ಜ್ಯೋತಿಷಿ ಕಮಲಾಕರ ಭಟ್‌ ಪರಿಚಯಕ್ಕೆ ಕಾರಣವಾದ ಮಹಿಳೆ ಸಂಸಾರಕ್ಕೆ ಹುಳಿ ಹಿಂಡಿ ಗಂಡ-ಹೆಂಡತಿ ಬೇರೆ ಮಾಡಿದ ಸುವಿತ್ರಾ! | Illegal Relationship Allegations New Revelations Emerge In Renowned Astrologer Kamalakar Bhat Suchitra Case

ಜ್ಯೋತಿಷಿ ಕಮಲಾಕರ ಭಟ್‌ ಪರಿಚಯಕ್ಕೆ ಕಾರಣವಾದ ಮಹಿಳೆ ಸಂಸಾರಕ್ಕೆ ಹುಳಿ ಹಿಂಡಿ ಗಂಡ-ಹೆಂಡತಿ ಬೇರೆ ಮಾಡಿದ ಸುವಿತ್ರಾ! | Illegal Relationship Allegations New Revelations Emerge In Renowned Astrologer Kamalakar Bhat Suchitra Case



ಜ್ಯೋತಿಷಿ ಕಮಲಾಕರ ಭಟ್‌ ಪರಿಚಯಕ್ಕೆ ಕಾರಣವಾದ ಮಹಿಳೆ ಸಂಸಾರಕ್ಕೆ ಹುಳಿ ಹಿಂಡಿ ಗಂಡ-ಹೆಂಡತಿ ಬೇರೆ ಮಾಡಿದ ಸುವಿತ್ರಾ! | Illegal Relationship Allegations New Revelations Emerge In Renowned Astrologer Kamalakar Bhat Suchitra Case

ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಡುವಿನ ಸಂಬಂಧದ ಕುರಿತು ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮಗಳ ಜಾತಕ ತೋರಿಸುವ ನೆಪದಲ್ಲಿ ಆರಂಭವಾದ ಈ ಪರಿಚಯವು ಅಕ್ರಮ ಸಂಬಂಧಕ್ಕೆ ತಿರುಗಿ, ಹಣಕಾಸು ದುರುಪಯೋಗ ಮತ್ತು ಇತರರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿಸಿದ ಆರೋಪಗಳಿಗೆ ಕಾರಣವಾಗಿದೆ. 

ಉತ್ತರ ಕನ್ನಡ: ಕಾರವಾರ ಮೂಲದ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ನಡುವಿನ ಸಂಬಂಧಕ್ಕೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿದ್ದು, ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸುಚಿತ್ರಾ ಮತ್ತು ಕಮಲಾಕರ ಭಟ್ ನಡುವಿನ ಅಕ್ರಮ ಸಂಬಂಧದ ಹಿನ್ನೆಲೆ, ಅವರ ಸಂಪರ್ಕಕ್ಕೆ ಕಾರಣರಾದ ವ್ಯಕ್ತಿಗಳು ಹಾಗೂ ಅದರ ಪರಿಣಾಮಗಳು ಇದೀಗ ಒಂದೊಂದಾಗಿ ಬಹಿರಂಗವಾಗುತ್ತಿವೆ.

ಪರಿಷಯವಾಗಿದ್ದು ಹೇಗೆ?

ಮೂಲಗಳ ಪ್ರಕಾರ, ಸಾಗರದ ಸುಮಾ ನಾಯ್ಡು ಎಂಬ ಮಹಿಳೆಗೆ ಸುಚಿತ್ರಾ ತುಂಬಾ ಕ್ಲೋಸ್ ಆಗಿದ್ದಳು. ಇದೇ ಸುಮಾ ಆತ್ಮೀಯಳಾಗಿದ್ದ ಸುಚಿತ್ರಾಗೆ ಜ್ಯೋತಿಷಿಯಾಗಿದ್ದ ಕಮಲಾಕರ ಭಟ್ ಪರಿಚಯ ಮಾಡಿಕೊಟ್ಟಿದ್ದರು . ವಿಶೇಷವಾಗಿ, ಮಗಳ ಜಾತಕ ತೋರಿಸುವ ನೆಪದಲ್ಲಿ ಸುಚಿತ್ರಾ ಕಮಲಾಕರ ಭಟ್‌ಗೆ ಹತ್ತಿರವಾಗಿದ್ದಳು. ಈ ಪರಿಚಯ ಮುಂದುವರಿದು ಆಪ್ತ ಸಂಬಂಧಕ್ಕೆ ತಿರುಗಿದೆ. ಈ ಸಂಬಂಧವು ನಂತರ ಅಕ್ರಮ ಸಂಬಂಧದ ರೂಪ ಪಡೆದುಕೊಂಡಿದೆ.

ಕಮಲಾಕರ ಭಟ್‌ನ ಸಾಂಗತ್ಯ ಲಭಿಸಿದ ಬಳಿಕ, ಸುಚಿತ್ರಾ ತನ್ನ ಮಕ್ಕಳೊಂದಿಗೆ ಗುಡಿಸಲ ಮನೆಯ ಜೀವನವನ್ನು ಬಿಟ್ಟು ಶಿವಮೊಗ್ಗಕ್ಕೆ ಶಿಫ್ಟ್ ಆದಳು. ಅಲ್ಲದೆ, ಕಮಲಾಕರ ಭಟ್ ನ ಆಶ್ರಮದ ಉಸ್ತುವಾರಿ ಕೆಲಸಕ್ಕೂ ಸುಚಿತ್ರಾಳನ್ನು ನಿಯೋಜಿಸಲಾಗಿತ್ತು. ಈ ಅವಧಿಯಲ್ಲಿ ಸುಚಿತ್ರಾ ತನ್ನ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ ಎಂಬ ಆರೋಪವೂ ಇದೆ.

ಇನ್ನೂ, ಕಮಲಾಕರ ಭಟ್ ಧರಿಸಿದ್ದ ಬಂಗಾರದ ಸರವನ್ನೇ ಬಳಸಿ ಸುಚಿತ್ರಾಗೆ ತಾಳಿ ಕಟ್ಟಲಾಗಿದೆ ಎನ್ನುವ ವಿಷಯವೂ ಪ್ರಕರಣದಲ್ಲಿ ಚರ್ಚೆಗೆ ಬಂದಿದೆ. ಇದಲ್ಲದೆ, ನಾಗಹೆಡೆಯ ಆಕಾರದ ಎರಡು ಉಂಗುರಗಳನ್ನು ಪರಸ್ಪರ ಬದಲಿಸಿಕೊಂಡಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಎಲ್ಲಾ ಘಟನೆಗಳನ್ನು ಆಧರಿಸಿ, ಸುಚಿತ್ರಾ ತಾನು ಕಮಲಾಕರ ಭಟ್ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾಳೆ.

ಸುಚಿತ್ರಾ ಮತ್ತು ಕಮಲಾಕರ ಭಟ್ ನಡುವಿನ ಸಂಬಂಧದ ವಿಚಾರ ತಿಳಿದುಬಂದ ಬಳಿಕ, ಈ ಸಂಬಂಧ ಸರಿಯಲ್ಲ ಎಂದು ಸುಮಾ ನಾಯ್ಡು ಕಮಲಾಕರ್ ಭಟ್‌ಗೆ ಬುದ್ಧಿ ಹೇಳಿದ್ದಾಳೆ. ಬುದ್ದಿ ಹೇಳಿದ್ದನ್ನು ಸುಚಿತ್ರಾಗೆ ಹೋಗಿ ಕಮಲಾಕರ ಭಟ್ ವರದಿ ಒಪ್ಪಿಸಿದ್ದ ಇದರಿಂದ ಸಿಟ್ಟಿಗೆದ್ದ ಸುಚಿತ್ರಾ ಆಕೆಯ ಮೇಲೆ ಕೋಪಗೊಂಡು ಕೆಂಡವಾಗಿದ್ದಳು.

ಸುಮಾ ನಾಯ್ಡು ಸಂಸಾರಕ್ಕೆ ಹುಳಿ ಹಿಂಡಿದ ಸುಚಿತ್ರಾ!

ಈ ಹಿನ್ನೆಲೆಯಲ್ಲಿ, ಇದೇ ಸುಚಿತ್ರಾ ಸಾಗರದ ಸುಮಾ ನಾಯ್ಡು ಅವರ ಗಂಡನ ಬಳಿ ಇಲ್ಲಸಲ್ಲದ ಆರೋಪಗಳನ್ನು ಹೇಳಿ, ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗಿದ್ದಳು ಎಂಬ ಗಂಭೀರ ಆರೋಪವೂ ಪ್ರಕರಣದಲ್ಲಿ ಸೇರಿಕೊಂಡಿದೆ. ಇದರಿಂದ ಸುಮಾ ನಾಯ್ಡು ಮತ್ತು ಅವರ ಗಂಡನ ಮಧ್ಯೆ ಜಗಳವಾಗಿ ಇಬ್ಬರೂ ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆ, ಕಮಲಾಕರ ಭಟ್ ನ ಹಣವನ್ನು ಬಳಸಿ ಸುಚಿತ್ರಾ ಐಷಾರಾಮಿ ಜೀವನ ನಡೆಸುತ್ತಿದ್ದಳು. ಮೋಜು–ಮಸ್ತಿಯಲ್ಲಿ ತೊಡಗಿದ್ದ ಸುಚಿತ್ರಾ, ತಾನು ಕಮಲಾಕರ ಭಟ್ ನ ಪತ್ನಿ ಎಂದು ಹೇಳಿಕೊಳ್ಳುತ್ತಿದ್ದಳು.

ಒಟ್ಟಾರೆ, ಕಮಲಾಕರ್ ಭಟ್–ಸುಚಿತ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಸಂಬಂಧ, ಹಣಕಾಸು ದುರುಪಯೋಗ, ದಾಂಪತ್ಯ ಜೀವನಗಳ ಭಂಗ ಸೇರಿದಂತೆ ಹಲವು ಗಂಭೀರ ಆರೋಪಗಳು ಒಂದೊಂದಾಗಿ ಬಹಿರಂಗವಾಗುತ್ತಿದ್ದು, ಮುಂದಿನ ತನಿಖೆಯಿಂದ ಇನ್ನಷ್ಟು ಸತ್ಯಾಂಶಗಳು ಹೊರಬರುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *