Headlines

ನಡುರಸ್ತೆಯಲ್ಲಿ WWE ನೋಡಿ ಖುಷಿಪಟ್ಟ ಜನ: ಕುಡಿದ ಮತ್ತಿನಲ್ಲಿ ಬಾಯ್‌ಫ್ರೆಂಡ್‌ನ ಬೀದಿಯಲ್ಲಿ ಕೆಡವಿ ಹಲ್ಲೆ | Kerala Drunk Woman Beats Boyfriend On The Street Police File Case Against Lovers

ನಡುರಸ್ತೆಯಲ್ಲಿ WWE ನೋಡಿ ಖುಷಿಪಟ್ಟ ಜನ: ಕುಡಿದ ಮತ್ತಿನಲ್ಲಿ ಬಾಯ್‌ಫ್ರೆಂಡ್‌ನ ಬೀದಿಯಲ್ಲಿ ಕೆಡವಿ ಹಲ್ಲೆ | Kerala Drunk Woman Beats Boyfriend On The Street Police File Case Against Lovers



ನಡುರಸ್ತೆಯಲ್ಲಿ WWE ನೋಡಿ ಖುಷಿಪಟ್ಟ ಜನ: ಕುಡಿದ ಮತ್ತಿನಲ್ಲಿ ಬಾಯ್‌ಫ್ರೆಂಡ್‌ನ ಬೀದಿಯಲ್ಲಿ ಕೆಡವಿ ಹಲ್ಲೆ | Kerala Drunk Woman Beats Boyfriend On The Street Police File Case Against Lovers

ಕೇರಳದ ತಿರುವನಂತಪುರಂನಲ್ಲಿ ಮಹಿಳೆಯೊಬ್ಬಳು ಯುವಕನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದೆ. ಮದ್ಯಪಾನದ ನಂತರ ನಡೆದ ಈ ಜಗಳ ತಮಾಷೆ ಎಂದು ಜೋಡಿ ಹೇಳಿಕೊಂಡಿದ್ದರೂ, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕುಡಿದ ಮತ್ತಿನಲ್ಲಿ ಬೀದಿ ರಂಪಾಟ: ಪ್ರೇಮಿಗಳ ವಿರುದ್ಧ ದೂರು ದಾಖಲಿಸಿದ ಪೊಲೀಸರು

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಬೀದಿಯಲ್ಲೇ ಯುವಕನೊಬ್ಬನನ್ನು ಕೆಡವಿ ಆತನ ಮೇಲೆ ಹತ್ತಿ ಕುಳಿತು ಆತನ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ನಂದಿ ಹಾಡಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ಯುವಕನನ್ನು ರಸ್ತೆಯಲ್ಲೇ ಅಡ್ಡಹಾಕಿ ರೆಸ್ಲಿಂಗ್ ಸ್ಟಾರ್‌ನಂತೆ ಆತನ ಮೇಲೆ ಕುಳಿತು ಆತನ ಮೇಲೆ ಹಲ್ಲೆ ಮಾಡಿದ್ದಾಳೆ ಇದನ್ನು ನೋಡಿ ಅಲ್ಲಿ ನೂರಾರು ಯುವಕರು ಸೇರಿದ್ದು, ಯಾರೊಬ್ಬರು ಈ ಜಗಳವನ್ನು ಬಿಡಿಸಲು ಹೋಗಿಲ್ಲ, ಎಲ್ಲರೂ ಮೂಕ ಪ್ರೇಕ್ಷಕರಂತೆ ಈ ದೃಶ್ಯ ನೋಡುತ್ತಾ ಮಜಾ ತೆಗೆದುಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅನೇಕರು ಇದನ್ನು ಮಹಿಳಾ ಸಬಲೀಕರಣ ಎಂದು ವ್ಯಂಗ್ಯ ಮಾಡಿದ್ದಾರೆ.

Ramesh Tiwari(@rameshofficial0)ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 100 ಶೇಕಡಾ ಸುಶಿಕ್ಷಿತ ಕೇರಳದಲ್ಲಿ ನೋಡಲೇಬೇಕಾದ ಯುದ್ಧ, ಮಹಿಳಾ ಸಬಲೀಕರಣ vs ಪುರುಷ ಸಬಲೀಕರಣ, ನೇರ ಬೀದಿ ಹೋರಾಟ, ಮಹಿಳೆ ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸುತ್ತಾಳೆ, ಪುರುಷನನ್ನು ರಸ್ತೆಗೆ ಇಳಿಸುತ್ತಾಳೆ.

ಸಬಲೀಕರಣ ಮಾಸ್ಟರ್‌ಕ್ಲಾಸ್ ವೀಕ್ಷಿಸುತ್ತಿರುವ ಪ್ರೇಕ್ಷಕರು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಕಾಣುವಂತೆ ಮಹಿಳೆ ಯುವಕನನ್ನು ನಡುರಸ್ತೆಯಲ್ಲೇ ನೆಲಕ್ಕೆ ಕೆಡವಿದ್ದು, ಬಳಿಕ ಆತನ ಮೇಲೆ ಕುಳಿತು ಆತನಿಗೆ ಸರಿಯಾಗಿ ಬಾರಿಸಿದ್ದಾಳೆ. ಒಂದು ಹಂತದಲ್ಲಂತು ಆಕೆ ಆತನ ಕತ್ತಿನಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು ಆತ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ. ಆತನ ಖಾಸಗಿ ಭಾಗಕ್ಕೂ ಆಕೆ ಕೈ ಹಾಕಿ ಹಿಂಸಿಸಿದ್ದಾಳೆ. ಕಡೆಗೆ ಆತ ಅಸಹಾಯಕನಂತೆ ಬಿದ್ದಿದ್ದು, ಇದನ್ನು ನೋಡಿದ ಸಾರ್ವಜನಿಕರು ಕಡೆಗೂ ಆಕೆಯ ಕೈಯಿಂದ ಆತನನ್ನು ಬಿಡಿಸುವುದಕ್ಕೆ ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ತನ್ನ ಚಿನ್ನಾಭರಣ ಅಡವಿಟ್ಟು ಗಂಡನ ಇಂಜಿನಿಯರ್ ಓದಿಸಿದ ಹೆಂಡ್ತಿ: ಉದ್ಯೋಗದ ಬಳಿಕ ತೊರೆದು ಹೋದ ಪತಿ

ಆದರೆ ಉಗ್ರರೂಪಿಯಾಗಿದ್ದ ಆಕೆ ಮೇಲೇಳುವುದಕ್ಕೂ ಬಿಡದೇ ಡಾಮಿನೇಟ್ ಮಾಡಿದ್ದು, ಅನೇಕರು ಆಕೆಯ ಕೈನಿಂದ ಆತನನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಹಠ ಬಿಡದ ಆಕೆ ಆತನ ಮೇಲಿಂದ ಏಳುವುದಕ್ಕೆ ಒಪ್ಪದೇ ಮತ್ತೆ ಆತನ ಮೇಲೆ ಹಲ್ಲೆಗೆ ಮುಂದಾಗಿರುವುದನ್ನು ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಸುತ್ತಲು ಇರುವವರಿಗೆ ಇದು WWE(ರಸ್ಲಿಂಗ್) ರೀತಿ ಕಂಡು ಬಂದಿದೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಆ ಪುರುಷ ಬಹಳ ಸುಸಂಸ್ಕೃತ. ಅವನು ಎಂದಿಗೂ ಹುಡುಗಿಯನ್ನು ಅನುಚಿತವಾಗಿ ಮುಟ್ಟಲಿಲ್ಲ. ಆದರೆ ಆ ಮಹಿಳೆ ಮಾರುಕಟ್ಟೆಯ ಮಧ್ಯದಲ್ಲಿ ಎಲ್ಲರ ಮುಂದೆ ಆ ಪುರುಷನನ್ನು ಮುಟ್ಟಿದಳು. ಆಕೆ ಪುರುಷನ ಘನತೆಯನ್ನು ಉಲ್ಲಂಘಿಸಿದಳು. ಆಕೆ ಪುರುಷನ ಮೇಲೆ ಅತ್ಯಾ*ಚಾರ ಮಾಡಿದಳು. ಆದರೆ ಜನರು ನಗುತ್ತಾರೆ ಏಕೆಂದರೆ, ಸಾರ್ವಜನಿಕರ ಪ್ರಕಾರ, ಪುರುಷರಿಗೆ ಯಾವುದೇ ಘನತೆ ಇಲ್ಲ. ಅದಕ್ಕಾಗಿಯೇ ಅವರು ಅತ್ಯಾ*ಚಾರಕ್ಕೊಳಗಾಗುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ: 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಕೆಲ ವರದಿಗಳ ಪ್ರಕಾರ 2026 ರ ಮಾರ್ಚ್ 2ರಂದು ಕೇರಳದ ತಿರುವನಂತಪುರಂನಲ್ಲಿರುವ ಮಾನವೀಯಂ ವೀಧಿಯಲ್ಲಿ ಈ ಘಟನೆ ನಡೆದಿದೆ. ಯೋಧನಾಗಿರುವ ನೆಡುಮಂಗಾಡ್‌ನ ನಿವಾಸಿ ಮತ್ತು ಎರ್ನಾಕುಲಂನ ಆಕೆಯ ಗೆಳತಿ ಮೊದಲು ಅಲ್ಲಿ ಭೇಟಿಯಾಗಿದ್ದಾರೆ. ನಂತರ ಇಬ್ಬರು ಸೇರಿ ಕುಡಿದಿದ್ದಾರೆ. ಮದ್ಯಪಾನದ ಬಳಿಕ ಪರಸ್ಪರ ಸಾರ್ವಜನಿಕವಾಗಿ ಜಗಳ ಮಾಡಿದ್ದು, ಈ ಜಗಳದಲ್ಲಿ ಮಹಿಳೆಯೇ ಮೇಲುಗೈ ಸಾಧಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಮ್ಯೂಸಿಯಂ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಜೋಡಿ ತಾವು ತಮಾಷೆಗಾಗಿ ಹೀಗೆ ಮಾಡಿದ್ದೇವೆ ಎಂದು ಪೊಲೀಸರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಇವಳು ಹೆಣ್ಣಲ್ಲ ಹೆಮ್ಮಾರಿ ಇವಳು ಘೇಂಡಾಮೃಗದಂತೆ ವರ್ತಿಸುತ್ತಿದ್ದಾಳೆ. ಇವಳನ್ನು ಜೈಲಿಗೆ ಹಾಕಿ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *