Bengaluru Namma Metro Fare Hike: ಫೆಬ್ರವರಿ 9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ: ಇಲ್ಲಿದೆ ಹೊಸ ದರಪಟ್ಟಿ! | Bengaluru Namma Metro Fare Hike Check New Prices For Majestic Whitefield Etc Sat

Bengaluru Namma Metro Fare Hike: ಫೆಬ್ರವರಿ 9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ: ಇಲ್ಲಿದೆ ಹೊಸ ದರಪಟ್ಟಿ! | Bengaluru Namma Metro Fare Hike Check New Prices For Majestic Whitefield Etc Sat


ಬೆಂಗಳೂರಿನ ‘ನಮ್ಮ ಮೆಟ್ರೋ’ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಫೆ.9, ಸೋಮವಾರದಿಂದ ಹೊಸ ದರಗಳು ಜಾರಿಗೆ ಬರಲಿದ್ದು, ನಿರ್ವಹಣಾ ವೆಚ್ಚದ ಹೆಚ್ಚಳವಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ದರ ಏರಿಕೆಗೆ ಮೆಟ್ರೋ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು (ಫೆ.04): ಸಿಲಿಕಾನ್ ಸಿಟಿಯ ಜೀವನಾಡಿ ಎಂದೇ ಕರೆಯಲ್ಪಡುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಈಗ ದರ ಏರಿಕೆಯ ಬಿಸಿ ತಟ್ಟಲಿದೆ. ಮೆಟ್ರೋ ಸಂಚಾರ ದರವನ್ನು ಶೇಕಡಾ 5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿದೆ. ಈ ಹೊಸ ದರಗಳು ಬರುವ ಫೆಬ್ರವರಿ 9, ಸೋಮವಾರದಿಂದಲೇ ಜಾರಿಗೆ ಬರಲಿವೆ.

ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಧಾರ

ಕಳೆದ ಕೆಲವು ದಿನಗಳ ಹಿಂದಷ್ಟೇ ನಡೆದ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಉನ್ನತ ಮಟ್ಟದ ಬೋರ್ಡ್ ಸಭೆಯಲ್ಲಿ ದರ ಏರಿಕೆಯ ಕುರಿತು ಸುದೀರ್ಘ ಚರ್ಚೆ ನಡೆದಿತ್ತು. ವಿದ್ಯುತ್ ವೆಚ್ಚದ ಹೆಚ್ಚಳ, ನಿರ್ವಹಣಾ ವೆಚ್ಚ ಹಾಗೂ ಸಿಬ್ಬಂದಿಗಳ ವೇತನ ಹೆಚ್ಚಳದ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಇಂದು ರಾಜ್ಯ ಸರ್ಕಾರ ಅಂತಿಮ ಅನುಮೋದನೆ ನೀಡಿದೆ.

ಫೆಬ್ರವರಿ 9ರಿಂದ ಹೊಸ ದರ ಜಾರಿ

ಕಳೆದ ವರ್ಷ ಅಂದರೆ 2025ರ ಫೆಬ್ರವರಿ 9ರಂದು ಬಿಎಂಆರ್‌ಸಿಎಲ್ ದರಗಳಲ್ಲಿ ಗಣನೀಯ ಬದಲಾವಣೆ ಮಾಡಿತ್ತು. ಕಾಕತಾಳೀಯ ಎಂಬಂತೆ ಈ ವರ್ಷವೂ ಫೆಬ್ರವರಿ 9ರಿಂದಲೇ ಹೊಸ ದರಗಳು ಜಾರಿಯಾಗುತ್ತಿವೆ. ಈ ಬಾರಿ ಶೇಕಡಾ 5ರಷ್ಟು ಏರಿಕೆ ಮಾಡಲಾಗಿದ್ದು, ಕನಿಷ್ಠ ಮತ್ತು ಗರಿಷ್ಠ ದರಗಳಲ್ಲಿ 2 ರಿಂದ 5 ರೂಪಾಯಿಗಳವರೆಗೆ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಬಿಎಂಆರ್‌ಸಿಎಲ್ ಇಂದೇ ಅಥವಾ ನಾಳೆ ಅಧಿಕೃತ ದರ ಪಟ್ಟಿಯನ್ನು (Fare Chart) ಬಿಡುಗಡೆ ಮಾಡಲಿದೆ.

ಇಂದಿನ ದರ ಮತ್ತು ಸೋಮವಾರದಿಂದ ಆಗಲಿರುವ ನೂತನ ದರಪಟ್ಟಿ ಇಲ್ಲಿದೆ

  • ವೈಟ್ ಫೀಲ್ಡ್ – ಚೆಲ್ಲಘಟ್ಟ: ಪ್ರಸ್ತುತ ದರ ₹90 ಇದೆ. ಶೇ.5 ಹೆಚ್ಚಳ ಬಳಿಕ ₹95 ಆಗಲಿದೆ (ನೇರಳೆ ಮಾರ್ಗ )
  • ರೇಷ್ಮೆ ಸಂಸ್ಥೆ – ಮಾದಾವಾರ: ಪ್ರಸ್ತುತ ದರ ₹90 ಇದೆ. ಶೇ.5 ಹೆಚ್ಚಳ ಬಳಿಕ ₹95 ಆಗಲಿದೆ (ಗ್ರೀನ್ ಲೈನ್ )
  • ಆರ್.ವಿ. ರಸ್ತೆ – ಬೊಮ್ಮಸಂದ್ರ: ಪ್ರಸ್ತುತ ₹60 ಇದೆ. ಶೇ.5 ಹೆಚ್ಚಳ ಬಳಿಕ ₹63 ಆಗಲಿದೆ.( ಯೆಲ್ಲೋ ಲೈನ್ )

ಮೆಜೆಸ್ಟಿಕ್ ನಿಂದ ವೈಟ್ ಫೀಲ್ಡ್ ಗೆ ಹಾಲಿ ದರ 80 ಇದ್ದು ದರ ಏರಿಕೆಯಿಂದ 84 ರೂ. ಆಗುತ್ತದೆ.

ಮೆಜೆಸ್ಟಿಕ್‌ನಿಂದ ಬೊಮ್ಮಸಂದ್ರ ಹಾಲಿ ದರ 80 ಇದ್ದು ದರ ಏರಿಕೆಯಿಂದ 84 ರೂ. ಆಗುತ್ತದೆ

ಮೆಜೆಸ್ಟಿಕ್‌ನಿಂದ ಚಲ್ಲಘಟ್ಟ ಹಾಲಿ ದರ 60 ಇದ್ದು ಏರಿಕೆಯಿಂದ 63 ರೂಪಾಯಿ ಆಗುತ್ತದೆ.

ಇನ್ನು ಒಂದು ನಿಲ್ದಾಣದಿಂದ ತತಕ್ಷಣದ ಇನ್ನೊಂದು ನಿಲ್ದಾಣಕ್ಕೆ ಕನಿಷ್ಠ ದರ ₹10 ಇದ್ದು, ಶೇ.5 ಏರಿಕೆ ಬಳಿಕ 11 ರುಪಾಯಿ ಆಗಲಿದೆ. ಇನ್ನು ಬೆಂಗಳೂರು ಎಲ್ಲ ಮಾರ್ಗಗಳ ಕೊನೆಯ ಮೆಟ್ರೋ ನಿಲ್ದಾಣಗಳನ್ನು ತಲುಪಲು ಇರುವ ಗರಿಷ್ಠ ದರ ಪ್ರಸ್ತುತ ₹90 ಇದ್ದು, ಅದರು ಶೇ.5 ದರ ಹೆಚ್ಚಳದ ಬಳಿಕ ₹95 ಆಗಲಿದೆ.

ಪ್ರಯಾಣಿಕರ ಆಕ್ರೋಶ

ಮೆಟ್ರೋ ದರ ಏರಿಕೆಯ ಸುದ್ದಿ ಹೊರಬೀಳುತ್ತಿದ್ದಂತೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಈಗಾಗಲೇ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ. ಸಾರ್ವಜನಿಕ ಸಾರಿಗೆಯಾದ ಮೆಟ್ರೋದಲ್ಲೂ ಪದೇ ಪದೇ ದರ ಏರಿಸಿದರೆ ಜನಸಾಮಾನ್ಯರ ಕಥೆಯೇನು?’ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಆದರೆ, ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಮೆಟ್ರೋ ಸೇವೆಯ ಗುಣಮಟ್ಟ ಕಾಪಾಡಲು ಮತ್ತು ಹೊಸ ಮಾರ್ಗಗಳ ವಿಸ್ತರಣೆಗೆ ಈ ಹಣಕಾಸಿನ ಹೊಂದಾಣಿಕೆ ಅಗತ್ಯವಾಗಿದೆ ಎನ್ನಲಾಗಿದೆ.

ಸ್ಮಾರ್ಟ್ ಕಾರ್ಡ್ ರಿಯಾಯಿತಿ ಮುಂದುವರಿಯುವುದೇ?

ಪ್ರಸ್ತುತ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ನೀಡಲಾಗುತ್ತಿರುವ ರಿಯಾಯಿತಿಯಲ್ಲಿ ಬದಲಾವಣೆಯಾಗಲಿದೆಯೇ ಅಥವಾ ಇಲ್ಲವೇ ಎಂಬ ಕುರಿತು ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಬಿಎಂಆರ್‌ಸಿಎಲ್ ನೀಡಲಿರುವ ಅಧಿಕೃತ ಪ್ರಕಟಣೆಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಒಟ್ಟಿನಲ್ಲಿ, ಸೋಮವಾರದಿಂದ ಮೆಟ್ರೋ ಪ್ರಯಾಣ ತುಸು ದುಬಾರಿಯಾಗುವುದು ಮಾತ್ರ ಗ್ಯಾರಂಟಿ.



Source link

Leave a Reply

Your email address will not be published. Required fields are marked *