Headlines

Cyclone alert ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ | Ditwah Cylcone Landfall Likely On Nov 30 To Tamil Nadu Andhra Cost Says Imd

Cyclone alert ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ | Ditwah Cylcone Landfall Likely On Nov 30 To Tamil Nadu Andhra Cost Says Imd



Cyclone alert ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ | Ditwah Cylcone Landfall Likely On Nov 30 To Tamil Nadu Andhra Cost Says Imd

ತಮಿಳುನಾಡು-ಆಂಧ್ರ ತೀರಕ್ಕೆ ಅಪ್ಪಳಿಸುತ್ತಿದೆ ದಿತ್ವಾ ಚಂಡಮಾರುತ, ಬೆಂಗಳೂರು-ಕರ್ನಾಟಕ ಮೇಲೂ ಪರಿಣಾಮ, ಬಂಗಾಳ ಕೊಲ್ಲಿಯಲ್ಲಿ ಈ ಚಂಡಮಾರುತ ರೂಪುಗೊಂಡಿದೆ. ನವೆಂಬರ್ 30ರಂದು ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿದೆ.

ನವದೆಹಲಿ (ನ.27) ಈ ವರ್ಷ ಭಾರತದಲ್ಲಿ ಮಳೆ ಭಾರಿ ಅವಾಂತರಗಳನ್ನೇ ಮಾಡಿದೆ. ಹಲವೆಡೆ ಪ್ರವಾಹ, ಭೂಕುಸಿತಗಳು ಸಂಭವಿಸಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾ ಜಲಾಶಗಳು ಭರ್ತಿಯಾಗಿತ್ತು. ಮಳೆಗಾಲ ಮುಗೀತು ಅನ್ನೋವಷ್ಟರಲ್ಲೇ ಚಂಡಮಾರುತಗಳಿಂದ ಮತ್ತೆ ಮತ್ತೆ ಮಳೆಯಾಗುತ್ತಿದೆ. ಇದೀಗ ಮತ್ತೆ ಜನಜೀವನ ಅಸ್ತವ್ಯಸ್ತಗೊಳಿಸಲು ದಿತ್ವಾ ಚಂಡಮಾರುತ ರೆಡಿಯಾಗಿದೆ. ನವೆಂಬರ್ 30 ರಂದು ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ದಿತ್ವಾ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪೊಟ್ಟುವಿಲ್ ಬಳಿ ರೂಪುಗೊಂಡ ದಿತ್ವಾ

ದಿತ್ವಾ ಚಂಡಮಾರುತ ತಮಿಳುನಾಡಿನ ಚೆನ್ನಿಂದ 750 ಕಿಲೋಮೀಟರ್ ದೂರದ ಪುಟ್ಟುವಿಲ್ ಬಳಿ ರೂಪುಗೊಂಡಿದೆ. ದಿತ್ವಾ ಚಂಡಮಾರುತ ಉತ್ತರ ತಮಿಳುನಾಡು ಕರಾವಳಿ ತೀರ ಭಾಗ ಹಾಗೂ ದಕ್ಷಿಣ ಆಂಧ್ರದ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ. ನವೆಂಬರ್ 30ರಿಂದ ದಿತ್ವಾ ಮಳೆ ಅಬ್ಬರ ಆರಂಭಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ತಮಿಳುನಾಡು, ಆಂಧ್ರ ಪ್ರದೇಶ ಕರಾವಳಿ ತೀರ ಪ್ರದೇಶಗಳಿಗೆ ಅಪ್ಪಳಿಸುವ ಕಾರಣ ಇದರ ಪರಿಣಾಮ ಬೆಂಗಳೂರು ಕರ್ನಾಟಕದ ಮೇಲೂ ಇರಲಿದೆ. ಈಗಾಗಲೇ ತಮಿಳುನಾಡು ಹಾಗೂ ಆಂದ್ರ ಪ್ರದೇಶದ ಕೆಲೆವೆಡೆ ಮಳೆಯಾಗುತ್ತಿದೆ.ನವೆಂಬರ್ 30 ರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ.

ಸೆನ್ಯಾರ್ ಚಂಡಮಾರುತದಿಂದ ಮೋಡಕವಿದ ವಾತವಾರಣ

ಕಾರ್ ನಿಕೋಬಾರ್ ವಲಯದಲ್ಲಿ ಸೆನ್ಯಾರ್ ಚಂಡಮಾರುತ ರೂಪುಗೊಂಡಿದೆ. ಸೆನ್ಯಾರ್ ಚಂಡಮಾರುತದ ವೇಗ ಕ್ಷೀಣಗೊಳ್ಳುತ್ತಿದೆ. ಹೀಗಾಗಿ ಇದು ಕರಾವಳಿ ತೀರ ಪ್ರದೇಶದಲ್ಲಿ ಯಾವುದೇ ಅನಾಹುತ ಸಷ್ಟಿಸುವ ಸಾಧ್ಯತೆ ಇಲ್ಲ. ಆದರೆ ತಮಿಳುನಾಡು, ಆಂಧ್ರ ಪ್ರದೇಶ , ಕರ್ನಾಟಕದ ಹಲವು ಭಾಗದಲ್ಲಿ ಈಗಾಗಲೇ ಪರಿಣಾಮ ಬೀರಿದೆ. ತಮಿಳುನಾಡಿನ ಹಲವು ಭಾಗದಲ್ಲಿ ಮಳೆಯಾಗುತ್ತಿದೆ. ಇತ್ತ ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ದಿತ್ವಾ ಚಂಡಮಾರುತ ಅಪ್ಪಳಿಸಲು ರೆಡಿಯಾಗಿದೆ ಎಂದು ಐಎಂಡಿ ಹೇಳಿದೆ.

ತಮಿಳುನಾಡಿನ ಹಲೆವೆಡೆ ಯೆಲ್ಲೋ ಅಲರ್ಟ್

ದಿತ್ವಾ ಹೆಸರನ್ನು ಯೆಮೆನ್ ದೇಶ ಸಲ್ಲಿಕೆ ಮಾಡಿದೆ. ಪ್ರಮುಖವಾಗಿ ಭಾರತದ ಸಮುದ್ರದ ಉತ್ತರ ಭಾಗದಲ್ಲಿ ರೂಪುಗೊಂಡಿರುವ ಚಂಡಮಾರುತಕ್ಕೆ ಧಿತ್ವಾ ಎಂದು ಹೆಸರಿಡಲಾಗಿದೆ. ಬಂಗಾಳ ಕೊಲ್ಲಿಯ 6.9°N/81.9°Eರಲ್ಲಿ ಈ ಚಂಡಮಾರುತ ರೂಪುಗೊಂಡಿದೆ. ತಮಿಳುನಾಡಿನ ಚೆನನೈ, ನಾಗಪಟ್ಟಿಣಂ, ತಿರುವಲ್ಲೂರು, ತಂಜಾವೂರು ಸೇರಿದಂತೆ ಹಲವು ಭಾಗದಲ್ಲಿ ನವೆಂಬರ್ 27, 28 ಹಾಗೂ 29 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.



Source link

Leave a Reply

Your email address will not be published. Required fields are marked *