ಪ್ರಾಮಿಸ್ ಉಳಿಸಿಕೊಳ್ಳಲು ಚೆನ್ನೈನಿಂದ ಮುಂಬೈಗೆ ಊಟ ತರಿಸಿದ ನಟ ಡಾರ್ಲಿಗ್ ಪ್ರಭಾಸ್; ಇದು ಸಾಧ್ಯವಾಗಿದ್ದು ಹೇಗೆ? | Pan India Star Prabhas Ordered Food From Chennai To Mumbai In The Flight At Adipurush Film Shooting

ಪ್ರಾಮಿಸ್ ಉಳಿಸಿಕೊಳ್ಳಲು ಚೆನ್ನೈನಿಂದ ಮುಂಬೈಗೆ ಊಟ ತರಿಸಿದ ನಟ ಡಾರ್ಲಿಗ್ ಪ್ರಭಾಸ್; ಇದು ಸಾಧ್ಯವಾಗಿದ್ದು ಹೇಗೆ? | Pan India Star Prabhas Ordered Food From Chennai To Mumbai In The Flight At Adipurush Film Shooting



ಪ್ರಾಮಿಸ್ ಉಳಿಸಿಕೊಳ್ಳಲು ಚೆನ್ನೈನಿಂದ ಮುಂಬೈಗೆ ಊಟ ತರಿಸಿದ ನಟ ಡಾರ್ಲಿಗ್ ಪ್ರಭಾಸ್; ಇದು ಸಾಧ್ಯವಾಗಿದ್ದು ಹೇಗೆ? | Pan India Star Prabhas Ordered Food From Chennai To Mumbai In The Flight At Adipurush Film Shooting

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೇವಲ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೆ, ತಮ್ಮ ಅತಿಥಿ ಸತ್ಕಾರ ಮತ್ತು ಆಹಾರ ಪ್ರೇಮದಿಂದಲೂ ಚಿತ್ರರಂಗದಲ್ಲಿ ಸಖತ್ ಫೇಮಸ್. ಶೂಟಿಂಗ್ ಸೆಟ್‌ನಲ್ಲಿ ಸಹನಟರು ಹಾಗೂ ತಾಂತ್ರಿಕ ವರ್ಗದವರಿಗೆ ಭರ್ಜರಿ ಊಟದ ಔತಣ ನೀಡುವುದು ಪ್ರಭಾಸ್ ಅವರ ಹಳೆಯ ಹವ್ಯಾಸ. 

ಪ್ರಭಾಸ್ ಮಹಾ ಸಾಹಸ!

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಕೇವಲ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೆ, ತಮ್ಮ ಅತಿಥಿ ಸತ್ಕಾರ ಮತ್ತು ಆಹಾರ ಪ್ರೇಮದಿಂದಲೂ ಚಿತ್ರರಂಗದಲ್ಲಿ ಸಖತ್ ಫೇಮಸ್. ಶೂಟಿಂಗ್ ಸೆಟ್‌ನಲ್ಲಿ ಸಹನಟರು ಹಾಗೂ ತಾಂತ್ರಿಕ ವರ್ಗದವರಿಗೆ ಭರ್ಜರಿ ಊಟದ ಔತಣ ನೀಡುವುದು ಪ್ರಭಾಸ್ ಅವರ ಹಳೆಯ ಹವ್ಯಾಸ. ಈ ಕಾರಣಕ್ಕಾಗಿಯೇ ಅವರನ್ನು ಚಿತ್ರರಂಗದ ‘ಡಾರ್ಲಿಂಗ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈಗ ಪ್ರಭಾಸ್ ಅವರು ‘ಆದಿಪುರುಷ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ಒಂದು ರೋಚಕ ‘ಫುಡ್ ಸ್ಟೋರಿ’ಯನ್ನು ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ‘ಆದಿಪುರುಷ್’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದಾಗ ಚಿತ್ರತಂಡದವರು ಆಹಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆಗ ಪ್ರಭಾಸ್ ಅವರು ತಮಾಷೆಯಾಗಿ ಎಲ್ಲರಿಗೂ ಚೆನ್ನೈನ ರುಚಿಕರವಾದ ಆಹಾರದ ರುಚಿ ತೋರಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದರು. ಮುಂಬೈನಲ್ಲಿ ಕುಳಿತು ಚೆನ್ನೈ ಊಟದ ಮಾತು ಕೇಳಿ ಎಲ್ಲರೂ ಆಶ್ಚರ್ಯಪಟ್ಟಿದ್ದರು. ಆದರೆ ಮಾತು ಕೊಟ್ಟರೆ ಪ್ರಭಾಸ್ ಸುಮ್ಮನೆ ಕೂರುವವರಲ್ಲ ಎಂಬುದು ಶೀಘ್ರದಲ್ಲೇ ಇಡೀ ಚಿತ್ರತಂಡಕ್ಕೆ ಅರಿವಾಯಿತು.

ಸಿನಿಮೀಯ ಶೈಲಿಯಲ್ಲಿ ಪ್ಲಾನ್

ಪ್ರಭಾಸ್ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ಸಿನಿಮೀಯ ಶೈಲಿಯಲ್ಲಿ ಪ್ಲಾನ್ ಮಾಡಿದರು. ಚೆನ್ನೈನಿಂದ ಮುಂಬೈಗೆ ಊಟ ತರಿಸಲು ಅವರು ವಿಮಾನವನ್ನು ಬಳಸಿಕೊಂಡರು! ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, “ನಾನು ಆದಿಪುರುಷ್ ಶೂಟಿಂಗ್ ವೇಳೆ ಚೆನ್ನೈನಿಂದ ಮುಂಬೈಗೆ ಊಟವನ್ನು ಆರ್ಡರ್ ಮಾಡಿದ್ದೆ. ಎಲ್ಲರಿಗೂ ನಾನು ಮಾತು ಕೊಟ್ಟಿದ್ದ ಕಾರಣ, ಒಬ್ಬ ವ್ಯಕ್ತಿಗೆ ಫೋನ್ ಮಾಡಿ ವಿಮಾನದ ಮೂಲಕ ನಾಲ್ಕೇ ಗಂಟೆಯಲ್ಲಿ ಊಟವನ್ನು ಚೆನ್ನೈನಿಂದ ಮುಂಬೈಗೆ ತರಿಸಿಕೊಂಡೆ” ಎಂದು ಹೇಳಿದ್ದಾರೆ.

ಬಿಸಿಬಿಸಿ ಊಟ

ಇದನ್ನು ಪ್ರಭಾಸ್ ಅವರು ತಮಾಷೆಯಾಗಿ ‘ವಿಮಾನದಲ್ಲಿ ಸ್ವಿಗ್ಗಿ’ ಮಾಡಿದಂತೆ ಎಂದು ಬಣ್ಣಿಸಿದ್ದಾರೆ. ಸಾಮಾನ್ಯವಾಗಿ ಸ್ವಿಗ್ಗಿಯಲ್ಲಿ ಹತ್ತಿರದ ಹೋಟೆಲ್‌ನಿಂದ ಊಟ ಬರುತ್ತದೆ, ಆದರೆ ಪ್ರಭಾಸ್ ಅವರಿಗೆ ಹಸಿವಾದರೆ ಅಥವಾ ತಮ್ಮವರಿಗೆ ಊಟ ಹಾಕಿಸಬೇಕು ಎನಿಸಿದರೆ ರಾಜ್ಯಗಳ ಗಡಿಯೇ ಅಡ್ಡ ಬರುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿ. ವಿಮಾನದ ಮೂಲಕ ಬಿಸಿಬಿಸಿ ಊಟವನ್ನು ಸಮಯಕ್ಕೆ ಸರಿಯಾಗಿ ತರಿಸಿದ ಅವರ ಬದ್ಧತೆ ಕಂಡು ಚಿತ್ರತಂಡದವರು ಅಕ್ಷರಶಃ ದಂಗಾಗಿದ್ದರು.

ಪ್ರಭಾಸ್ ಅವರ ಈ ದೊಡ್ಡ ಗುಣ ಮತ್ತು ಆಹಾರದ ಮೇಲಿರುವ ಪ್ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಹನಟಿ ಕೃತಿ ಸನೋನ್ ಸೇರಿದಂತೆ ಅನೇಕರು ಪ್ರಭಾಸ್ ನೀಡುವ ಊಟದ ಔತಣದ ಬಗ್ಗೆ ಈ ಹಿಂದೆಯೇ ಗುಣಗಾನ ಮಾಡಿದ್ದರು. ಬರಿ ಪರದೆಯ ಮೇಲೆ ಮಾತ್ರವಲ್ಲದೆ, ನಿಜ ಜೀವನದಲ್ಲೂ ಪ್ರಭಾಸ್ ಅವರು ಅಷ್ಟೇ ರಾಜಗಾಂಭೀರ್ಯದ ಅತಿಥಿ ಸತ್ಕಾರ ಮಾಡುತ್ತಾರೆ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.



Source link

Leave a Reply

Your email address will not be published. Required fields are marked *