Bus accident ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 7 ಭಾರತೀಯರು ಸಾವು | Tragedy In Gorkha 7 Indians Dead 8 Injured In Manakamana Temple Return Journey

Bus accident ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 7 ಭಾರತೀಯರು ಸಾವು | Tragedy In Gorkha 7 Indians Dead 8 Injured In Manakamana Temple Return Journey



Bus accident ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 7 ಭಾರತೀಯರು ಸಾವು | Tragedy In Gorkha 7 Indians Dead 8 Injured In Manakamana Temple Return Journey

ನೇಪಾಳದ ದೇವಸ್ಥಾನ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತ, 7 ಭಾರತೀಯರು ಸಾವು, ಮನಕಾಮನ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. 7 ಮಂದಿ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರೆ.

ಕಾಠ್ಮಂಡು (ಮಾ.15) ಮನಕಾಮನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮರಳುತ್ತಿದ್ದ ಭಕ್ತರ ಬಸ್ ಅಪಘಾತಗೊಂಡ ಘಟನೆ ನೇಪಾಳದ ಗೂರ್ಖಾ ಜಿಲ್ಲೆಯಲ್ಲಿ ನಡೆದಿದೆ. 8 ಭಕ್ತರಿದ್ದ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ 8 ಮಂದಿಯಲ್ಲಿ ಗೂರ್ಖಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ 7 ಮಂದಿ ಮೃತಟ್ಟಿದ್ದಾರೆ.ಇವರೆಲ್ಲರು ಭಾರತೀಯರಾಗಿದ್ದಾರೆ. ಮತ್ತೊಬ್ಬನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೆಚ್ಚುವರಿ ಪ್ರಯಾಣಿಕರಿಂದ ಕೂಡಿದ್ದ ಬಸ್ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ ಎಂದು ಗೂರ್ಖಾ ಜಿಲ್ಲಾ ಪೊಲೀಸ್ ಹೇಳಿದ್ದಾರೆ.

ಭಾರತದಿಂದ ಅತೀ ಹೆಚ್ಚಿನ ಭಕ್ತರು ನೇಪಾಳದ ಮನಕಾಮನ ದೇವಸ್ಥಾನ ದರ್ಶನ ಪಡೆಯುವುದು ಸಾಮಾನ್ಯವಾಗಿದೆ. ಮನಕಾಮನ ದೇವಸ್ಥಾನ ಬಗ್ಗೆ ನೇಪಾಳ ಹಾಗೂ ಭಾರತದ ಗಡಿ ಭಾಗದಲ್ಲಿ ಅಪಾರ ನಂಬಿಕೆ ಇದೆ. ಪ್ರತಿ ವರ್ಷ ಈ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಬಾರಿ ಬಸ್ ಅನ್ಬುಕೈರಣಿ ಪ್ರದೇಶದತ್ತ ಸಾಗತ್ತಿದ್ದ ವೇಳೆ ಘಟನೆ ನಡೆದಿದೆ. ಈ ಮಾರ್ಗದಲ್ಲಿ ಹಲವು ಅಪಘಾತಗಳು ನಡೆದಿದೆ. ಈ ಪೈಕಿ 2024ರಲ್ಲಿ ಅತೀ ದೊಡ್ಡ ದುರಂತ ನಡೆದಿತ್ತು.

27 ಭಾರತೀಯರು ದುರಂತ ಸಾವು

2024ರಲ್ಲಿ ದೇವಸ್ಥಾನ ಭೇಟಿಗಾಗಿ ಭಾರತದಿಂದ ತೆರಳಿದ್ದ ಭಕ್ತರ ಬಸ್ ಇದೇ ಅನ್ಬುಕೈರಣಿ ವಲಯದಲ್ಲಿ ಅಪಘಾತಕ್ಕೀಡಾಗಿತ್ತು. ಈ ವೇಳೆ 27 ಭಾರತೀಯರು ಮೃತಪಟ್ಟಿದ್ದರು. ದುರ್ಗಮ ಹಾದಿ, ಬೆಟ್ಟ ಗಡ್ಡಗಳ ಪರ್ವತ ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಅಪಘಾತ ಪ್ರಕರಣಗಳು ಹೆಚ್ಚು. ಈ ಘಟನೆಯಿಂದ ಭಾರತ ಬೆಚ್ಚಿ ಬಿದ್ದಿತ್ತು.

ಇದೀಗ ಮತ್ತೆ ಇದೇ ವಲಯದಲ್ಲಿ ಭಾರತೀಯ ಭಕ್ತರ ಬಸ್ ಅಪಘಾತಕ್ಕೀಡಾಗಿದೆ. ಕಳೆದೆರಡು ವರ್ಷದಿಂದ ನೇಪಾಳದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಅಪಘಾತ ಸಂಖ್ಯೊ ಹೆಚ್ಚಾಗಿದೆ. 2018ಕ್ಕೂ ಮೊದಲು ನೇಪಾಳದಲ್ಲಿ ವರ್ಷದಲ್ಲಿ ಒಟ್ಟು 4999 ಅಪಘಾತ ಪ್ರಕರಣಗಳು ದಾಖಲಾಗಿತ್ತು. 2024-25ರ ಸಾಲಿನಲ್ಲಿ ಈ ಸಂಖ್ಯೆ 7699ಕ್ಕೆ ಏರಿಕೆಯಾಗಿದೆ.ನೇಪಾಳದಲ್ಲಿನ ಹಲವು ಅಪಘಾತಗಳು ದುರ್ಗಮ ಹಾದಿಯಲ್ಲೇ ನಡೆದಿದೆ. ವಿಶೇಷವಾಗಿ ಕಿರಿದಾದ ರಸ್ತೆ, ಉತ್ತಮ ರಸ್ತೆಗಳ ಕೊರತೆಯಿಂದ ಅಪಘಾತ ಸಂಭವಿಸಿದೆ.



Source link

Leave a Reply

Your email address will not be published. Required fields are marked *