Headlines

ಚಿನ್ನ- ಬೆಳ್ಳಿಯ ಬೆಲೆ ಬಗ್ಗೆ ಸಚಿವೆ ನಿರ್ಮಲಾರಿಂದ ಭರ್ಜರಿ ಗುಡ್ ನ್ಯೂಸ್ : ಆತಂಕ ಪಡಬೇಡಿ | Big Relief On Gold And Silver Prices Nirmala Sitharaman Says Dont Worry

‘ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಇವುಗಳ ಹೆಚ್ಚಿನ ಬೇಡಿಕೆ ತಾತ್ಕಾಲಿಕವೆಂಬಂತೆ ತೋರುತ್ತಿದೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಮುಂಬೈ: ‘ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಇವುಗಳ ಹೆಚ್ಚಿನ ಬೇಡಿಕೆ ತಾತ್ಕಾಲಿಕವೆಂಬಂತೆ ತೋರುತ್ತಿದೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿರುವ ನಡುವೆಯೇ ಅವರ ಈ ಹೇಳಿಕೆ

ಬೆಳ್ಳಿಯ ಬೆಲೆ 3ರಿಂದ 4 ಲಕ್ಷ ರು.ವರೆಗೆ ಮತ್ತು ಚಿನ್ನದ ಬೆಲೆ 1.50 ಲಕ್ಷ ರು.ದಾಟಿ ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿರುವ ನಡುವೆಯೇ ಅವರ ಈ ಹೇಳಿಕೆ ಬಂದಿದೆ.

ಮನೆಗಳಲ್ಲಿ ಜನರ ಅಚ್ಚುಮೆಚ್ಚಿನ ಹೂಡಿಕೆಯೆಂದರೆ ಚಿನ್ನ

ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಕೇಂದ್ರೀಯ ನಿರ್ದೇಶಕರ ಮಂಡಳಿ ಜೊತೆ ಬಜೆಟ್ ನಂತರದ ಸಾಮಾನ್ಯ ಸಭೆ ನಡೆಸಿ ಮಾತನಾಡಿದ ಅವರು, ‘ಮನೆಗಳಲ್ಲಿ ಜನರ ಅಚ್ಚುಮೆಚ್ಚಿನ ಹೂಡಿಕೆಯೆಂದರೆ ಚಿನ್ನ. ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದು ತಾತ್ಕಾಲಿಕವೆಂಬಂತೆ ಕಾಣುತ್ತಿದೆ. ನಾವು ಅದನ್ನು ಗಮನಿಸುತ್ತಿದ್ದೇವೆ. ಅದು ಆತಂಕಕಾರಿ ಪರಿಸ್ಥಿತಿಯನ್ನು ತಲುಪಿಲ್ಲ’ ಎಂದರು.

‘ನಮ್ಮ ಮಾರುಕಟ್ಟೆಗೆ ಬರುವ ಬಹುತೇಕ ಎಲ್ಲಾ ಚಿನ್ನ ಆಮದು ಮಾಡಿಕೊಂಡದ್ದು. ನಮ್ಮದು ಆಮದು ಅವಲಂಬಿತ ದೇಶ. ಈ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಆದರೆ ಅವು ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ. ಇಂದು ಹೆಚ್ಚಿನ ದೇಶಗಳು, ವಿಶೇಷವಾಗಿ ವಿವಿಧ ಬ್ಯಾಂಕ್‌ಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರಿಳಿತಗೊಳ್ಳುತ್ತಿವೆ’ ಎಂದರು.

Source link

Leave a Reply

Your email address will not be published. Required fields are marked *