
<p>ಇಸ್ಲಮಾಬಾದ್: ಪಾಕಿಸ್ತಾನ ಅಫ್ಘಾನ್ ಗಡಿ ಬಳಿ ನಡೆದ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್ ಹಾಗೂ ಕಾಬೂಲ್ ನಡುವೆ ಕದನವಿರಾಮ ಘೋಷಣೆಯಾದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಎರಡು ದೇಶಗಳ ನಡುವೆ ತೀವ್ರವಾದ ಯುದ್ಧದ ನಂತರ ದಿನಗಳ ಹಿಂದಷ್ಟೇ ಕದನ ವಿರಾಮ ಘೋಷಣೆಯಾಗಿತ್ತು. ಆದರೆ ಈಗ ಮತ್ತೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.</p><p>ಉತ್ತರ ವಜರಿಸ್ತಾನದ ಮಿಲಿಟರಿ ಕ್ಯಾಂಪ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 13 ಜನ ಗಾಯಗೊಂಡಿದ್ದಾರೆ. ಸ್ಪೋಟಕ ತುಂಬಿದ್ದ ವಾಹನವನ್ನು ಭಯೋತ್ಪಾದಕನೋರ್ವ ಮಿಲಿಟರಿ ಕ್ಯಾಂಪ್ನ ತಡೆಗೋಡೆಗೆ ಡಿಕ್ಕಿ ಹೊಡೆಸಿದ ನಂತರ ಈ ದುರಂತ ಸಂಭವಿಸಿದೆ. ಈ ವೇಳೆ ಇನ್ನೂ ಇಬ್ಬರು ಭಯೋತ್ಪಾದಕರು ಈ ಮಿಲಿಟರಿ ಕ್ಯಾಂಪ್ನ ಒಳಗೆ ನುಗ್ಗಲು ಯತ್ನಿಸಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.</p>
Source link
ಅಫ್ಘಾನ್ ಪಾಕ್ ಗಡಿಯಲ್ಲಿ ಮತ್ತೆ ರಕ್ತದೋಕುಳಿ: ಆತ್ಮಾಹುತಿ ಬಾಂಬ್ ದಾಳಿಗೆ 7 ಪಾಕಿಸ್ತಾನಿ ಯೋಧರು ಬಲಿ