ಟ್ರೋಲ್ ನೋಡಿ ನನ್ ಲವರ್ ಚುಚ್ಚಿ-ಚುಚ್ಚಿ ನರಕ ತೋರಿಸಿದ, ನಂಗೆ ತಡ್ಕೋಳೋಕೆ ಆಗ್ಲಿಲ್ಲ; ಸೋನು ಶ್ರೀನಿವಾಸ ಗೌಡ ಕಣ್ಣೀರು | Bigg Boss Ott Fame Sonu Srinivas Gowda Breaks Down Trolls Ruined My Family Life And Toxic Love Sat

ಟ್ರೋಲ್ ನೋಡಿ ನನ್ ಲವರ್ ಚುಚ್ಚಿ-ಚುಚ್ಚಿ ನರಕ ತೋರಿಸಿದ, ನಂಗೆ ತಡ್ಕೋಳೋಕೆ ಆಗ್ಲಿಲ್ಲ; ಸೋನು ಶ್ರೀನಿವಾಸ ಗೌಡ ಕಣ್ಣೀರು | Bigg Boss Ott Fame Sonu Srinivas Gowda Breaks Down Trolls Ruined My Family Life And Toxic Love Sat



ಟ್ರೋಲ್ ನೋಡಿ ನನ್ ಲವರ್ ಚುಚ್ಚಿ-ಚುಚ್ಚಿ ನರಕ ತೋರಿಸಿದ, ನಂಗೆ ತಡ್ಕೋಳೋಕೆ ಆಗ್ಲಿಲ್ಲ; ಸೋನು ಶ್ರೀನಿವಾಸ ಗೌಡ ಕಣ್ಣೀರು | Bigg Boss Ott Fame Sonu Srinivas Gowda Breaks Down Trolls Ruined My Family Life And Toxic Love Sat

ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಲವ್ ಸ್ಟೋರಿಯ ನೋವನ್ನು ಹಂಚಿಕೊಂಡಿದ್ದಾರೆ. ಟ್ರೋಲ್‌ಗಳಿಂದಾಗಿ ತನ್ನ ಪ್ರೀತಿ ಮತ್ತು ಕುಟುಂಬದಲ್ಲಿ ಜಗಳಗಳು ಉಂಟಾದವು ಹಾಗೂ ತನ್ನ ಪ್ರೇಮಿಯಿಂದ ಅನುಭವಿಸಿದ ಸಂಕಟವನ್ನು ವಿವರಿಸಿ ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಒಟಿಟಿ ಸೀಸನ್ 1ರ ಸ್ಪರ್ಧಿಯಾಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ ಗೌಡ ಇದೀಗ ತಮ್ಮ ನೋವಿನ ಕಥೆಯೊಂದನ್ನು ತನ್ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳ ಮುಂದೆ ಹಂಚಿಕೊಂಡಿದ್ದಾರೆ. ಈಗಾಗಲೇ ತಾನು ಎಲ್ಲಿ ಹುಟ್ಟಿದೆ, ಹೇಗೆ ಬೆಳೆದೆ ಎಂಬುದನ್ನು ಮೂರು ಎಪಿಸೋಡ್ ವಿಡಿಯೋಗಳ ಮೂಲಕ ಹಂಚಿಕೊಂಡಿದ್ದ ಸೋನು, ಇದೀಗ 4ನೇ ಎಪಿಸೋಡ್ ವಿಡಿಯೋದಲ್ಲಿ ತನ್ನ ಲವರ್‌ನಿಂದ ಅನುಭವಿಸಿದ ನೋವು, ಸಂಕಟವನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಅದರಲ್ಲೂ ಟ್ರೋಲ್‌ಗಳು ಇಡೀ ನನ್ನ ಜೀವನವನ್ನೇ ಸರ್ವನಾಶ ಮಾಡಿದವು ಎಂಬುದನ್ನೂ ಬಿಚ್ಚಿಟ್ಟಿದ್ದಾರೆ.

ನಮ್ಮಮ್ಮ 6 ತಿಂಗಳು ಮಾತನಾಡಿರಲಿಲ್ಲ

ಇನ್‌ಸ್ಟಾ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸೋನು ಶ್ರೀನಿವಾಸ್ ಗೌಡ, ‘ಈ ಟ್ರೋಲ್‌ಗಳೆನ್ನೆಲ್ಲಾ ನೋಡಿ, ನನ್ನ ಲವ್‌ನಲ್ಲೂ ಜಗಳ ಸ್ಟಾರ್ಟ್ ಆಯಿತು. ಜೊತೆಗೆ ನಮ್ಮ ಕುಟುಂಬದಲ್ಲೂ ತುಂಬಾ ಜಗಳ ಸ್ಟಾರ್ಟ್ ಆಯ್ತು. ನಮ್ಮ ಅಮ್ಮ ಅಂತೂ ನಂಜೊತೆ 6 ತಿಂಗಳ ಕಾಲ ಒಂದೂ ಮಾತನಾಡಿರಲಿಲ್ಲ ಗೊತ್ತಾ?, ಆಗ ನಾನಿನ್ನೂ ಚಿಕ್ಕ ಹುಡುಗಿ ಅಲ್ವಾ, ಪರವಾಗಿಲ್ಲ ಬಿಡು ಮಾತಾಡ್ಲಿಲ್ಲ ಅಂದ್ರೆ ಏನು ಅಂತಾ ಸುಮ್ಮನಿದ್ದೆ. ಬಟ್ ನನ್ನ ಲವ್ ಅಂತೂ ಹದಗೆಟ್ಟು ಹೋಗಿತ್ತು. ನನ್ನ ತಮ್ಮ ಸಾಗರ. ಸಿಕ್ಕಾಪಟ್ಟೆ ಸಪೋರ್ಟ್ ಮಾಡ್ತಿದ್ದ ಎಲ್ಲದಕ್ಕೂ. ಯೆಸ್.., ನೀನು ಮಾಡೇ ಮಾಡ್ತೀಯ ಏನಾದ್ರೂನೂ, ಏನಾದ್ರೂ ಮಾಡು ಎಂದು ಹೇಳುತ್ತಿದ್ದನು. ಓಕೆ ಅಂತಾ ಹೇಳಿ ನಾನು ನನ್ನ ಜರ್ನಿ ಸ್ಟಾರ್ಟ್ ಮಾಡಿದೆ’.

ನನ್ನ ಹತ್ತಿರ ಶಕ್ತಿನೇ ಇರಲಿಲ್ಲ

‘ನಿಮಗೆ ಗೊತ್ತಿಲ್ಲ.., ನನ್ನ ಲವ್ವಲ್ಲಿ ಎಷ್ಟು ನೊಂದು, ಬೆಂದಿದ್ದೀನಿ ಅಂತಾ. ನಿಜವಾದ ಜೀವನ ಇವಾಗಿನಿಂದ ಸ್ಟಾರ್ಟ್ ಆಯ್ತು ಅಂತಾ. ತುಂಬಾ ನೋವು ಕೊಟ್ಟಿದ್ದಾನೆ, ನನ್ನ ಲವ್ವರ್ ಎನಿಸಿಕೊಂಡೋನು. ಎಷ್ಟು ನೋವು ಕೊಟ್ಟಿದ್ದಾನೆ ಎಂದರೆ ಹೇಳೋಕಾಗಲ್ಲ. ಅಷ್ಟು ನೋವು ಕೊಟ್ಟಿದ್ದಾನೆ. ದಿನವೂ ನೆಗೆಟಿವ್, ಚುಚ್ಚಿ-ಚುಚ್ಚಿ ಮಾತನಾಡೋದು ಮಾಡ್ತಿದ್ದ. ಒಂದು ಹುಡುಗನ ಜೊತೆಗೆ ಮಾತನಾಡಂಗಿಲ್ಲ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ದರೂ ಅವನೇ ನೆಗಟಿವ್ ಮಾತನಾಡುತ್ತಿದ್ದ. ಸಹಿಸಿಕೊಂಡು ಸಹಿಸಿಕೊಂಡು ನನಗೂ ಸಾಕಾಗಿ ಹೋಗಿತ್ತು. ಏಕೆಂದರೆ ಡೈಲಿ ಜಗಳ ಮಾಡೋದಕ್ಕೆ ನನ್ನ ಹತ್ತಿರ ಶಕ್ತಿನೇ ಇರಲಿಲ್ಲ’.

ಒಂದು ದಿನ ಅವನನ್ನ ಬಿಟ್ಟುಬಿಟ್ಟೆ

ನಾನು ಅಷ್ಟೆಲ್ಲಾ ಬೈಸಿಕೊಂಡರೂ ಪರವಾಗಿಲ್ಲ ಅಂತಾ ಹೇಳಿ, ನೀನು ನಂಗೆ ಬೇಡ್ವೇ ಬೇಡ ಅಂತೇಳಿ ಒಂದು ದಿನ ಅವನನ್ನ ಬಿಟ್ಟುಬಿಟ್ಟೆ. ಆದ್ರೆ, ಮತ್ತೆ ಪ್ಯಾಚಪ್ ಆಗೋಯ್ತು. ನಮ್ ಲವ್ ಮತ್ತೆ ಪ್ಯಾಚಪ್ ಆದಮೇಲೆ ಏನೆಲ್ಲಾ ಸ್ಟಾರ್ಟ್ ಆಯ್ತು ರಗಳೆಗಳು ಎಂಬುದನ್ನು ಮುಂದಿನ ಎಪಿಸೋಡ್‌ನಲ್ಲಿ ಹೇಳ್ತೀನಿ’ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಟ್ರೋಲಿಗರಿಗೆ ಕೆಟ್ಟದಾಗೇ ಉತ್ತರ ಕೊಡ್ತಿದ್ದ ಸೋನು

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ಫೋಟೋ, ಬೀಚ್ ಫೋಟೋ ಹಂಚಿಕೊಳ್ಳುತ್ತಿದ್ದ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಅವರದ್ದೇ ಸ್ಟೈಲ್‌ನಲ್ಲಿ ಕೆಟ್ಟದಾಗಿಯೇ ಉತ್ತರ ನೀಡುತ್ತಿದ್ದ ಸೋನು ಶ್ರೀನಿವಾಸ ಗೌಡ ಭಾರೀ ಟ್ರೋಲ್ ಆಗುತ್ತಿದ್ದರು. ಸಾಮಾಜಿಕ ಜಾಲತಾಣದಿಂದ ಒಳ್ಳೆಯ ಖ್ಯಾತಿ ಬಂದಿದ್ದಕ್ಕಿಂತ ಅಪಖ್ಯಾತಿಯೇ ಹೆಚ್ಚಾಗಿ ಬಂತೆಂದು ಕೆಲವರು ಹೇಳುತ್ತಾರೆ. ಇತ್ತೀಚೆಗೆ ಕಿರುಚಿತ್ರಗಳಲ್ಲಿಯೂ ಸೋನು ಪೊಲೀಸ್ ಪಾತ್ರವೊಂದನ್ನು ಮಾಡಿದ್ದಾರೆ. 

ಪ್ರಸ್ತುತವಾಗಿ ಸೋನು ಶ್ರೀನಿವಾಸ್ ಗೌಡ ಇನ್‌ಸ್ಟಾಗ್ರಾಂ ಖಾತೆಗೆ ಬರೋಬ್ಬರಿ 1.1 ಮಿಲಿಯನ್ ಫಾಲೋವರ್ಸ್‌ಗಳಿದ್ದಾರೆ. ರೀಲ್ಸ್ ಹಾಗೂ ಪ್ರಮೋಷನ್‌ನಿಂದ ಹಣ ಬರುತ್ತಿದ್ದರೂ ನೆಮ್ಮದಿಯಾಗಿ ಜೀವನ ಮಾಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.





Source link

Leave a Reply

Your email address will not be published. Required fields are marked *