Headlines

ವಿಷ್ಣುವರ್ಧನ್‌ಗೆ ಮಂಚದ ಮೇಲೆ ಮಲಗಲು ಹೇಳಿ ಪುಟ್ಟಣ್ಣ ಕೆಳಗೆ ಚಾಪೆಯ ಮೇಲೆ ಮಲಗುತ್ತಿದ್ದರು ಯಾಕೆ? | Karnataka Ratna Dr Vishnuvardhan Relationship With Director Puttanna Kanagal

ವಿಷ್ಣುವರ್ಧನ್‌ಗೆ ಮಂಚದ ಮೇಲೆ ಮಲಗಲು ಹೇಳಿ ಪುಟ್ಟಣ್ಣ ಕೆಳಗೆ ಚಾಪೆಯ ಮೇಲೆ ಮಲಗುತ್ತಿದ್ದರು ಯಾಕೆ? | Karnataka Ratna Dr Vishnuvardhan Relationship With Director Puttanna Kanagal



ವಿಷ್ಣುವರ್ಧನ್‌ಗೆ ಮಂಚದ ಮೇಲೆ ಮಲಗಲು ಹೇಳಿ ಪುಟ್ಟಣ್ಣ ಕೆಳಗೆ ಚಾಪೆಯ ಮೇಲೆ ಮಲಗುತ್ತಿದ್ದರು ಯಾಕೆ? | Karnataka Ratna Dr Vishnuvardhan Relationship With Director Puttanna Kanagal

ವಿಷ್ಣುವರ್ಧನ್-ಅಂಬರೀಷ್ ಮತ್ತು ಪುಟ್ಟಣ್ಣ ಕಣಗಾಲ್ ಸ್ನೇಹ ‘ನಾಗರಹಾವು’ ಚಿತ್ರದ ಬಳಿಕ ಕೂಡ ಹಿತಮಿತವಾಗಿ ಚೆನ್ನಾಗಿಯೇ ಇತ್ತು. ಆದರೆ, ಯಾಕೆ ಮತ್ತೆ ವಿಷ್ಣುಗೆ ಪುಟ್ಟಣ್ಣ ಅವರು ಸಿನಿಮಾ ಮಾಡಿಲ್ಲ ಎನ್ನವುದು ಎಂದೆಂದಿಗೂ ಯಕ್ಷಪ್ರಶ್ನೆಯಾಗಿಯೇ ಕನ್ನಡ ಸಿನಿಪ್ರೇಕ್ಷಕರನ್ನು ಕಾಡಲಿದೆ. ಅದಿನ್ನೂ ನಿಗೂಢ!

ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ (Dr Vishnuvardhan) ಅವರ ಬಗ್ಗೆ ಹೊರಜಗತ್ತಿಗೆ ಗೊತ್ತಾಗದ ಅದೆಷ್ಟೋ ಕಥೆಗಳಿವೆ. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ತಮ್ಮ ಸಂದರ್ಶನವೊಂದರಲ್ಲಿ ಕೆಲವು ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ನಟ ವಿಷ್ಣುವರ್ಧನ್ ಅವರು ಕನ್ನಡದ ಸೂಪರ್ ಸ್ಟಾರ್ ಆಗಿ ಬೆಳೆಯೋದಕ್ಕೆ ನಿರ್ದೇಶಕ ಪುಟ್ಟ ಕಣಗಾಲ್ (Puttanna Kanagal) ಅವರೂ ಕಾರಣ. ಪುಟ್ಟಣ್ಣ ನಿರ್ದೇಶನದ ನಾಗರಹಾವು ಸಿನಿಮಾ ಮೂಲಕ ನಟ ಸಂಪತ್ ಕುಮಾರ್ ಅವರು ‘ವಿಷ್ಣುವರ್ಧನ್’ ಆಗಿ ಬೆಳೆದರು. ನಾಗರಹಾವು ಅದೆಷ್ಟು ಗಳಿಕೆ ಹಾಗು ಫೇಮಸ್ ಆಗಿತ್ತು ಎಂದರೆ, ಅದೊಂದೇ ಸಿನಿಮಾ ಮೂಲಕ ನಟ ವಿಷ್ಣುವರ್ಧನ್ ಆಗಸದೆತ್ತರಕ್ಕೆ ಬೆಳೆದರು.

ಒಮ್ಮೆ ನಟ ವಿಷ್ಣುವರ್ಧನ್ ಅವರೇ ಹೇಳಿಕೊಂಡಂತೆ, ನಾಗರಹಾವು ಎಂಬ ಒಂದು ಸಿನಿಮಾ ನಟ ವಿಷ್ಣುವರ್ಧನ್ ಅವರಿಗೆ ನೂರು ಸಿನಿಮಾಗಳಿಗೆ ಆಗುವಷ್ಟು ಖ್ಯಾತಿ ಹಾಗೂ ಅವಕಾಶ ತಂದುಕೊಟ್ಟಿದೆ. ನಟ ವಿಷ್ಣುವರ್ಧನ್ ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಧ್ಯೆ ತುಂಬಾ ಗೌರವ ಹಾಗೂ ಬಾಂಧವ್ಯ ಇತ್ತು. ಅಂದು ಪುಟ್ಟಣ್ಣ ಹೇಳಿದ ಮಾತನ್ನು ವಿಷ್ಣುವರ್ಧನ್ ಗೌರವಿಸುತ್ತಿದ್ದರು, ಹೆಚ್ಚಿನ ವೇಳೆ ಹಾಗೇ ನಡೆದುಕೊಳ್ಳುತ್ತಿದ್ದರು. ಪುಟ್ಟಣ್ಣ ಹೇಳಿದ ಕಾರಣಕ್ಕೇ ಅವರು ತಮಿಳು ಸಿನಿಮಾದ ಅವಕಾಶವನ್ನು ರಿಜೆಕ್ಟ್ ಮಾಡಿ ಕನ್ನಡ ಚಿತ್ರರಂಗದಲ್ಲೇ ಉಳಿದುಕೊಂಡರು.

ಅದೊಂದು ಘಟನೆ ಇದೀಗ ವೈರಲ್ ಆಗಿದೆ. ನಟ ವಿಷ್ಣುವರ್ಧನ್ ಅವರನ್ನು ಮಂಚದ ಮೇಲೆ ಮಲಗಲು ಹೇಳಿ ತಾವು ನೆಲಕ್ಕೆ ಚಾಪೆಯ ಮೇಲೆ ಮಲಗುತ್ತಿದ್ದರಂತೆ ಅಂದಿನ ಸ್ಟಾರ್ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಸಹಜವಾಗಿಯೇ ಅದರಿಂದ ಮುಜುಗರ ಹಾಗೂ ಆತಂಕಕ್ಕೆ ಒಳಗಾದ ವಿಷ್ಣುವರ್ಧನ, ‘ಗುರುಗಳೇ, ನೀವ್ಯಾಕೆ ಕೆಳಕ್ಕೆ ಅದೂ ಚಾಪೆಯ ಮೇಲೆ ಮಲಗುಗತ್ತೀರಿ? ನೀವೇ ಮೇಲೆ ಮಲಗಿಕೊಳ್ಳಿ, ನಾನು ಕೆಳಕ್ಕೆ ಮಲಗುತ್ತೇನೆ’ ಎಂದು ಹೇಳಿದ್ದರಂತೆ. ಆದರೆ ಅದಕ್ಕೆ ಪುಟ್ಟಣ್ಣನವರು ಒಪ್ಪದೇ ಹೀಗೆ ಹೇಳಿದ್ದರಂತೆ..

ಅದಕ್ಕೆ ಪುಟ್ಟಣ್ಣನವರು ‘ನೀನು ಹೀರೋ, ಕ್ಯಾಮೆರಾ ಮೂಲಕ ಜಗತ್ತಿನ ಕಣ್ಣಿಗೆ ಕಾಣಿಸಿಕೊಳ್ಳುವ ನಟ. ನೀನು ಆರೋಗ್ಯಪೂರ್ಣವಾಗಿ, ಫ್ರೆಶ್ ಆಗಿ ಇರ್ಬೇಕು. ನಾಯಕನಟರಾದವರು ಚೆನ್ನಾಗಿ ನಿದ್ದೆ ಮಾಡಿರಬೇಕು, ಮುಖದಲ್ಲಿ ಫ್ರೆಶ್‌ನೆಸ್ ಕಾಣಸಬೇಕು. ನನಗೆ ಬೇರೆ ನಿದ್ದೆ ಬರುತ್ತಿಲ್ಲ. ಹೀಗಾಗಿ ನಾನು ಕೆಳಗೆ ಚಾಪೆಯ ಮೇಲೆ ಮಲಗುತ್ತೇನೆ, ನೀನು ಮೇಲೆ ಮಂಚ-ಮೆತ್ತನೆಯ ಹಾಸಿಗೆ ಹಾಗೂ ದಿಂಬಿನ ಮೇಲೆ ಹಾಯಾಗಿ ಮಲಗಿ ಬೆಳಿಗ್ಗೆ ಫ್ರೆಶ್ ಆಗಿ ಏಳು’ ಎಂದಿದ್ದರಂತೆ. ಹಾಗೇ ತಮ್ಮ ಶಿಷ್ಯ ವಿಷ್ಣುವರ್ಧನ್ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದರಂತೆ. ಅವರನ್ನು ಅಂದು ಇಡೀ ಚಿತ್ರರಂಗ ‘ಗುರು-ಶಿಷ್ಯರು’ ಎಂದೇ ಕರೆಯುತ್ತಿತ್ತು.

ಕನ್ನಡ ಚಿತ್ರರಂಗದ ಮೇರು ನಟ ಡಾ ವಿಷ್ಣುವರ್ಧನ್ Vishnuvardhan) ಹಾಗು ಲೆಜೆಂಡ್ ಖ್ಯಾತಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ (Puttanna Kanagal)ಅವರಿಬ್ಬರ ಜೋಡಿಯಲ್ಲಿ ಮೂಡಿ ಬಂದಿದ್ದ ‘ನಾಗರಹಾವು’ ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಸಿನಿಲೋಕಕ್ಕೆ ಹ್ಯಾಂಡ್‌ಸಮ್ ಸ್ಟಾರ್ ಹೀರೋ ವಿಷ್ಣುವರ್ಧನ್ ಕೊಡುಗೆಯಾಗಿ ಸಿಕ್ಕರು. ಅದೇ ನಾಗರಹಾವು (Naagarahaavu)ಚಿತ್ರದಲ್ಲಿ ಕನ್ವರ್ ಲಾಲ್ ಪಾತ್ರದಲ್ಲಿ ವಿಷ್ಣುವರ್ಧನ್ ಎದುರು ವಿಲನ್ ಆಗಿ ನಟಿಸಿದ್ದ ಅಂಬರೀಷ್ ಮುಂದೆ ‘ರೆಬೆಲ್ ಸ್ಟಾರ್ ಎಂದು ಖ್ಯಾತಿಯಾಗಿ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಅಪೂರ್ವ ಕೊಡುಗೆ ಆದರು. ಅಚ್ಚರಿ ಎಂಬಂತೆ ನಾಗರಹಾವು ಚಿತ್ರದಲ್ಲಿ ಹೀರೋ-ವಿಲನ್ ಆಗಿ ನಟಿಸಿದ್ದ ವಿಷ್ಣು-ಅಂಬಿ ನಿಜ ಜೀವನದಲ್ಲಿ ಅಪ್ತಮಿತ್ರರಾದರು.

ನಾಗರಹಾವು ಬಳಿಕ ನಟ ವಿಷ್ಣುವರ್ಧನ್-ನಿರ್ದೇಶಕ ಪುಟ್ಟಣ್ಣ ಮತ್ಯಾಕೆ ಒಟ್ಟಾಗಿ ಸಿನಿಮಾ ಮಾಡಲಿಲ್ಲ?

ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣುವರ್ಧನ್ ಸಂಗಮದ ನಾಗರಹಾವು ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಗಳಿಕೆ ಮಾಡಿ ಶತಮಾನೋತ್ಸವ ಆಚರಿಸಿ ಮುನ್ನುಗಿತ್ತು. ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದ ನಾಗರಹಾವು ಚಿತ್ರದ ಜೋಡಿ ಪುಟ್ಟಣ್ಣ ಕಣಗಾಲ್-ವಿಷ್ಣುವರ್ಧನ್ ಇಬ್ಬರೂಜೊತೆಯಾಗಿ ಇನ್ನಷ್ಟು ಸಿನಿಮಾಗಳನ್ನು ಪ್ರೇಕ್ಷಕರಿಗೆ ಕೊಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅಚ್ಚರಿ ಎಂಬಂತೆ ಹಾಗಾಗಲೇ ಇಲ್ಲ. ಅವರಿಬ್ಬರೂ ಇನ್ನೊಂದು ಚಿತ್ರವನ್ನು ಮಾಡಲೇ ಇಲ್ಲ. ಅದಕ್ಕೆ ನಿಜವಾದ ಕಾರಣ ಅಂದು ಹಾಗೂ ಇಂದೂ ಕೂಡ ನಿಗೂಢವಾಗಿಯೇ ಇದೆ. ಕೆಲವು ಉಹಾಪೋಹಗಳು ಅಂದೂ ಇದ್ದವು, ಇಂದೂ ಇವೆ ಅಷ್ಟೇ.

ನಾಗರಹಾವು ಚಿತ್ರದ ಬಳಿಕ ನಟ ವಿಷ್ಣುವರ್ಧನ್ ಸಾಲುಸಾಲು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕೂಡ ಹಲವು ಸಿನಿಮಾಗಳನ್ನು ಮಾಡಿ ಮತ್ತೆ ಕೆಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಆದರೆ, ನಟ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣರ ಸಂಗಮದ ಯಾವುದೇ ಚಿತ್ರ ಭವಿಷ್ಯದಲ್ಲಿ ಬರಲೇ ಇಲ್ಲ. ಈ ಬಗ್ಗೆ ಭಾರೀ ಬೇಸರ ಹೊಂದಿದ್ದ ನಟ ಹಾಗೂ ವಿಷ್ಣುವರ್ಧನ್ ಸ್ನೇಹಿತ ಅಂಬರೀಷ್ ಪುಟ್ಟಣ್ಣ ಕಣಗಾಲ್ ಬಳಿ ಹಲವು ಬಾರಿ ನಟ ವಿಷ್ಣುಗೆ ಮತ್ತಷ್ಟು ಸಿನಿಮಾಗಳನ್ನು ಮಾಡಲು ಕೇಳಿಕೊಂಡಿದ್ದರಂತೆ. ಪುಟ್ಟಣ್ಣ ಜತೆ ಸಾಕಷ್ಟು ಸಲುಗೆಯಿಂದ ಇದ್ದ ನಟ ಅಂಬರೀಷ್ ಈ ಬಗ್ಗೆ ಮಾತನಾಡಿದರೆ ಸ್ವಲ್ಪ ಸಂಕೋಚದ ಸ್ವಭಾವದ ವಿಷ್ಣುವರ್ಧನ್ ಆ ಬಗ್ಗೆ ಏನೂ ಹೇಳಿರಲಿಲ್ಲವಂತೆ.

ಪುಟ್ಟಣ್ಣ ನಿರ್ದೇಶನದ ‘ಮಾನಸ ಸರೋವರ’ ಹಾಗು ಶುಭ ಮಂಗಳ’ ಚಿತ್ರಗಳಿಗೆ ವಿಷ್ಣವರ್ಧನ್ ಯಾಕೆ ಹೀರೋ ಆಗಲಿಲ್ಲ?

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಾನಸ ಸರೋವರ’ ಹಾಗು ಶುಭ ಮಂಗಳ’ ಎರಡೂ ಚಿತ್ರಗಳಿಗೆ ವಿಷ್ಣವರ್ಧನ್ ಅವರೇ ನಾಯಕರಾಗುತ್ತಾರೆ ಎಂದೇ ಅಂದು ಎಲ್ಲರೂ ಭಾವಿಸಿದ್ದರಂತೆ. ಆದರೆ, ಅಚ್ಚರಿ ಎಂಬಂತೆ ಆ ಚಿತ್ರಗಳಿಗೆ ಅಂದಿನ ಇನ್ನೊಬ್ಬರು ಜನಪ್ರಿಯ ನಟ ಶ್ರೀನಾಥ್ ಆಯ್ಕೆಯಾಗಿದ್ದರು. ಆತ್ಮೈ ಸ್ನೇಹಿತ ವಿಷ್ಣುವರ್ಧನ್‌ಗೆ ಇನ್ನಷ್ಟು ಸಿನಿಮಾ ಮಾಡಲು ಹೇಳಿದ್ದ ಅಂಬರೀಷ್ ಮಾತನ್ನು ಪುಟ್ಟಣ್ಣ ಅವರು ಕೊನೆಗೂ ನಡೆಸಿಕೊಡಲೇ ಇಲ್ಲ.

ಹಾಗಂತ, ನಟರಾದ ವಿಷ್ಣುವರ್ಧನ್-ಅಂಬರೀಷ್ ಮತ್ತು ಪುಟ್ಟಣ್ಣ ಕಣಗಾಲ್ ಸ್ನೇಹ ಹಿತಮಿತವಾಗಿ ಚೆನ್ನಾಗಿಯೇ ಇತ್ತು ಎನ್ನಲಾಗಿದೆ. ಆದರೆ, ಯಾಕೆ ಮತ್ತೆ ವಿಷ್ಣುಗೆ ಪುಟ್ಟಣ್ಣ ಅವರು ಸಿನಿಮಾ ಮಾಡಿಲ್ಲ ಎನ್ನವುದು ಎಂದೆಂದಿಗೂ ಯಕ್ಷಪ್ರಶ್ನೆಯಾಗಿಯೇ ಕನ್ನಡ ಸಿನಿಪ್ರೇಕ್ಷಕರನ್ನು ಕಾಡಲಿದೆ.



Source link

Leave a Reply

Your email address will not be published. Required fields are marked *