ನಕಲಿ ಪ್ರೊಫೈಲ್‌, ಟ್ರೋಲರ್‌ಗಳ ಪತ್ತೆ ಹಚ್ಚಲು ಎಕ್ಸ್‌ ಪ್ರೊಫೈಲ್‌ನಲ್ಲಿ ಇನ್ಮುಂದೆ ದೇಶದ ಲೇಬಲ್‌ ಕಡ್ಡಾಯ! | X Platform Mandatory Country Labels To Curb Bots Fake Profiles San

ನಕಲಿ ಪ್ರೊಫೈಲ್‌, ಟ್ರೋಲರ್‌ಗಳ ಪತ್ತೆ ಹಚ್ಚಲು ಎಕ್ಸ್‌ ಪ್ರೊಫೈಲ್‌ನಲ್ಲಿ ಇನ್ಮುಂದೆ ದೇಶದ ಲೇಬಲ್‌ ಕಡ್ಡಾಯ! | X Platform Mandatory Country Labels To Curb Bots Fake Profiles San



ನಕಲಿ ಪ್ರೊಫೈಲ್‌, ಟ್ರೋಲರ್‌ಗಳ ಪತ್ತೆ ಹಚ್ಚಲು ಎಕ್ಸ್‌ ಪ್ರೊಫೈಲ್‌ನಲ್ಲಿ ಇನ್ಮುಂದೆ ದೇಶದ ಲೇಬಲ್‌ ಕಡ್ಡಾಯ! | X Platform Mandatory Country Labels To Curb Bots Fake Profiles San

ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್‌, ನಕಲಿ ಪ್ರೊಫೈಲ್‌ಗಳು ಮತ್ತು ಬಾಟ್‌ಗಳನ್ನು ನಿಯಂತ್ರಿಸಲು ಎಲ್ಲಾ ಬಳಕೆದಾರರ ಖಾತೆಗಳಲ್ಲಿ ದೇಶದ ಲೇಬಲ್‌ ಅನ್ನು ಕಡ್ಡಾಯಗೊಳಿಸಿದೆ. ಈ ಹೊಸ ಬದಲಾವಣೆಯು ಐಪಿ ವಿಳಾಸ ಆಧಾರದ ಮೇಲೆ ದೇಶವನ್ನು ಗುರುತಿಸಲಿದೆ.

ಬೆಂಗಳೂರು (ನ.19): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಎಲಾನ್‌ ಮಸ್ಕ್‌ ಮಾಲೀಕತ್ವದ ಎಕ್ಸ್‌ ಬಹುದೊಡ್ಡ ಬದಲಾವಣೆ ಮಾಡಿದೆ. ಅದರಂತೆ ಇನ್ಮುಂದೆ ನಿಮ್ಮ ಎಕ್ಸ್‌ ಖಾತೆಯಲ್ಲಿ ದೇಶದ ಲೇಬಲ್‌ ಕಡ್ಡಾಯವಾಗಿ ಇರಲಿದೆ. ನಕಲಿ ಪ್ರೊಫೈಲ್‌ಗಳು ಹಾಗೂ ಬಾಟ್‌ಗಳನ್ನು ನಿಯಂತ್ರಿಸಲು ಎಕ್ಸ್‌ ಈ ಕ್ರಮ ಕೈಗೊಂಡಿದೆ. ಮುಂದೆ ಎಕ್ಸ್‌ನಲ್ಲಿ ರಚಿಸಲಾಗುವ ಪ್ರೊಫೈಲ್‌ಗಳು ಹಾಗೂ ಈಗಾಗಲೇ ಇರುವ ಪ್ರೊಫೈಲ್‌ಗಳಲ್ಲಿ ಇದು ಯಾವ ದೇಶದ ಎಕ್ಸ್‌ ಅಕೌಂಟ್‌ ಅನ್ನೋ ಮಾಹಿತಿ ಇರುವುದನ್ನು ಕಂಪನಿ ಕಡ್ಡಾಯ ಮಾಡಿದೆ. ಈ ಬಗ್ಗೆ ಎಕ್ಸ್‌ ಮಾಹಿತಿಯನ್ನೂ ಕೂಡ ನೀಡಿದೆ.

ಎಲಾನ್ ಮಸ್ಕ್ ಅವರ X ವೇದಿಕೆ ಎಲ್ಲಾ ಯೂಸರ್‌ಗಳಿಗೆ ‘ಈ ಖಾತೆಯ ಬಗ್ಗೆ’ (About this account) ವಿಭಾಗದಲ್ಲಿ ದೇಶದ ಲೇಬಲ್‌ಗಳನ್ನು ಕಡ್ಡಾಯವಾಗಿ ದಾಖಲು ಮಾಡಲಿದೆ.ಇದನ್ನು IP ವಿಳಾಸಗಳು ಮತ್ತು ಪೋಸ್ಟಿಂಗ್ ಮಾದರಿಗಳ ಮೂಲಕ ನಿರ್ಧರಿಸಲಾಗುತ್ತದೆ, ಇದು ದೃಢೀಕರಣವನ್ನು ಹೆಚ್ಚಿಸಲು ಮತ್ತು ಬಾಟ್ ಮತ್ತು ವಿದೇಶಿ ಪ್ರಭಾವ ಚಟುವಟಿಕೆಗಳನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ನವೆಂಬರ್‌ 18 ರಿಂದ 24 ಗಂಟೆಯ ಒಳಗಾಗಿ ಈ ವಿಶೇಷತೆಯು ಜಾರಿಗೆ ಬರಲಿದೆ. ನಿಯಂತ್ರಕ ನಿಯಮಗಳ ಕಾರಣದಿಂದಾಗಿ ಯುರೋಪಿಯನ್‌ ಯೂನಿಯನ್‌ನಲ್ಲಿರುವ ದೇಶವನ್ನು ಬಿಟ್ಟು ಮತ್ತೆಲ್ಲಾ ದೇಶಗಳಲ್ಲಿ ಇದು ಪ್ರದರ್ಶನವಾಗಲಿದೆ. ಯುರೋಪಿಯನ್‌ ಯೂನಿಯನ್‌ ಫ್ಲಾಗ್‌ ಫ್ರೊಫೈಲ್‌ ನಿಯಮದಿಂದ ಹೊರಗುಳಿಯುವ ನಿರ್ಧಾರ ಮಾಡಿದೆ. ಹೆಚ್ಚಿನ ಯೂಸರ್‌ಗಳು ಮೋಸಗೊಳಿಸುವ ಖಾತೆಗಳ ಬಹಿರಂಗಪಡಿಸುವಿಕೆಯನ್ನು ಹೊಗಳಿದರೆ, ದಮನಕಾರಿ ಆಡಳಿತಗಳಲ್ಲಿನ ಗೌಪ್ಯತೆಯ ಅಪಾಯಗಳು ಮತ್ತು ಮುಕ್ತ ಮಾತಿನ ಮೇಲಿನ ಸಂಭಾವ್ಯ ಪರಿಣಾಮಗಳ ಬಗ್ಗೆ ಕಳವಳಗಳು ಉದ್ಭವಿಸುತ್ತವೆ ಎಂದು ಹೇಳಿದ್ದಾರೆ.

ನಿಮ್ಮ ಪ್ರೊಫೈಲ್‌ ಪೇಜ್‌ನಲ್ಲಿ ನೀವು ಯಾವ ದೇಶದವರು ಎನ್ನುವ ಮಾಹಿತಿ ನೀಡುವುದು ಮಾತ್ರವಲ್ಲದೆ, ಎಕ್ಸ್‌ಗೆ ಯಾವ ದಿನ ಯಾವ ಲೊಕೇಷನ್‌ನಿಂದ ಸೇರಿದ್ದೀರಿ ಅನ್ನೋ ಮಾಹಿತಿಯನ್ನೂ ನೀಡುತ್ತದೆ. ಅದರೊಂದಿಗೆ ಎಷ್ಟು ಬಾರಿ ಯೂಸರ್‌ ನೇಮ್‌ ಬದಲಾವಣೆ ಮಾಡಿದ್ದೀರಿ, ಯಾವ ದೇಶದ ಆಪ್‌ ಸ್ಟೋರ್‌ನಿಂದ ನೀವು ಕನೆಕ್ಟ್‌ ಆಗಿದ್ದೀರಿ ಅನ್ನೋ ಮಾಹಿತಿಯನ್ನೂ ನೀಡುತ್ತದೆ.

ನಕಲಿ ಪ್ರೊಫೈಲ್‌, ಟ್ರೋಲರ್‌ಗಳಿಗೆ ಕಡಿವಾಣ

ಎಕ್ಸ್‌ ಈ ಕ್ರಮ ಕೈಗೊಂಡಿರುವ ಕಾರಣ ನಕಲಿ ಪ್ರೊಫೈಲ್‌ಗಳು ಹಾಗೂ ಟ್ರೋಲರ್‌ಗಳ ಮೇಲೆ ಕಡಿವಾಣ ಬೀರಲಿದೆ. ಇಂದು ಎಕ್ಸ್‌ ಒಂದು ದೇಶದ ನೀತಿಯ ಮೇಲೆ ಪ್ರಭಾವ ಬೀರುವಷ್ಟು ಸಮರ್ಥವಾಗಿದೆ. ಅದರೊಂದಿಗೆ ದೇಶದ ನೀತಿಗಳನ್ನು ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರ ಮಾಡುವ, ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎಬ್ಬಿಸುವಂಥ ಪೋಸ್ಟ್‌ಗಳನ್ನು ಹಾಕುವ ಮೂಲಕ ವೈರಲ್‌ ಆಗುತ್ತಿದ್ದರು. ಅದರಲ್ಲೂ ಭಾರತದಲ್ಲಿ ಆಪರೇಷನ್‌ ಸಿಂದೂರ್‌ ಸಮಯದಲ್ಲಿ ಇಂಥವುಗಳು ಹೆಚ್ಚಾಗಿದ್ದವು. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರೊಫೈಲ್‌ಗಳು ಭಾರತೀಯ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದವು. ಇನ್ನು ಮುಂದೆ ಇಂಥ ಕಾರ್ಯಗಳಿಗೆ ಕಡಿವಾಣ ಬೀರಲಿದೆ. ಈಗಾಗಲೇ ಅಂಥ ಹಲವಾರು ಖಾತೆಗಳು ಎಕ್ಸ್‌ನಿಂದ ಡಿಲೀಟ್‌ ಆಗಿವೆ.



Source link

Leave a Reply

Your email address will not be published. Required fields are marked *