Headlines

Election ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು? | Will Karnataka Get A New Cm Post Elections Congress Mp Latest Statement Buzz

Election ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು? | Will Karnataka Get A New Cm Post Elections Congress Mp Latest Statement Buzz



Election ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು? | Will Karnataka Get A New Cm Post Elections Congress Mp Latest Statement Buzz

ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು?, ಡಿನ್ನರ್ ಮೀಟಿಂಗ್‌ ಸಾಮಾನ್ಯ ಪ್ರಕ್ರಿಯೆ ಇದರಲ್ಲಿ ರಾಜಕೀಯವಿಲ್ಲ ಎಂದಿರುವ ಸೋನಿಲ್ ಬೋಸ್, ಪಂಚ ರಾಜ್ಯ ಚುನಾವಣೆ ಬಳಿಕ ನಡೆಯುವ ಕೆಲ ಮಹತ್ವದ ನಿರ್ಧಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ಚಾಮರಾಜನಗರ (ಮಾ.19) ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬ್ಯೂಸಿಯಾಗಿದೆ. ಇದರ ನಡುವೆ ಕರ್ನಾಟಕದ ಅಧಿಕಾರ ಹಂಚಿಕೆ ಕಾವು ತಣ್ಣಗಾಗಿದೆ. ಕಾಂಗ್ರೆಸ್ ಡಿನ್ನರ್ ಮೀಟಿಂಗ್, ಅಧಿಕಾರ ಬದಲಾವಣೆ ಕುರಿತು ಚಾಮರಾಜನಗರ ಸಂಸದ ಸುನಿಲ್ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರು ಡಿನ್ನರ್ ಮೀಟಿಂಗ್ ಕೊಡುವುದರಲ್ಲಿ ವಿಶೇಷ ರಾಜಕೀಯ ಅರ್ಥವಿಲ್ಲ. ಇದು ಸಾಮಾನ್ಯ ಎಂದಿರುವ ಸೋನಿಲ್ ಬೋಸ್, ರಾಜ್ಯದ ಸಿಎಂ ವಿಚಾರದಲ್ಲೂ ಹೈಕಮಾಂಡ್ ಕೈಹೊಳ್ಳುವ ನಿರ್ಧಾರವೇ ಮುಖ್ಯ ಎಂದಿದ್ದಾರೆ.

ಪಂಚ ರಾಜ್ಯ ಚುನಾವಣೆ ಬಳಿಕ ನಿರ್ಧಾರ

ಸದ್ಯ ಕಾಂಗ್ರೆಸ್ ಹೈಕಮಾಂಡ್ ಪಂಚ ರಾಜ್ಯ ಚುನಾವಣೆಯಲ್ಲಿ ತೊಡಗಿಸಿಕೊಂಡಿದೆ. ರಾಹುಲ್ ಗಾಂಧಿ ಪಂಚ ರಾಜ್ಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ರಾಹುಲ್ ಗಾಂಧಿ ಶ್ರಮಿಸುತ್ತಿದ್ದಾರೆ. ಪಂಚ ರಾಜ್ಯ ಚುನಾವಣೆ ಬಳಿಕ ಹೈಕಮಾಂಡ್ ಕರ್ನಾಟಕ ವಿಚಾರದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಅಧಿಕಾರದ ಬಗ್ಗೆ ಸ್ಪಷ್ಟಪಡಿಸಬೇಕಿದೆ ಎಂದಿದ್ದಾರೆ.

ಅಧಿಕಾರ ಬದಲಾವಣೆ ಕುರಿತು ರಾಜ್ಯ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಸುನಿಲ್ ಬೋಸ್ ಹೇಳಿದ್ದಾರೆ. ಕರ್ನಾಟಕ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವಾಗಲಿದೆ. ಜನರು ಕಾಂಗ್ರೆಸ್ ನಾಯಕತ್ವ, ಕಾಂಗ್ರೆಸ್ ಸರ್ಕಾರ ಬಯಸುತ್ತಿದ್ದಾರೆ. ಕರ್ನಾಟಕದಲ್ಲಿ ಜನ ಭಾರಿ ಬದಲಾವಣೆ ಬಯಸಿ ಅಧಿಕಾರ ತಂದಿದ್ದಾರೆ. ಇಲ್ಲಿನ ಯೋಜನೆಗಳು, ಗ್ಯಾರೆಂಟಿ, ಅಭಿವೃದ್ದಿ ಕೆಲಸಗಳು ಇತರ ರಾಜ್ಯಕ್ಕೂ ಮಾದರಿಯಾಗಿದೆ. ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವಾಗಲಿದೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *