Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು | Young Man Brutally Murdered After Being Hit By Car Holenarasipur Hassan Mrq

Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು | Young Man Brutally Murdered After Being Hit By Car Holenarasipur Hassan Mrq



Hassan: ನಿಧಾನವಾಗಿ ಚಲಿಸು ಎಂದಿದ್ದಕ್ಕೆ ಕಾರ್ ಗುದ್ದಿಸಿ ಯುವಕನ ಭೀಕರ ಹತ್ಯೆ; ಮೂವರು ಪಾರು | Young Man Brutally Murdered After Being Hit By Car Holenarasipur Hassan Mrq

ಹೊಳೆನರಸೀಪುರದ ಸೂರನಹಳ್ಳಿ ಬಳಿ, ನಿಧಾನವಾಗಿ ಚಲಿಸುವಂತೆ ಬುದ್ಧಿಮಾತು ಹೇಳಿದ್ದಕ್ಕೆ ಕೋಪಗೊಂಡ ಕಾರು ಚಾಲಕನೊಬ್ಬ ನಾಲ್ವರ ಮೇಲೆ ಕಾರು ಹರಿಸಿದ್ದಾನೆ. ಈ ಘಟನೆಯಲ್ಲಿ ಮನು ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಹೊಳೆನರಸೀಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ ಸೂರನಹಳ್ಳಿ ಸಮೀಪ ಬುದ್ಧಿಮಾತು ಹೇಳಿದ ವ್ಯಕ್ತಿಯ ಮೇಲೆ ಆಕ್ರೋಶಗೊಂಡ ಕಾರಿನ ಚಾಲಕ ಕಾರಿನಿಂದ ನಡೆಸಿದ ಡೆಡ್ಲಿ ಎಟ್ಯಾಕ್ ಪರಿಣಾಮ ಮನು(22) ಎಂಬ ವ್ಯಕ್ತಿ ಸ್ಥಳದಲೇ ಸಾವನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ 11.45 ಸುಮಾರಿನಲ್ಲಿ ನಡೆದಿದೆ.

ಸೂರನಹಳ್ಳಿ ಗ್ರಾಮದ ರಸ್ತೆ ಬದಿ ಮನು, ಅಭಿಷೇಕ, ರಾಕೇಶ್ ಹಾಗೂ ಕುಶಾಲ್, ಪಟ್ಟಣದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿ, ಸ್ವಗ್ರಾಮದ ರಸ್ತೆ ಬದಿ ಮಾತನಾಡುತ್ತಿದ್ದ ವೇಳೆ ಪಟ್ಟಣದಿಂದ ಕೆ.ಎ.01 ಎಂ.ಎಫ್.2883 ಸಂಖ್ಯೆಯ ಕಾರು ವೇಗದಿಂದ ಚಲಿಸಿದೆ. ಅದನ್ನು ಕಂಡ ಮನು ಮತ್ತು ಗೆಳೆಯರು ನಿಧಾನವಾಗಿ ಚಲಿಸುವಂತೆ ಬುದ್ಧಿಮಾತು ಹೇಳಿದ್ದಾರೆ. 

ನಾಲ್ವರ ಮೇಲೆ ಕಾರ್ ನುಗ್ಗಿಸಿದ ಚಾಲಕ

ಆದರೆ ಕಾರಿನ ಚಾಲಕ ಬುದ್ಧಿವಾದವನ್ನು ತಪ್ಪಾಗಿ ಆರ್ಥೈಸಿಕೊಂಡು ಮುಂದಕ್ಕೆ ಚಲಿಸುತ್ತಿದ್ದ ಕಾರನ್ನು ತಿರುಗಿಸಿಕೊಂಡು ವೇಗವಾಗಿ ಬಂದು ರಸ್ತೆ ಬದಿ ನಿಂತಿದ್ದ ನಾಲ್ವರ ಮೇಲೆ ನುಗ್ಗಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ನಾಲ್ವರಲ್ಲಿ ಮನು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಮತ್ತು ಜತೆಗಿದ್ದ ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ತೀವ್ರವಾಗಿ ಗಾಯಗೊಂಡಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ: ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?

ಕಾರ್ ವಶಕ್ಕೆ, ಚಾಲಕ ಪರಾರಿ

ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತ ಮಾಡಿದ ಕಾರನ್ನು ವಶಕ್ಕೆ ಪಡೆದಿದ್ದಾರೆ ಮತ್ತು ತಲೆ ಮರೆಸಿಕೊಂಡಿರುವ ಕಾರು ಚಾಲಕ ಪತ್ತೆಗಾಗಿ ಪೋಲಿಸರು ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ: ರಕ್ಷಣೆ ಕೋರಿ ಮನವಿ



Source link

Leave a Reply

Your email address will not be published. Required fields are marked *