ಒಂದೇ ದಿನ ಸೆನ್ಸೆಕ್ಸ್1836, ನಿಫ್ಟಿ 601 ಅಂಕ ಇಳಿಕೆ; ಹೂಡಿಕೆದಾರರಿಗೆ 15 ಲಕ್ಷ ಕೋಟಿ ನಷ್ಟ | Sensex Down 1836 Points Nifty Down 601 Points In A Single Day Investors Lose Rs 15 Lakh Crore Mrq

ಒಂದೇ ದಿನ ಸೆನ್ಸೆಕ್ಸ್1836, ನಿಫ್ಟಿ 601 ಅಂಕ ಇಳಿಕೆ; ಹೂಡಿಕೆದಾರರಿಗೆ 15 ಲಕ್ಷ ಕೋಟಿ ನಷ್ಟ | Sensex Down 1836 Points Nifty Down 601 Points In A Single Day Investors Lose Rs 15 Lakh Crore Mrq



ಒಂದೇ ದಿನ ಸೆನ್ಸೆಕ್ಸ್1836, ನಿಫ್ಟಿ 601 ಅಂಕ ಇಳಿಕೆ; ಹೂಡಿಕೆದಾರರಿಗೆ 15 ಲಕ್ಷ ಕೋಟಿ ನಷ್ಟ | Sensex Down 1836 Points Nifty Down 601 Points In A Single Day Investors Lose Rs 15 Lakh Crore Mrq

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಷೇರುಪೇಟೆ ಸೂಚ್ಯಂಕಗಳು ತೀವ್ರವಾಗಿ ಕುಸಿದು, ಹೂಡಿಕೆದಾರರು ಒಂದೇ ದಿನದಲ್ಲಿ 15 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದರೊಂದಿಗೆ, ಚಿನ್ನ ಮತ್ತು ಬೆಳ್ಳಿಯ ದರಗಳು ಕುಸಿದಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆ ವಾರದ ಮೊದಲ ದಿನವೇ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್‌ 1836 ಹಾಗೂ ನಿಫ್ಟಿ 601 ಅಂಕ ಇಳಿದಿವೆ. ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನ ಬರೋಬ್ಬರಿ 15 ಲಕ್ಷ ಕೋಟಿ ರು. ಇಳಿದಿದೆ.

ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 76,696.39ರಲ್ಲಿ ಅಂತ್ಯಗೊಂಡಿದ್ದರೆ, ನಿಫ್ಟಿ 22,512.65ರಲ್ಲಿ ಮುಕ್ತಾಯವಾಗಿದೆ. ಇರಾನ್‌ ಯುದ್ಧ 4ನೇ ವಾರಕ್ಕೆ ಕಾಲಿಟ್ಟಿರುವುದು, ಕಚ್ಚಾ ತೈಲಗಳ ಬೆಲೆ ಏರಿಕೆ ಈ ನಕಾರಾತ್ಮಕ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಜತೆಗೆ ವಿದೇಶಿ ನಿಧಿಯ ಹೊರ ಹರಿವು, ರುಪಾಯಿ ಮೌಲ್ಯ ಕುಸಿತವೂ ಕಾರಣ ಎಂದು ವಿಶ್ಲೇಷಿಸಲಾಗಿದೆ. ಶುಕ್ರವಾರ ಸೆನ್ಸೆಕ್ಸ್‌ 74,532 ಅಂಕ, ನಿಫ್ಟಿ 23,114.50ರಲ್ಲಿ ಮುಕ್ತಾಯವಾಗಿದ್ದವು.

ಇದರ ಜತೆಗ ಶುಕ್ರವಾರ ಹೂಡಿಕೆದಾರರ ಮಾರುಕಟ್ಟೆ ಬಂಡವಾಳ 4.29 ಲಕ್ಷ ಕೋಟಿ ರು.ಗಳಷ್ಟಿತ್ತು. ಆದರೆ ಸೋಮವಾರ ಒಂದೇ ದಿನ 15 ಲಕ್ಷ ಕೋಟಿ ರು. ಇಳಿದು 4.14 ಲಕ್ಷ ಕೋಟಿ ರು.ಗೆ ಇಳಿದಿದೆ.

ಜಾಗತಿಕ ಪೇಟೆ ಕುಸಿತ

ಯುದ್ಧದ ಕಾರಣ ವಿದೇಶಿ ಷೇರುಪೇಟೆಗಳೂ ಕುಸಿದಿವೆ. ಫ್ರಾನ್ಸ್‌ನ ‘ಸಿಎಸಿ-40’, ಆರಂಭಿಕ ವಹಿವಾಟಿನಲ್ಲಿ ಶೇ.1.5 ರಷ್ಟು ಕುಸಿದು 7,548.83 ಕ್ಕೆ ತಲುಪಿದ್ದರೆ, ಜರ್ಮನಿಯ ಡಿಎಎಕ್ಸ್, ಶೇ.2 ರಷ್ಟು ಕುಸಿದು 21,944.26 ಕ್ಕೆ ತಲುಪಿದೆ. ಬ್ರಿಟನ್‌ನ ಎಫ್‌ಟಿಎಸ್‌ಇ-100, ಶೇ.1.7 ರಷ್ಟು ಕುಸಿದು 9,754.80 ಕ್ಕೆ ತಲುಪಿದೆ.

113 ಡಾಲರ್‌ಗೆ ಏರಿ 100 ಡಾಲರ್‌ಗಿಳಿದ ಕಚ್ಚಾ ತೈಲ

ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಸೋಮವಾರ ಬೆಳಗ್ಗೆ ಒಂದು ಹಂತದಲ್ಲಿ ಶೇ 0.97 ರಷ್ಟು ಏರಿಕೆಯಾಗಿ 113.3 ಡಾಲರ್‌ಗೆ ತಲುಪಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕದನವಿರಾಮದ ಮಾತು ಆಡಿದ್ದರಿಂದ ಸುಮಾರು 100 ಡಾಲರ್‌ಗೆ ಇಳಿಯಿತು,

ಕಳೆದ ವಾರ ಅದು 120 ಡಾಲರ್‌ ತಲುಪಿ 4 ವರ್ಷದ ದಾಖಲೆ ಬರೆದಿತ್ತು. ಬಳಿಕ 90ರ ಆಸುಪಾಸಿಗೆ ಕುಸಿದಿತ್ತು. ಆದರೆ ಯುದ್ಧದ ಕಾವು ಮತ್ತೆ ಹೆಚ್ಚಾದ ಕಾರಣ ಈಗ 113 ಡಾಲರ್‌ಗೆ ಏರಿದೆ.

ಕದನದ ನಡುವೆ ಚಿನ್ನ ₹10,000, ಬೆಳ್ಳಿ ₹15,000 ಕುಸಿತ

ಮಧ್ಯಪ್ರಾಚ್ಯ ಯುದ್ಧದ ನಡುವೆ ಜಾಗತಿಕವಾಗಿ ಚಿನ್ನ ಮತ್ತು ಬೆಳ್ಳಿಯ ದರಗಳು ಸೋಮವಾರ ಭಾರಿ ಕುಸಿದಿವೆ. ಬೆಂಗಳೂರಿನಲ್ಲಿ ಭಾನುವಾರ 1,45,970 ರು. ಇದ್ದ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10,320 ರು. ಇಳಿಕೆಯಾಗಿದ್ದು, 1,35,650 ರು. ಆಗಿದೆ.

ಅತ್ತ ಇದೇ ಪ್ರಮಾಣದ 22 ಕ್ಯಾರಟ್‌ ಹೊನ್ನಿನ ದರದಲ್ಲಿ 9,450 ರು. ಕುಸಿದು 1,24,350 ರು.ಗೆ ನಿಂತಿದೆ. 1 ಕೆ.ಜಿ. ಬೆಳ್ಳಿ ಬೆಲೆಯಲ್ಲೂ 15 ಸಾವಿರ ರು. ಇಳಿಕೆ ಆಗಿದ್ದು, 2.3 ಲಕ್ಷ ರು. ಆಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1.43 ಲಕ್ಷ ರು. ಇದ್ದರೆ, ಕೆ.ಜಿ. ಬೆಳ್ಳಿಗೆ 2.30 ಲಕ್ಷ ರು. ಆಗಿದೆ. ಫ್ಯೂಚರ್‌ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್‌ ಕಂಡುಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಶೇ.10ರಷ್ಟು ಕುಸಿತವಾಗಿ 1.29 ಲಕ್ಷ ರು. ಆಗಿದೆ.

ಡಾಲರ್‌ ಎದುರು ₹ ಮೌಲ್ಯ 94.03ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠ

ಡಾಲರ್ ಎದುರು ರುಪಾಯಿ ಮೌಲ್ಯ ಮತ್ತೆ ದಾಖಲೆ ಕುಸಿತ ಕಂಡಿದೆ. ಸೋಮವಾರದ ಮುಕ್ತಾಯದ ವೇಳೆಗೆ ರುಪಾಯಿ 48 ಪೈಸೆ ಕುಸಿದು 94.03 ರು.ನಲ್ಲಿ ಅಂತ್ಯವಾಗಿದೆ. ಇದು ಸಾರ್ವಕಾಲಿಕ ಕನಿಷ್ಠ ದಾಖಲೆ.

ದಿನದ ಆರಂಭದಲ್ಲಿ ಮೊದಲು 50 ಪೈಸೆ ಕುಸಿದಿದ್ದ ರುಪಾಯಿ, ಆ ಬಳಿಕ ಕೊಂಚ ಚೇತರಿಸಿ 48 ಪೈಸೆ ಇಳಿಕೆ ಕಂಡಿತು. ಅಮೆರಿಕದ ಡಾಲರ್‌ ಬಲಗೊಳ್ಳುತ್ತಿರುವುದು, ದೇಶಿಯ ಷೇರುಮಾರುಕಟ್ಟೆಯಲ್ಲಿನ ನಕಾರಾತ್ಮಕ ಬೆಳವಣಿಗೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಶುಕ್ರವಾರ ಡಾಲರ್‌ ಎದುರು ರುಪಾಯಿ ಮೌಲ್ಯ 64 ಪೈಸೆ 93.53 ಅಂಕಕ್ಕೆ ಸ್ಥಿರವಾಗಿತ್ತು.



Source link

Leave a Reply

Your email address will not be published. Required fields are marked *