Headlines

Dog Satish ರೌಡಿಶೀಟರ್ ಜೊತೆ ಪಾರ್ಟಿ ಮಾಡಿ ರೀಲ್ಸ್ ಬಿಲ್ಡಪ್ ಪಡದೆ ಡಾಗ್ ಸತೀಶ್‌ಗೆ ಸಂಕಷ್ಟ, ಕೇಸ್ ದಾಖಲು | Bigg Boss Dog Satish In Legal Trouble After Viral Party Video With With Rowdy Sheeter Bengaluru

Dog Satish ರೌಡಿಶೀಟರ್ ಜೊತೆ ಪಾರ್ಟಿ ಮಾಡಿ ರೀಲ್ಸ್ ಬಿಲ್ಡಪ್ ಪಡದೆ ಡಾಗ್ ಸತೀಶ್‌ಗೆ ಸಂಕಷ್ಟ, ಕೇಸ್ ದಾಖಲು | Bigg Boss Dog Satish In Legal Trouble After Viral Party Video With With Rowdy Sheeter Bengaluru



Dog Satish ರೌಡಿಶೀಟರ್ ಜೊತೆ ಪಾರ್ಟಿ ಮಾಡಿ ರೀಲ್ಸ್ ಬಿಲ್ಡಪ್ ಪಡದೆ ಡಾಗ್ ಸತೀಶ್‌ಗೆ ಸಂಕಷ್ಟ, ಕೇಸ್ ದಾಖಲು | Bigg Boss Dog Satish In Legal Trouble After Viral Party Video With With Rowdy Sheeter Bengaluru

ರೌಡಿಶೀಟರ್ ಜೊತೆ ಪಾರ್ಟಿ ಮಾಡಿ ರೀಲ್ಸ್ ಬಿಲ್ಡಪ್ ಪಡದೆ ಡಾಗ್ ಸತೀಶ್‌ಗೆ ಸಂಕಷ್ಟ, ಕೇಸ್ ದಾಖಲು, ವಿಡಿಯೋ ಮಾಡಿ ತನ್ನ ರೇಂಜ್ ಬೇರೆ ಎಂದು ಬಿಂಬಿಸಿದ್ದ ಡಾಗ್ ಸತೀಶ್ ವಿರುದ್ದ ದೂರು ದಾಖಲಾಗಿದ್ದು, ಠಾಣೆಗೆ ತೆರಳಿ ವಿಚಾರಣೆ ಎದುರಿಸಬೇಕಿದೆ.

ಬೆಂಗಳೂರು (ಮಾ.19) ಬಿಗ್ ಬಾಸ್ ಮೂಲಕ ಇಡೀ ಕರ್ನಾಟಕ ಜನತೆಗೆ ಪರಿಚಯವಾದ ಡಾಗ್ ಸತೀಶ್ ರಿಯಾಲಿಟಿ ಶೋ ಮನೆಯಿಂದ ಹೊರಬಂದ ಬಳಿಕ ಮಾಡುತ್ತಿರುವ ಅವಾಂತರ ಮುಂದುವರಿದಿದೆ. ಪ್ರತಿ ಬಾರಿ ಬಿಲ್ಡಪ್ ತೆಗೆದುಕೊಂಡು ಪೇಚಿಗೆ ಸಿಲುಕುವ ಡಾಗ್ ಸತೀಶ್ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಡಾಗ್ ಸತೀಶ್ ಮೇಲೆ ಕೇಸ್ ದಾಖಲಾಗಿದೆ. ರೌಡಿ ಶೀಟರ್ ಜೊತೆ ಪಾರ್ಟಿ ಮಾಡಿ ಬಳಿಕ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡ ಡಾಗ್ ಸತೀಶ್ ಭಾರಿ ಬಿಲ್ಡಪ್ ತೆಗೆದುಕೊಂಡಿದ್ದರು. ಆದರೆ ಇದೇ ವಿಡಿಯೋದಿಂದ ಡಾಗ್ ಸತೀಶ್ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ರೌಡಿ ಶೀಟರ್ ಪಿ.ಮೂರ್ತಿ ಜೊತೆ ಪಾರ್ಟಿ

ರೌಡಿ ಶೀಟರ್ ಪಿ.ಮೂರ್ತಿ ಸೇರಿದಂತೆ ಇತರ ಕೆಲ ಉದ್ಯಮಿಗಳ ಪಾರ್ಟಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ಕೂಡ ಕಾಣಿಸಿಕೊಂಡಿದ್ದಾರೆ. ಮಾರ್ಚ್ 13 ರಂದು ಆರ್.ಟಿ.ನಗರ ಪಟೇಲ್ಸ್ ಇನ್ ಪಾರ್ಟಿ ಹಾಲ್ ನಲ್ಲಿ ಅದ್ಧೂರಿ ಬರ್ತ್‌ಡೇ ಪಾರ್ಟಿ ನಡೆದಿತ್ತು. ಪಿ.ಮೂರ್ತಿ ,ಡಾಗ್ ಸತೀಶ್,ದಾಸ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಬಿಲ್ಡಪ್ ಪಡೆಯಲು ಡಾಗ್ ಸತೀಶ್ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ರೌಡಿಶೀಟರ್ ಚಲನವಲನ ಮೇಲೆ ಕಣ್ಣಿಟ್ಟಿದ್ದ ಪೊಲೀಸ್

ರೌಡಿ ಶೀಟರ್ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸ್‌ಗೆ ಡಾಗ್ ಸತೀಶ್ ವಿಡಿಯೋ ಕಣ್ಣಿಗೆ ಬಿದ್ದಿದೆ. ಡಾಗ್ ಸತೀಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಈ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಗಮನಿಸಿದ ಸಿಸಿಬಿ ಇನ್ಸ್‌ಪೆಕ್ಟರ್ ಮಹದೇವಯ್ಯ ಜ್ಙಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಲ್ಡಪ್‌ ಹಾಡು ಬಳಸಿ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವಂತಹ ವೀಡಿಯೊ ಅಪ್ಲೋಡ್ ಮಾಡಲಾಗಿದೆ. ವೀಡಿಯೊದಲ್ಲಿರುವವರು ಮತ್ತು ಅಪ್ಲೋಡ್ ಮಾಡಿರುವ ವ್ಯಕ್ತಿಯನ್ನು ಕರೆಸಿ ವಿಚಾರಣೆ ನಡೆಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಡಾಗ್ ಸತೀಶ್ ಸೇರಿ ಹಲವರಿಗೆ ವಿಚಾರಣೆ ಸಂಕಷ್ಟ

ರೌಡಿ ಶೀಟರ್ ಪಿ ಮೂರ್ತಿ, ಡಾಗ್ ಸತೀಶ್ ಸೇರಿದಂತೆ ಈ ಪಾರ್ಟಿಯಲ್ಲಿದ್ದವರಿಗೆ ಇದೀಗ ಸಂಕಷ್ಟ ಶುರುವಾಗಿದೆ. ಡಾಗ್ ಸತೀಶ್ ವಿಡಿಯೋದಲ್ಲಿ ಕಾಣಿಸಿಕೊಂಡ ಎಲ್ಲರನ್ನು ಕರೆಯಿಸಿ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ರೌಡಿಗಳ ನಂಟಿನ ಕುರಿತು ಡಾಗ್ ಸತೀಶ್ ಪೊಲೀಸ್ ಎದುರು ವಿಚಾರಣೆ ಎದುರಿಸಬೇಕಿದೆ. ಬಿಲ್ಡಪ್ ಪಡೆಯಲು ಹೋದ ಡಾಗ್ ಸತೀಶ್ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಪಾರ್ಟಿ ಸೇರಿದ್ದರ ಉದ್ದೇಶ ಕುರಿತು ರೌಡಿ ಶೀಟರ್ ಪಿ.ಮೂರ್ತಿ ಸ್ಪಷ್ಟನೆ ನೀಡಬೇಕಿದೆ. ಜ್ಙಾನಭಾರತಿ ಪೊಲೀಸು ವಿಚಾರಣೆ ನಡೆಸಲಿದ್ದಾರೆ .

ವಿಡಿಯೋ ಡಿಲೀಟ್ ಮಾಡಿದ ಡಾಗ್ ಸತೀಶ್

ಡಾಗ್ ಸತೀಶ್ ಬಿಲ್ಡಪ್ ಕೊಟ್ಟು ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವರು, ಸರ್ ನಿಮ್ಮ ಲೆವೆಲ್ ಬೇರೆ ಎಂದು ಕಮೆಂಟ್ ಮಾಡಿದ್ದರು. ಹಿರಿ ಹಿರಿ ಹಿಗ್ಗದ ಡಾಗ್ ಸತೀಶ್ ಅಷ್ಟೇ ಬೇಗನೆ ವಿಡಿಯೋ ಡಿಲೀಟ್ ಮಾಡಿದ್ದಾರೆ. ಸಿಸಿಪಿ ಪೊಲೀಸರು ಈ ವಿಡಿಯೋ ಆಧರಿಸಿ ದೂರು ದಾಖಲಿಸಿದ್ದಾರೆ. ಇತ್ತ ರೌಡಿ ಶೀಟರ್ ಕಡೆಯವರಿಂದಲೂ ಡಾಗ್ ಸತೀಶ್‌ಗೆ ಆತಂಕ ಎದುರಾಗಿದೆ. ಸುಖಾಸುಮ್ಮನೆ ಬಿಲ್ಡಅಪ್ ಕೊಟ್ಟು ಪೊಲೀಸರ ಎದುರು ವಿಚಾರಣೆ ಎದುರಿಸುವಂತಾಗಿದೆ.



Source link

Leave a Reply

Your email address will not be published. Required fields are marked *