತ್ತಾರೆ. ಇದಕ್ಕೆ ಗಿಲ್ಲಿ ನಟ ಕಾರಣ ಕೊಡುವಾಗ ಯಾವಾಗ ಬೇಕೋ ಅವಾಗ ಜಾಹ್ನವಿ ಚೇಂಜ್ ಆಗುತ್ತಾರೆ ಎಂದು ಹೇಳುತ್ತಾರೆ. ಆಗ ನೀವು ಎಷ್ಟು ಸಾರಿ ಬೇಕೋ ಅಷ್ಟು ಚೇಂಜ್ ಆಗಿ. ಚೇಂಜ್ ಆಗೋದನ್ನು ನೀವು ಹೇಳೋದು ಬೇಡವೆಂದು ಹೇಳುತ್ತಾರೆ. ಇದಾದ ನಂತರ ಗಿಲ್ಲಿ ನಟ ನೀವು ಬೇಕಾದರೆ ಚೇಂಜ್ ಆಗಿ ನಾನು ಆಗೋದಿಲ್ಲ ಎಂದು ಹೇಳಿ ತಿರುಗೇಟು ಕೊಡುತ್ತಾರೆ.
ಇದಾದ ನಂತರ ರಕ್ಷಿತಾ ಶೆಟ್ಟಿ ಬಂದು ಜಾಹ್ನವಿ ಅವರನ್ನೇ ನಾಮಿನೇಟ್ ಮಾಡುತ್ತಾರೆ. ಇದಕ್ಕೆ ಕಾರಣ ಕೊಡುವಾಗ ತಪ್ಪಾಗಿ ಮಾತನಾಡಿ ಫೇಮಸ್ ಆಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಹೀಗಾಗಿ ವಾಪಸ್ ಕಳಿಸುವಂತೆ ನಾಮಿನೇಟ್ ಮಾಡಿದ್ದಕ್ಕೆ ಕೋಪಗೊಂಡಿದ್ದನ್ನು ಹೇಳುತ್ತಾರೆ.