Headlines

ಭಟ್ಕಳ: ಡಿಸ್ಕೌಂಟ್ ಆಸೆ ತೋರಿಸಿ 300 ಜನರಿಗೆ ಪಂಗನಾಮ; ತಮಿಳುನಾಡು ಮೂಲದ ಮೂವರು ಅರೆಸ್ಟ್ | Bhatkal Discount Offer Scam Tamil Nadu Gang Arrested At Uttara Kannada

ಭಟ್ಕಳದಲ್ಲಿ ‘ಗ್ಲೋಬಲ್ ಎಂಟರ್ ಪ್ರೈಸಸ್’ ಹೆಸರಿನಲ್ಲಿ ಡಿಸ್ಕೌಂಟ್ ಆಫರ್ ನೀಡಿ 300ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿದ್ದ  ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಶಹರ ಠಾಣೆ ಪೊಲೀಸರು ಒಂದು ವಾರದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರವಾರ ಉತ್ತರಕನ್ನಡ (ನ.12): ಡಿಸ್ಕೌಂಟ್ ಆಫರ್ ಆಮಿಷ ತೋರಿಸಿ 300 ಜನರಿಗೆ ಪಂಗನಾಮ ಹಾಕಿದ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ಎಮ್.ಗಣೇಶನ್ (52), ಸೌತ್ ಸ್ಟ್ರೀಟ್ ರಾಜಾಮಡಂ ನ ತ್ಯಾಗರಾಜನ್ (65) ,ಅನಸಾಲ ಸ್ಟ್ರೀಟ್ ನ ಮೈಯನಾದನ್(42) ಬಂಧಿತ ಆರೋಪಿಗಳು. ಮೂವರು ತಮಿಳುನಾಡು ಮೂಲದವರಾಗಿದ್ದಾರೆ. ವಂಚಸಿದ ಒಂದು ವಾರದೊಳಗೆ ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು.

ಹೇಗೆ ವಂಚನೆ ನಡೆಯುತ್ತಿತ್ತು?

ಭಟ್ಕಳ ನಗರದಲ್ಲಿ ‘ಗ್ಲೋಬಲ್ ಎಂಟರ್ ಪ್ರೈಸಸ್’ ಎಂಬ ಹೆಸರಿನ ಮಳಿಗೆಯನ್ನು ತೆರೆದು, 10 ರಿಂದ 40 ರಷ್ಟು ಡಿಸ್ಕೌಂಟ್ ನೀಡುವುದಾಗಿ ಆಕರ್ಷಕ ಆಫರ್‌ಗಳನ್ನು ಘೋಷಿಸಿದ್ದ ಆರೋಪಿಗಳು, ಮುನ್ನೂರಕ್ಕೂ ಹೆಚ್ಚು ಗ್ರಾಹಕರಿಂದ ಮುಂಗಡ ಹಣವಾಗಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದರು. ಬಳಿಕ ಶಾಪ್ ಬಂದ್ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್. ವಂಚನೆ ಪ್ರಕರಣ ಸಂಬಂಧ ಪಟ್ಟಣದ ನಿವಾಸಿ ಮಹ್ಮದ್ ಸವೂದ್ ತಮ್ಮ ಹಣವನ್ನು ದೋಚಿ ಹೋಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಭಟ್ಕಳ ಶಹರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಭಟ್ಕಳ ಸಿಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್‌ಐ ನವೀನ್ ನಾಯ್ಕ್ ನೇತೃತ್ವದ ತಂಡ ಆರೋಪಿಗಳ ಬೆನ್ನುಹತ್ತಿದ್ದರು. ಘಟನೆಯ ನಂತರ ಕೇವಲ ಒಂದು ವಾರದೊಳಗೆ ಭಟ್ಕಳ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

Source link

Leave a Reply

Your email address will not be published. Required fields are marked *