ಬಯಲಾಯ್ತು ಕಾಂಡೋಮ್​ ಗುಟ್ಟು! ಘಮಘಮಕ್ಕೆ ಬೆಂಗಳೂರು, ನವರಾತ್ರಿಯಲ್ಲಿ ಗುಜರಾತ್ ಟಾಪ್​ 1 | Gujarat Is Top 1 Condom Sale During Navratri And Blore For Flavoured Suc

ಬಯಲಾಯ್ತು ಕಾಂಡೋಮ್​ ಗುಟ್ಟು! ಘಮಘಮಕ್ಕೆ ಬೆಂಗಳೂರು, ನವರಾತ್ರಿಯಲ್ಲಿ ಗುಜರಾತ್ ಟಾಪ್​ 1 | Gujarat Is Top 1 Condom Sale During Navratri And Blore For Flavoured Suc



ಬಯಲಾಯ್ತು ಕಾಂಡೋಮ್​ ಗುಟ್ಟು! ಘಮಘಮಕ್ಕೆ ಬೆಂಗಳೂರು, ನವರಾತ್ರಿಯಲ್ಲಿ ಗುಜರಾತ್ ಟಾಪ್​ 1 | Gujarat Is Top 1 Condom Sale During Navratri And Blore For Flavoured Suc

ಪ್ರಾಚೀನ ಈಜಿಪ್ಟ್‌ನಿಂದ ಆಧುನಿಕ ಕಾಲದವರೆಗೆ ಕಾಂಡೋಮ್‌ನ ಇತಿಹಾಸವನ್ನು ವಿವರಿಸುತ್ತಾ, ಭಾರತದಲ್ಲಿ ಬೆಂಗಳೂರು ಅತಿ ಹೆಚ್ಚು ಕಾಂಡೋಮ್ ಬಳಸುವ ನಗರವಾಗಿದೆ ಎಂದು ಈ ಲೇಖನ ಹೇಳುತ್ತದೆ. ಆದರೆ, ನವರಾತ್ರಿ ಹಬ್ಬದ ಸಮಯದಲ್ಲಿ ಗುಜರಾತ್‌ನಲ್ಲಿ, ವಿಶೇಷವಾಗಿ ಗರ್ಭಾ ನೃತ್ಯದ ಕಾರಣದಿಂದ, ಕಾಂಡೋಮ್ ಮಾರಾಟವು ಅಗ್ರಸ್ಥಾನಕ್ಕೇರುವ ಅಚ್ಚರಿಯ ಸಂಗತಿಯನ್ನು ಇದು ಬಹಿರಂಗಪಡಿಸುತ್ತದೆ.

ಮಕ್ಕಳ ಜನನ ನಿಯಂತ್ರಣಕ್ಕೆ ತಯಾರಿಸುತ್ತಿರುವ ಕಾಂಡೋಮ್​ನ ಇತಿಹಾಸವೇ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕ್ರಿಸ್ತ ಪೂರ್ವ 1350ರಲ್ಲಿಯೇ ಇದನ್ನು ಪ್ರಾಚೀನ ಈಜಿಪ್ಟಿಗನ್ನರು ಸೋಂಕು ತಡೆಗಟ್ಟಲು ಆರಂಭಿಸಿದ್ದರು ಎಂದು ಇತಿಹಾಸ ಹೇಳುತ್ತದೆ. 16ನೇ ಶತಮಾನದಲ್ಲಿ ಇದನ್ನು ಗರ್ಭನಿರೋಧಕವಾಗಿ ಪ್ರಯೋಗಿಸಲಾಯಿತು. ಆರಂಭದಲ್ಲಿ ರೋಮನ್ನರು ಪ್ರಾಣಿಗಳ ಮೂತ್ರಕೋಶ-ಕರುಳಿನಿಂದ ಮಾಡಿದ ಸಾಧನಗಳನ್ನು ಬಳಸುತ್ತಿದ್ದರು. ಜಪಾನ್‌ನಲ್ಲಿ ಆಮೆ ಚಿಪ್ಪಿನಿಂದ ಮಾಡಿದ ಕಾಂಡೋಮ್‌ಗಳೂ ಇದ್ದವು. ರಬ್ಬರ್​ ಬಳಕೆ ಆರಂಭವಾದದ್ದು 1844 ರಲ್ಲಿ ಎನ್ನಲಾಗಿದೆ. 20ನೇ ಶತಮಾನದಲ್ಲಿ ಲ್ಯಾಟೆಕ್ಸ್ ತಂತ್ರಜ್ಞಾನವು ಆಧುನಿಕ, ಸುರಕ್ಷಿತ ಕಾಂಡೋಮ್‌ಗಳ ಉತ್ಪಾದನೆಗೆ ಕಾರಣವಾಯಿತು.

ಕಾಂಡೋಮ್​ ರಸಹ್ಯ

1980 ರ ದಶಕದಲ್ಲಿ HIV/AIDS ಜಾಗೃತಿಯಿಂದಾಗಿ ಕಾಂಡೋಮ್ ಬಳಕೆ ಜಾಗತಿಕವಾಗಿ ಹೆಚ್ಚಾಯಿತು. ಇಂದು ಇವುಗಳನ್ನು ನಯಗೊಳಿಸಿದ ವಿಭಿನ್ನ ಆಕಾರ ಮತ್ತು ವಿನ್ಯಾಸಗಳಲ್ಲಿ ಉತ್ಪಾದಿಸಲಾಗುತ್ತದೆ. ಹೋಗಲಿ ಬಿಡಿ ಇತಿಹಾಸ ಈಗ ಯಾರಿಗೆ ಬೇಕು ಎಂದು ಕೇಳುವುದು ಉಂಟು. ಅದೇನೇ ಇದ್ದರೂ ಇದೀಗ ಕಾಂಡೋಮ್​ ಹೆಚ್ಚು ಸದ್ದು ಮಾಡುತ್ತಿರುವುದು ಕಾಲೇಜು, ಹಾಸ್ಟೆಲ್​ ಇಂಥ ಕಡೆಗಳಲ್ಲಿ ಎನ್ನುವ ಆಘಾತಕಾರಿ ಸುದ್ದಿಗಳು ಆಗಾಗ್ಗೆ ಸದ್ದು ಮಾಡುವುದು ಉಂಟು. ನಮ್ಮ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಹಾಸ್ಟೆಲ್​, ಕಾಲೇಜುಗಳ ಸಮೀಪ ಇವುಗಳ ಬಳಕೆ ಹೆಚ್ಚುತ್ತಿರುವುದು ಆಘಾತಕಾರಿಯೂ ಆಗಿದೆ.

ಅಧ್ಯಯನ ವರದಿ

ಇದೀಗ ರಾಜ್ಯದ ಕಾಂಡೋಮ್​ ಬಳಕೆಯ ಬಗ್ಗೆ ಕೆಲವೊಂದು ಮಾಹಿತಿಗಳು ಹೊರ ಬಂದಿವೆ. ಅದೇನೆಂದರೆ, ಭಾರತದಲ್ಲಿ ಅತಿ ಹೆಚ್ಚು ಕಾಂಡೋಮ್​ ಬಳಸುವವರ ಒಟ್ಟಾರೆ ಅಂಕಿ ಅಂಶ ತೆಗೆದುಕೊಂಡರೆ ಬೆಂಗಳೂರು ನಂ.1 ಇದೆ. ಆದರೆ ಇಲ್ಲಿ ಘಮಘಮಿಸುವ ಕಾಂಡೋಮ್​ ಅರ್ಥಾತ್​ ವಿವಿಧ ಫ್ಲೇವರ್​ಗಳ ಕಾಂಡೋಮ್​ಗೆ ಹೆಚ್ಚಿನ ಬೇಡಿಕೆ ಇದೆಯಂತೆ. ಆದರೆ ಕುತೂಹಲ ಎಂದರೆ ನವರಾತ್ರಿಯ ಸಂದರ್ಭದಲ್ಲಿ ಟಾಪ್​ 1 ಸ್ಥಾನದಲ್ಲಿ ಇರುವುದು ಗುಜರಾತ್​. ಇಲ್ಲಿ ಗರ್ಭಾ ನೃತ್ಯದ ಸಂದರ್ಭದಲ್ಲಿ ಮೋಜು ಮಸ್ತಿ ನಡೆಯುವ ಹಿನ್ನೆಲೆಯಲ್ಲಿ, ಕಾಂಡೋಮ್​ ಬೇಕೇ ಬೇಕು ಎನ್ನುವುದು ತಜ್ಞರು ಹೇಳುತ್ತಾರೆ. ತಡರಾತ್ರಿಯವರೆಗೆ ನಡೆಯುವ ಗರ್ಭಾ ನೃತ್ಯಗಳು, ಸಾಮಾಜಿಕ ಕೂಟಗಳು ಮತ್ತು ಹಬ್ಬದ ವಾತಾವರಣವು ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತದೆ. ಈ ವಿದ್ಯಮಾನವು ಸುರಕ್ಷಿತ ಲೈಂಗಿಕತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದ್ದು, ಕೆಲವರು ಇದನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಟೀಕಿಸಿದ್ದಾರೆ.

ಗುಜರಾತ್​ನಲ್ಲಿ ಏಕೆ?

ಗುಜರಾತ್‌ನಲ್ಲಿ ಕಾಂಡೋಮ್‌ಗಳು ಸುಲಭವಾಗಿ ಲಭ್ಯವಿದ್ದು, ಸೂಲಿನ್, ಗಾಂಧಿನಗರ ಮತ್ತು ರಾಜ್‌ಕೋಟ್‌ನಂತಹ ನಗರಗಳಲ್ಲಿ ವ್ಯಾಪಕ ವಿತರಣಾ ಜಾಲವಿದೆ. ಸುರತ್‌ನಲ್ಲಿ ಡಿಜಿಟಲ್ ಪಾವತಿಯನ್ನು ಸ್ವೀಕರಿಸುವ ಮೊದಲ ಕಾಂಡೋಮ್ ವೆಂಡಿಂಗ್ ಯಂತ್ರವನ್ನು ಸ್ಥಾಪಿಸಲಾಗಿದೆ. ನವರಾತ್ರಿ ಹಬ್ಬದ ಸಮಯದಲ್ಲಿ ಇವುಗಳ ಮಾರಾಟ ಹೆಚ್ಚಾಗುತ್ತದೆ. ಬೆಲೆಗಳು ಬ್ರ್ಯಾಂಡ್ ಮತ್ತು ಪ್ರಕಾರವನ್ನು ಅವಲಂಬಿಸಿವೆ, 3 ಕಾಂಡೋಮ್‌ಗಳ ಪ್ಯಾಕ್‌ಗೆ ₹100-₹300 ರವರೆಗೆ ಇರಬಹುದು ಎಂದು ಅಂಕಿ ಅಂಶ ಹೇಳುತ್ತದೆ.



Source link

Leave a Reply

Your email address will not be published. Required fields are marked *