Bagalkote Dalit Social Boycott Row: ತಮದಡ್ಡಿ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ‌ ಬಹಿಷ್ಕಾರ ವಿವಾದ ಸುಖಾಂತ್ಯ | Bagalkote Dalit Social Boycott Row Ends Peace Restored In Tamadaddi Village After Official Intervention

Bagalkote Dalit Social Boycott Row: ತಮದಡ್ಡಿ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ‌ ಬಹಿಷ್ಕಾರ ವಿವಾದ ಸುಖಾಂತ್ಯ | Bagalkote Dalit Social Boycott Row Ends Peace Restored In Tamadaddi Village After Official Intervention


ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ದಲಿತರ ಮೇಲೆ ಹೇರಲಾಗಿದ್ದ ಸಾಮಾಜಿಕ ಬಹಿಷ್ಕಾರದ ಆರೋಪವು ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಮತ್ತು ಪೊಲೀಸರ ಸಮ್ಮುಖದಲ್ಲಿ ನಡೆದ ಸಭೆಯ ನಂತರ, ದಲಿತರಿಗೆ ಊರಿನಲ್ಲೇ ಕ್ಷೌರ ಮಾಡುವ ಮೂಲಕ ವಿವಾದ ಬಗೆಹರಿಸಲಾಯಿತು.

ಬಾಗಲಕೋಟೆ (ಫೆ.24): ಬಾಗಲಕೋಟೆ ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ಕೇಳಿ ಬಂದಿದ್ದ ಸಾಮಾಜಿಕ‌ ಬಹಿಷ್ಕಾರದ ಆರೋಪದ ವಿವಾದ ಸುಖಾಂತ್ಯವಾಗಿದೆ. ಹೌದು, ಜಿಲ್ಲೆಯ ಜಮಖಂಡಿ ಎಸಿ ಶ್ವೇತಾ ಬಿಡಿಕರ್ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಗ್ರಾಮಸ್ಥರ ಜೊತೆಗಿನ ಸಭೆಯಿಂದ ವಿವಾದ ಅಂತ್ಯವಾಗಿದೆ.

ದಲಿತರಿಗೆ ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರು

ಗ್ರಾಮದಲ್ಲಿ ಇತ್ತೀಚಿನ ಕಾರ್ಯಕ್ರಮಗಳಿಗೆ ದಲಿತರಿಗೆ ಪ್ರವೇಶ ನೀಡಿರಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಸಮುದಾಯದ ಮಧ್ಯೆ ಅಸಮಾಧಾನ ಉಂಟಾಗಿತ್ತು.

ಇದನ್ನೂ ಓದಿ: Bangalore: ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆ, ಸ್ಕೂಟರ್ ಪಲ್ಟಿ, ಜಸ್ಟ್ ಮಿಸ್ ಆದ ಶಾಲಾ ಮಕ್ಕಳು! ಇದೇನಾ ಬ್ರ್ಯಾಂಡ್ ಬೆಂಗಳೂರು?

ಹೀಗಾಗಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಮತ್ತು ದಲಿತರಿಗೆ ಕ್ಷೌರ ಕೂಡ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಸವರ್ಣೀಯರು ಹಾಗೂ ದಲಿತರ ಸಭೆ ಕರೆದು ಅಧಿಕಾರಿಗಳು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಮಾತುಕತೆಯಿಂದಾಗಿ ದಲಿತರಿಗೆ ಊರಲ್ಲೇ ಇರುವ ಕಟಿಂಗ್ ಅಂಗಡಿಯಲ್ಲಿ ಕ್ಷೌರ ಮಾಡಿಸುವ ಮೂಲಕ ಸುಖಾಂತ್ಯ ಹಾಡಲಾಗಿದೆ.

YouTube video player



Source link

Leave a Reply

Your email address will not be published. Required fields are marked *