Headlines

SIR ಈ ಜಿಲ್ಲೆಯಲ್ಲಿ ಕಳೆದ 20 ವರ್ಷದಲ್ಲಿ ಒಬ್ಬರು ನಿಧನರಾಗಿಲ್ಲ, ಅಚ್ಚರಿ ಸೀಕ್ರೆಟ್ ಬಹಿರಂಗ | West Bengal 2208 Booths Reported No Deceased Relocated Secret Revealed In Sir

SIR ಈ ಜಿಲ್ಲೆಯಲ್ಲಿ ಕಳೆದ 20 ವರ್ಷದಲ್ಲಿ ಒಬ್ಬರು ನಿಧನರಾಗಿಲ್ಲ, ಅಚ್ಚರಿ ಸೀಕ್ರೆಟ್ ಬಹಿರಂಗ | West Bengal 2208 Booths Reported No Deceased Relocated Secret Revealed In Sir



SIR ಈ ಜಿಲ್ಲೆಯಲ್ಲಿ ಕಳೆದ 20 ವರ್ಷದಲ್ಲಿ ಒಬ್ಬರು ನಿಧನರಾಗಿಲ್ಲ, ಅಚ್ಚರಿ ಸೀಕ್ರೆಟ್ ಬಹಿರಂಗ | West Bengal 2208 Booths Reported No Deceased Relocated Secret Revealed In Sir

ಈ ಜಿಲ್ಲೆಯಲ್ಲಿ ಕಳೆದ 20 ವರ್ಷದಲ್ಲಿ ಒಬ್ಬರು ನಿಧನರಾಗಿಲ್ಲ, ಅಚ್ಚರಿ ಸೀಕ್ರೆಟ್ ಬಹಿರಂಗ, ಇಷ್ಟೇ ಅಲ್ಲ ಇಲ್ಲಿನ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೂ ಹೋಗಿಲ್ಲ, ಒಬ್ಬರೂ ಸ್ಥಳಾಂತರಗೊಂಡಿಲ್ಲ. ಈ ರಹಸ್ಯ ಬಯಲಾಗಿದೆ.

ಕೋಲ್ಕತಾ (ಡಿ.03) ಭಾರತದ ಹಲವು ಗ್ರಾಮಗಳಲ್ಲಿ ಬದುಕು ಸಾಗಿಸುವ ಜನರು ಕೆಲ ವಿಶೇಷ ವರದಾನಗಳನ್ನು ಪಡೆಯುತ್ತಾರೆ. ಈ ಪೈಕಿ ದೀರ್ಘಾಯುಷಿ, ಉತ್ತಮ ಆರೋಗ್ಯ, ಎತ್ತರ ಸೇರಿದಂತೆ ಹಲವು ವಿಶೇಷತೆಗಳ ಕುರಿತು ವರದಿಯಾಗುತ್ತದೆ. ಆದರೆ ಈ ಜಿಲ್ಲೆಯ ಕೆಲ ಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಒಬ್ಬರೂ ನಿಧನರಾಗಿಲ್ಲ, ಒಬ್ಬರೂ ಬೇರೆಡೆಗೆ ಸ್ಥಳಾಂತರಗೊಂಡಿಲ್ಲ, ಹೆಣ್ಣುಮಕ್ಕಳು ಕಳೆದ 20 ವರ್ಷದಿಂದ ಇಲ್ಲೇ ನೆಲೆಸಿದ್ದಾರೆ. ಇದು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈ ಅಚ್ಚರಿ ನಡೆದಿದೆ. ಇದೀಗ ಈ ಅಚ್ಚರಿ ಬೆಳೆಕಿಗೆ ಬಂದಿದೆ.

ರಹಸ್ಯ ಬೆಳಕಿಗೆ ತಂದ SIR

ಇದು ಹೇಗೆ ಸಾಧ್ಯ? ಕಳೆದ 20 ವರ್ಷದಿಂದ ಒಬ್ಬರು ನಿಧನರಾಗಿಲ್ಲ, ಸ್ಥಳಾಂತರಗೊಂಂಡಿಲ್ಲ ಎಂದರೆ ಹೇಗೆ ಎಂದು ನೀವು ಗೊಂದಲಕ್ಕೀಡಾಗಬೇಡಿ. ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಇದು ಸಾಮಾನ್ಯ. ಆದರೆ ಚುನಾವಣಾ ಆಯೋಗ ನಡೆಸುತ್ತಿರುವ SIR ಪರಿಷ್ಕರಣೆಯಲ್ಲಿ ಈ ಅಸಲಿ ರಹಸ್ಯ ಬಹಿರಂಗವಾಗಿದೆ. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR ) ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ. ಭಾರಿ ವಿರೋಧದ ಬಳಿಕವೂ SIR ನಡೆಯುತ್ತಿದೆ. ಈ ವೇಳೆ ಮತದಾರರ ಪಟ್ಟಿಯಲ್ಲಿ ಕಳೆದ 20 ವರ್ಷದಿಂದ ಎಲ್ಲರೂ ಬದುಕಿದ್ದಾರೆ, ಹೆಣ್ಣುಮಕ್ಕಳು ಮದುವೆಯಾದರೂ ಅವರ ಹೆಸರು ಇಲ್ಲೇ ಇದೆ. ಅನುಮಾನಗೊಂಡ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದೆ. ಈ ವರದಿ ಕೈಸೇರುತ್ತಿದ್ದಂತೆ ರಹಸ್ಯ ಬಹಿರಂಗವಾಗಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಕೆಲ ಬೂತ್ ರಹಸ್ಯ ಬಯಲು

ಚುನಾವಣಾ ಆಯೋಗದ ನೋಟಿಸ್ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಈ ಕುರಿತ ವರದಿ ನೀಡಿದೆ. ವಿಶೇಷ ಅಂದರೆ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 2,208ರಷ್ಟಿದ್ದ ಬೂತ್ ಸಂಖ್ಯೆ ಇದೀಗ 480ಕ್ಕೆ ಇಳಿಕೆಯಾಗಿದೆ. ಕಳೆದ 20 ವರ್ಷದಿಂದ ಕೆಲ ಬೂತ್‌ಗಳಲ್ಲಿ ನಿಧನರಾದರೂ ಅವರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಿರಲಿಲ್ಲ. ಸ್ಥಳಾಂತರಗೊಂಡರೂ ಅವರ ಹೆಸರು ಮತದಾರ ಪಟ್ಟಿಯಲ್ಲಿದೆ. ಹೀಗೆ ಸ್ಥಳಾಂತರಗೊಂಡವರು, ನಿಧನರಾದರವೂ ಕಳೆದ ಚುನಾವಣೆಗಳಲ್ಲಿ ಮತದಾನ ಮಾಡಿದ್ದಾರಾ ಅನ್ನೋ ಕುರಿತು ಪರಿಶೀಲನೆಗಳು ನಡೆಯುತ್ತಿದೆ.

ಏನಿದು ಮ್ಯಾಜಿಕ್ ಎಂದ ಬಿಜೆಪಿ

ಈ ಕುರಿತು ಬಿಜೆಪಿಯ ನಾಯಕ, ಕೇಂದ್ರ ಸಚಿವ ಸುಕಾಂತ ಮಜುಂದಾರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 2,200 ಬೂತ್‌ಗಳಲ್ಲಿ ಚುನಾವಣಾ ಆಯೋಗ ನೀಡಿದ SIR ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅಚ್ಚರಿ ಅಂಶಗಳು ಬಯಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ವರದಿ ತರಿಸಿಕೊಂಡು ನೋಡಿದಾ ಮ್ಯಾಜಿಕ್ ನಡೆದಿದೆ. 2,200ರಷ್ಟಿದ್ದ ಬೂತ್ ಇದೀಗ 480ಕ್ಕೆ ಇಳಿಕೆಯಾಗಿದೆ ಎಂದು ಸುಕಾಂತ ಮುಜುಂದಾರ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಹಲವು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ. ಪ್ರಮುಖವಾಗಿ ನಿಧನರಾಗಿರುವವರ ವಿವರ, ಸ್ಥಳಾಂತರ, ನಾಪತ್ತೆಯಾದವರ ವಿವರ ನೀಡುವಂತೆ ಸೂಚಿಸಿದ್ದಾರೆ.



Source link

Leave a Reply

Your email address will not be published. Required fields are marked *