Headlines

ಭ್ರಮನಿರಸನಗೊಂಡ ಕರ್ನಾಟಕ, ರಣಜಿ ಕಿರೀಟ ಗೆದ್ದು ಭಾರತದ ಹೊಸ ಕ್ರಿಕೆಟ್ ರಾಜನಾದ ಜಮ್ಮು-ಕಾಶ್ಮೀರ! | Jammu Kashmir Win Ranji Trophy 2025 26 Beat Karnataka Final History Hubballi San

ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಲಿಷ್ಠ ಕರ್ನಾಟಕ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಈ ತಂಡ, ಆಕಿಬ್ ನಬಿ, ಶುಭಂ ಪುಂಡಿರ್ ಮತ್ತು ಕಮ್ರಾನ್ ಇಕ್ಬಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ 66 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದೆ.

ಹುಬ್ಬಳ್ಳಿ (ಫೆ.28): ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆ ಮಾಡಿದೆ. ವೇಗದ ಬೌಲರ್ ಆಕಿಬ್ ನಬಿ ಅವರ ಮಾರಕ ಬೌಲಿಂಗ್ ದಾಳಿ, ಮೊದಲ ಇನ್ನಿಂಗ್ಸ್‌ನಲ್ಲಿ ಶುಭಂ ಪುಂಡಿರ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ರಾನ್ ಇಕ್ಬಾಲ್ ಸಿಡಿಸಿದ ಆಕರ್ಷಕ ಶತಕಗಳ ನೆರವಿನಿಂದ ಬಲಿಷ್ಠ ಕರ್ನಾಟಕ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಿದೆ.

66 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ

ಕಳೆದ 66 ವರ್ಷಗಳ ರಣಜಿ ಇತಿಹಾಸದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಾಳಿಗಳು ಅಷ್ಟಾಗಿ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಈ ಬಾರಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿರುವ ಈ ತಂಡ, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಪ್ರತಿಷ್ಠಿತ ಫಸ್ಟ್ ಕ್ಲಾಸ್ ಕ್ರಿಕೆಟ್ ಟೈಟಲ್ ಗೆದ್ದುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ ತನ್ನ ಮೊದಲ ರಣಜಿ ಪಂದ್ಯವನ್ನು ಆಡಿದ್ದು 1960ರಲ್ಲಿ. ತಂಡವು ತನ್ನ ಮೊದಲ ಜಯ ದಾಖಲಿಸಲು ಬರೋಬ್ಬರಿ 22 ವರ್ಷ ಕಾಯಬೇಕಾಯಿತು. 1982ರಲ್ಲಿ ತನ್ನ 99ನೇ ಪಂದ್ಯದಲ್ಲಿ ಮೊದಲ ಗೆಲುವಿನ ಸಿಹಿ ಕಂಡಿತ್ತು. ಕಾಕತಾಳೀಯವೆಂದರೆ, ಅದೇ ವರ್ಷ ಕರ್ನಾಟಕ ತಂಡ ತನ್ನ 3ನೇ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಐತಿಹಾಸಿಕ ಫೈನಲ್: 2025/26ರ ಈ ಫೈನಲ್ ಪಂದ್ಯವು ಜಮ್ಮು ಮತ್ತು ಕಾಶ್ಮೀರದ ಇತಿಹಾಸದ 346ನೇ ಪಂದ್ಯವಾಗಿದ್ದು, ಇದು ಅವರ ಒಟ್ಟಾರೆ 47ನೇ ಪಂದ್ಯದ ಗೆಲುವಾಗಿದೆ. ಈ ಆವೃತ್ತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು ಕೇವಲ ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಶ್ರೀನಗರದಲ್ಲಿ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಮಾತ್ರ ಸೋತಿದ್ದ ತಂಡ, ಉಳಿದೆಲ್ಲಾ ಪಂದ್ಯಗಳಲ್ಲಿ ಅಧಿಪತ್ಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Source link

Leave a Reply

Your email address will not be published. Required fields are marked *