ಸರ್ಕಾರಿ ಶಾಲಾ ಮಕ್ಕಳಿಗೂ ಇನ್ನು ಹೈಟೆಕ್ ಶಿಕ್ಷಣ; ರಾಜ್ಯಾದ್ಯಂತ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಗ್ರೀನ್ ಸಿಗ್ನಲ್! | High Tech Education In Govt Schools Karnataka Gives Nod For Smart Class Project

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಡಿಜಿಟಲ್ ಶಿಕ್ಷಣ ನೀಡಲು ‘ಸಮಗ್ರ ಶಿಕ್ಷಣ ಕರ್ನಾಟಕ’ ಯೋಜನೆಯಡಿ ಸ್ಮಾರ್ಟ್ ಕ್ಲಾಸ್‌ಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಡಿ ಒಟ್ಟು 3,862 ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ KGBV ಗಳಿಗೆ ₹9,154.80 ಲಕ್ಷ ಅನುದಾನ ಮೀಸಲಿಡಲಾಗಿದೆ.

ಬೆಂಗಳೂರು(ಫೆ.3): ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಸಮಗ್ರ ಶಿಕ್ಷಣ ಕರ್ನಾಟಕ’ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳನ್ನು ಪ್ರಾರಂಭಿಸಲು ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ. ಈ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ.

ಯೋಜನಾ ಅನುಮೋದನಾ ಮಂಡಳಿಯಿಂದ ಅಸ್ತು

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಮಾರ್ಟ್ ಕ್ಲಾಸ್ ರೂಮ್ ಸ್ಥಾಪಿಸುವ ಪ್ರಸ್ತಾವನೆಗೆ ಯೋಜನಾ ಅನುಮೋದನಾ ಮಂಡಳಿಯು ಹಸಿರು ನಿಶಾನೆ ತೋರಿಸಿದೆ. ರಾಜ್ಯದ ಒಟ್ಟು 3,862 ಶಾಲೆಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ರೂಮ್‌ಗಳನ್ನು ನಿರ್ಮಿಸಲು ಬರೋಬ್ಬರಿ 9,154.80 ಲಕ್ಷ ರೂಪಾಯಿ ಮೊತ್ತದ ಬೃಹತ್ ಯೋಜನೆಗೆ ಅನುಮೋದನೆ ದೊರೆತಿದೆ.

ಯಾವೆಲ್ಲಾ ಶಾಲೆಗಳಿಗೆ ಲಭ್ಯ ಈ ಸೌಲಭ್ಯ?

ಕೇವಲ ನಗರ ಪ್ರದೇಶದ ಶಾಲೆಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಹಾಗೂ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ (KGBV) ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಮೂಲಕ ಪಾಠಗಳನ್ನು ಕಲಿಯಲು ಸುಲಭವಾಗಲಿದೆ.

ಅನುದಾನ ಹಂಚಿಕೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ವಿವಿಧ ಹಂತದ ಶಾಲೆಗಳಿಗೆ ಸರ್ಕಾರ ಈ ಕೆಳಗಿನಂತೆ ಅನುದಾನವನ್ನು ಮೀಸಲಿಟ್ಟಿದೆ:

* ಹಿರಿಯ ಪ್ರಾಥಮಿಕ ಶಾಲೆಗಳು: 1,631 ಶಾಲೆಗಳಿಗೆ ₹3,914.40 ಲಕ್ಷ ಮೀಸಲು.

* ಪ್ರೌಢ ಹಾಗೂ ಉನ್ನತ ಪ್ರೌಢ ಶಾಲೆಗಳು: ಒಟ್ಟು 651 ಶಾಲೆಗಳು ಮತ್ತು 1,326 ಹಿರಿಯ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ₹4,744.80 ಲಕ್ಷ ಮೀಸಲು.

* ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳು (KGBV): 95 ವಿದ್ಯಾಲಯಗಳಿಗೆ ₹114.00 ಲಕ್ಷ ಅನುದಾನ.

* ಹೆಚ್ಚುವರಿ ಪ್ರೌಢ ಶಾಲೆಗಳು: 159 ಪ್ರೌಢ/ಉನ್ನತ ಪ್ರೌಢ ಶಾಲೆಗಳಿಗೆ ₹381.6 ಲಕ್ಷ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ.

Source link

Leave a Reply

Your email address will not be published. Required fields are marked *