Duck Walk Benefits: ನಟಿ ಮಲೈಕಾ ಅರೋರಾ ಫಿಟ್ನೆಸ್ ರಹಸ್ಯ ‘ಡಕ್ ವಾಕ್’ ಬಗ್ಗೆ ನಿಮಗೆ ಗೊತ್ತಾ? | Malaika Arora Fitness Secret Duck Walk Exercise Benefits Gvd

Duck Walk Benefits: ನಟಿ ಮಲೈಕಾ ಅರೋರಾ ಫಿಟ್ನೆಸ್ ರಹಸ್ಯ ‘ಡಕ್ ವಾಕ್’ ಬಗ್ಗೆ ನಿಮಗೆ ಗೊತ್ತಾ? | Malaika Arora Fitness Secret Duck Walk Exercise Benefits Gvd



Duck Walk Benefits: ನಟಿ ಮಲೈಕಾ ಅರೋರಾ ಫಿಟ್ನೆಸ್ ರಹಸ್ಯ ‘ಡಕ್ ವಾಕ್’ ಬಗ್ಗೆ ನಿಮಗೆ ಗೊತ್ತಾ? | Malaika Arora Fitness Secret Duck Walk Exercise Benefits Gvd

ನಟಿ ಮಲೈಕಾ ಅರೋರಾ ಅವರ ಫಿಟ್ನೆಸ್ ರಹಸ್ಯ ‘ಡಕ್ ವಾಕ್’ ಬಗ್ಗೆ ನಿಮಗೆ ಗೊತ್ತಾ? ಈ ವ್ಯಾಯಾಮ ಮಾಡೋದು ಹೇಗೆ? ಇದರಿಂದ ದೇಹದ ಸಮತೋಲನ, ಫ್ಲೆಕ್ಸಿಬಿಲಿಟಿ, ಸ್ನಾಯುಗಳ ಬಲ ಮತ್ತು ತೂಕ ಇಳಿಸೋಕೆ ಹೇಗೆಲ್ಲಾ ಸಹಾಯ ಆಗುತ್ತೆ ಅನ್ನೋದನ್ನು ತಿಳಿಯಿರಿ.

ಮಲೈಕಾ ಅರೋರಾ ವಯಸ್ಸಾದಂತೆ ಮತ್ತಷ್ಟು ಫಿಟ್ ಆಗಿ ಕಾಣ್ತಿದ್ದಾರೆ. ಇಷ್ಟೊಂದು ಫಿಟ್ ಆಗಿರೋಕೆ ಅವರು ಏನು ಮಾಡ್ತಾರೆ ಅಂತಾ ಹಲವರಿಗೆ ಕುತೂಹಲ ಇದೆ. ದೇಹದ ಬ್ಯಾಲೆನ್ಸ್ ಮತ್ತು ಫ್ಲೆಕ್ಸಿಬಿಲಿಟಿ ಹೆಚ್ಚಿಸಿಕೊಳ್ಳೋಕೆ ಮಲೈಕಾ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 15 ಹೆಜ್ಜೆ ‘ಡಕ್ ವಾಕ್’ ಮಾಡ್ತಾರಂತೆ. ಹಾಗಾದ್ರೆ, ಈ ಡಕ್ ವಾಕ್ ಮಾಡೋದ್ರಿಂದ ನಿಜವಾಗ್ಲೂ ಏನೆಲ್ಲಾ ಆಗುತ್ತೆ? ಇದು ದೇಹಕ್ಕೆ ಯಾವ ರೀತಿ ಪ್ರಯೋಜನಕಾರಿ? ಬನ್ನಿ ನೋಡೋಣ.

ಡಕ್ ವಾಕ್ ಮಾಡೋದು ಹೇಗೆ?

ಡಕ್ ವಾಕ್ ಅನ್ನೋದು ಒಂದು ಪವರ್‌ಫುಲ್ ಬಾಡಿವೇಟ್ ಎಕ್ಸರ್‌ಸೈಸ್. ಇದು ಕಾಲುಗಳಿಗೆ ಒಳ್ಳೆ ಬ್ಯಾಲೆನ್ಸ್ ಕೊಡುತ್ತೆ. ಮೊದಲು, ಸ್ಕ್ವಾಟ್ ಪೊಸಿಷನ್‌ನಲ್ಲಿ ಕೂರಬೇಕು. ಅಂದ್ರೆ, ಸೊಂಟವನ್ನು ಕೆಳಗೆ ಮತ್ತು ಹಿಂದಕ್ಕೆ ಬಾಗಿಸಿ ಕೂರಬೇಕು. ಈಗ, ಎರಡೂ ಕೈಗಳನ್ನು ಮುಂದಕ್ಕೆ ಚಾಚಿ. ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಿ, ಹಿಮ್ಮಡಿಗಳು ನೆಲಕ್ಕೆ ತಾಗಿರಲಿ. ನಂತರ, ಇದೇ ಸ್ಕ್ವಾಟ್ ಪೊಸಿಷನ್‌ನಲ್ಲೇ ಚಿಕ್ಕ ಚಿಕ್ಕ ಹೆಜ್ಜೆ ಇಡುತ್ತಾ ಮುಂದೆ ನಡೆಯಿರಿ. ನೀವು ಆರಂಭದಲ್ಲಿ ಕೆಲವು ಹೆಜ್ಜೆ ನಡೆಯುವ ಮೂಲಕ ಈ ಡಕ್ ವಾಕ್ ವ್ಯಾಯಾಮವನ್ನು ಶುರು ಮಾಡಬಹುದು. ಇದರ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.

ಡಕ್ ವಾಕ್ ಮಾಡುವುದರಿಂದ ಆಗುವ ಲಾಭಗಳು

-ನೀವು ಪ್ರತಿದಿನ ಡಕ್ ವಾಕ್ ಮಾಡಿದರೆ, ನಿಮ್ಮ ಸ್ನಾಯುಗಳು ಬಲಗೊಳ್ಳುವುದು ಮಾತ್ರವಲ್ಲ, ದೇಹದ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತೆ.

-ನಿಮ್ಮ ಕಾಲುಗಳು ದುರ್ಬಲವಾಗಿವೆ ಅನಿಸಿದರೆ, ತಜ್ಞರ ಸಲಹೆ ಪಡೆದು ಡಕ್ ವಾಕ್ ಶುರು ಮಾಡಬಹುದು. ದೇಹವನ್ನು ಫ್ಲೆಕ್ಸಿಬಲ್ ಮತ್ತು ಫಿಟ್ ಆಗಿಡಲು ಡಕ್ ವಾಕ್ ತುಂಬಾನೇ ಪ್ರಯೋಜನಕಾರಿ.

-ಮಂಡಿ, ಪಾದದ ಕೀಲು (ankle) ಮತ್ತು ಇತರ ಜಾಯಿಂಟ್‌ಗಳು ಫ್ಲೆಕ್ಸಿಬಲ್ ಆಗಿಲ್ಲದಿದ್ದರೆ, ಅವುಗಳ ಚಲನೆಯನ್ನು ಸುಲಭಗೊಳಿಸಲು ಡಕ್ ವಾಕ್ ಮಾಡಲು ಸಲಹೆ ನೀಡಲಾಗುತ್ತೆ.

-ಪ್ರತಿದಿನ ಡಕ್ ವಾಕ್ ಮಾಡೋದ್ರಿಂದ ಕ್ಯಾಲೋರಿಗಳು ಬರ್ನ್ ಆಗುತ್ತವೆ. ಇದರಿಂದ ತೂಕ ಇಳಿಸೋಕೆ ಸಹಾಯ ಆಗುತ್ತೆ. ನೀವು ಮೊದಲ ಬಾರಿಗೆ ಡಕ್ ವಾಕ್ ಮಾಡ್ತಿದ್ರೆ, ಜಾಸ್ತಿ ಮಾಡಬೇಡಿ. 10 ರಿಂದ 15 ಸೆಕೆಂಡ್‌ಗಳಿಂದ ಶುರು ಮಾಡಿ.

-ಒಂದು ವೇಳೆ ನಿಮ್ಮ ಮಂಡಿಯಲ್ಲಿ ನೋವಿದ್ದರೆ ಅಥವಾ ಗಾಯವಾಗಿದ್ದರೆ, ಡಕ್ ವಾಕ್ ಮಾಡುವುದನ್ನು ತಪ್ಪಿಸಿ.



Source link

Leave a Reply

Your email address will not be published. Required fields are marked *