ಕಪಿಲ್‌ ದೇವ್‌ ಪ್ರೀತಿಸಿದ ಈ ನಟಿ ನಂತರ ಸೂಪರ್‌ಸ್ಟಾರ್‌ನ ಮದುವೆಯಾದಳು! | Kapil Dev Love Story With Actress Sarika Bni

ಕಪಿಲ್‌ ದೇವ್‌ ಪ್ರೀತಿಸಿದ ಈ ನಟಿ ನಂತರ ಸೂಪರ್‌ಸ್ಟಾರ್‌ನ ಮದುವೆಯಾದಳು! | Kapil Dev Love Story With Actress Sarika Bni



ಕಪಿಲ್‌ ದೇವ್‌ ಪ್ರೀತಿಸಿದ ಈ ನಟಿ ನಂತರ ಸೂಪರ್‌ಸ್ಟಾರ್‌ನ ಮದುವೆಯಾದಳು! | Kapil Dev Love Story With Actress Sarika Bni

ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರ ಪ್ರೇಮ ಜೀವನದಲ್ಲಿ ಆ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಮದುವೆಗೆ ಮುನ್ನ ಇಬ್ಬರ ನಡುವೆ ಪ್ರಣಯವಿತ್ತು. ಆದರೆ ಕೊನೆಗೆ ಕಪಿಲ್ ದೇವ್ ರೋಮಿ ಭಾಟಿಯಾ ಅವರನ್ನು, ಮತ್ತು ಆ ನಟಿ ಇನ್ನೊಬ್ಬ ಸೂಪರ್‌ ಸ್ಟಾರನ್ನು ಮದುವೆಯಾದರು.

ಭಾರತೀಯ ಕ್ರಿಕೆಟಿಗರು ಮತ್ತು ಚಲನಚಿತ್ರ ನಟಿಯರ ಹೆಸರುಗಳು ತುಂಬಾ ಸಲ ಜೋಡಿಯಾಗಿವೆ. ಇವರು ಪರಿಪೂರ್ಣ ಜೋಡಿ ಎಂಬ ಭಾವನೆಯನ್ನು ನೀಡುವ ಕ್ರಿಕೆಟರ್‌-‌ನಟೀಮಣಿ ಜೋಡಿಗಳು ಈಗ ಹಲವು ಇವೆ. ಇವುಗಳಲ್ಲಿ ಅನುಷಾ- ವಿರಾಟ್, ಗೀತಾ- ಹರ್ಭಜನ್, ಯುವರಾಜ್-ಹ್ಯಾಜೆಲ್ ಮತ್ತು ಇತರ ಅನೇಕ ಹೆಸರುಗಳು ಸೇರಿವೆ. ಆದರೆ ಚಲನಚಿತ್ರ ತಾರೆಯರೊಂದಿಗೆ ಹೆಸರು ಕೇಳಿಬಂದು ನಂತರ ಬೇರೆಯಾದ ಅನೇಕ ಕ್ರಿಕೆಟಿಗರಿದ್ದಾರೆ. ಇಲ್ಲಿ ನಾವು ಈಗ ಕಪಿಲ್ ದೇವ್ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ಒಬ್ಬ ನಟಿಯನ್ನು ಹುಚ್ಚನಂತೆ ಪ್ರೀತಿಸಿದ್ದು, ಆರಾಧಿಸಿದ್ದು ನಿಮಗೆ ಗೊತ್ತೆ? ಆದರೆ ಇಬ್ಬರೂ ಮದುವೆಯಾಗಲು ಸಾಧ್ಯವಾಗಲಿಲ್ಲ. ಯಾರಾಕೆ?

ಕಪಿಲ್ ದೇವ್ ಕ್ರಿಕೆಟ್ ಮೈದಾನದಲ್ಲಿ ಅನೇಕ ಸ್ಮರಣೀಯ ಕ್ಷಣಗಳನ್ನು ನೀಡಿದ್ದಾರೆ. ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ 1983ರಲ್ಲಿ ಮೊದಲ ODI ವಿಶ್ವಕಪ್ ಗೆದ್ದಿತು. ಅವರ ಲವ್‌ ಸ್ಟೋರಿಯ ಬಗ್ಗೆಯೂ ಹೆಚ್ಚು ಚರ್ಚೆಯಾಗಿದೆ. ಆಕೆ ಯಾರು ಗೊತ್ತೆ? ಮುಂದೆ ಕಮಲ ಹಾಸನ್‌ ಅವರನ್ನು ಮದುವೆಯಾದ ಸಾರಿಕಾ! ಮದುವೆಗೆ ಮೊದಲು ಕಪಿಲ್ ದೇವ್ ನಟಿ ಸಾರಿಕಾ ಅವರನ್ನು ಭೇಟಿಯಾದರು. ಇವರ ಸಂಬಂಧ ಹೇಗೆ ಪ್ರಾರಂಭವಾಯಿತು ಮತ್ತು ಕೊನೆಗೊಂಡಿತು ಎಂದು ತಿಳಿಯೋಣ.

ವರದಿಗಳ ಪ್ರಕಾರ, ನಟ ಮನೋಜ್ ಕುಮಾರ್ ಅವರ ಪತ್ನಿಯಿಂದಾಗಿ ಕಪಿಲ್ ದೇವ್ ಮತ್ತು ಸಾರಿಕಾ ಭೇಟಿಯಾದರು. ಆ ಸಮಯದಲ್ಲಿ ಇಬ್ಬರೂ ಒಂಟಿಯಾಗಿದ್ದರು ಮತ್ತು ನಂತರ ಪರಸ್ಪರ ಹತ್ತಿರವಾದರು. ಸಾರಿಕಾ ಮತ್ತು ಕಪಿಲ್ ದೇವ್ ಪರಸ್ಪರ ಇಷ್ಟಪಟ್ಟರು. ಆಗ ಕಪಿಲ್‌ ದೇವ್‌, ಆ ಸಮಯದಲ್ಲಿ ಅವರ ಗೆಳತಿಯಾಗಿದ್ದ ಮತ್ತು ಇಂದು ಅವರ ಪತ್ನಿಯಾಗಿರುವ ರೋಮಿ ಭಾಟಿಯಾ ಜೊತೆಗಿದ್ದರು. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮುನಿಸು ಉಂಟಾಗಿತ್ತು. ಹೀಗಾಗಿ ಕಪಿಲ್‌, ಸಾರಿಕಾಗೆ ಹತ್ತಿರವಾದರು. ಇಬ್ಬರೂ ಸಾಕಷ್ಟು ರೊಮ್ಯಾನ್ಸ್‌ ಮಾಡಿದ್ದರು. ಆದರೆ ಸ್ವಲ್ಪ ಸಮಯದ ನಂತರ, ಕಪಿಲ್ ದೇವ್ ಈ ಸಂಬಂಧವನ್ನು ಮುರಿದುಕೊಂಡು ರೋಮಿ ಅವರ ಬಳಿಗೆ ಹೋಗಲು ನಿರ್ಧರಿಸಿದರು.

ಶೀಘ್ರದಲ್ಲೇ ಕಪಿಲ್-‌ ರೋಮಿ ವಿವಾಹವಾದರು. ನಂತರ ಸಾರಿಕಾ ದಕ್ಷಿಣದ ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರನ್ನು ವಿವಾಹವಾದರು. ಇವರಿಬ್ಬರೂ 2004ರಲ್ಲಿ ವಿಚ್ಛೇದನ ಪಡೆದರು. ಸಾರಿಕಾ ಕಮಲ್ ಹಾಸನ್ ಅವರನ್ನು ಪ್ರೀತಿಸಿದಾಗ, ಕಮಲ್‌ ಅವರು ಆಗಲೇ ಮದುವೆಯಾಗಿದ್ದರು. ಅವರು ಒಂದು ಚಿತ್ರದಲ್ಲಿ ಕೆಲಸ ಮಾಡುವಾಗ ಕಮಲ್ ಹಾಸನ್ ಅವರನ್ನು ಭೇಟಿಯಾದರು. ಇಬ್ಬರೂ ಬೇರೆಯಾಗಲು ಪ್ರಯತ್ನಿಸಿದರು. ಆದರೆ ಅದು ಆಗಲಿಲ್ಲ. ನಂತರ ಕಮಲ್‌, ಆಗಿನ ಪತ್ನಿ ವಾಣಿ ಗಣಪತಿಯಿಂದ ವಿಚ್ಛೇದನ ಪಡೆದರು. ಸಾರಿಕಾ ಅವರ ಜೀವನದಲ್ಲಿ ಬಂದರು. ಕಮಲ್ ಮತ್ತು ಸಾರಿಕಾ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ – ಶ್ರುತಿ ಮತ್ತು ಅಕ್ಷರ.

ಶ್ರುತಿ ಹಾಸನ್ ತನ್ನ ಪೋಷಕರ ವಿಚ್ಛೇದನದ ಬಗ್ಗೆ ಮಾತನಾಡಿದ್ದುಂಟು. ಅವರಿಬ್ಬರೂ ಒಟ್ಟಿಗೆ ಬದುಕಲು ಪ್ರಯತ್ನಿಸಿದ್ದರು. ಆದರೆ ಅದು ವರ್ಕೌಟ್‌ ಆಗಲಿಲ್ಲ. ಈಗ ಡಿವೋರ್ಸ್ ಮೊದಲಿಗಿಂತ ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚೆಗೆ‌ ಶ್ರುತಿ ಅವರು ರಜನಿಕಾಂತ್ ಅವರ ‘ಕೂಲಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಆ ಚಿತ್ರದಲ್ಲಿ ಲವರ್‌ ಪಾತ್ರವನ್ನು ನಿರ್ವಹಿಸಿದ್ದಾರೆ.

ಶ್ರುತಿ ಹಾಸನ್ ತೆಲುಗು ಚಿತ್ರ ‘ಅನಗನಾಗ ಓ ಧೀರುಡು’ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟರು. ಅವರು ‘7 ಅರಿವು’ ಮೂಲಕ ತಮಿಳು ಸಿನಿಮಾಗೆ ಪಾದಾರ್ಪಣೆ ಮಾಡಿದರು. ಅವರು ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ಒಂದು ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ.



Source link

Leave a Reply

Your email address will not be published. Required fields are marked *