solar migration Milky Way ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು? | Gaia New Study Solar Migration From Milky Way Center Enabled Life On Earth

solar migration Milky Way ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು? | Gaia New Study Solar Migration From Milky Way Center Enabled Life On Earth



solar migration Milky Way ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು? | Gaia New Study Solar Migration From Milky Way Center Enabled Life On Earth

ಸೌರ ಮಂಡಲದ ಮಹತ್ವದ ಘಟನೆ, ಸೂರ್ಯ, ನಕ್ಷತ್ರ ಸಮೂಹ ವಲಸೆ, ಇದೆಯಾ ಆಪತ್ತು?, ಗೈಯಾ ಸಂಶೋಧನೆ ಕೇಂದ್ರ ನಡೆಸಿದ ಅಧ್ಯಯನ ವರದಿ ಕೆಲ ಸ್ಫೋಟಕ ಮಾಹಿತಿ ನೀಡಿದೆ. ಕ್ಷೀರಪಥದಿಂದ ಸೂರ್ಯ ಹಾಗೂ ನಕ್ಷತ್ರ ಸಮೂಹಗಳು ವಲಸೆ, ಏನಿದು? 

ನವದೆಹಲಿ (ಮಾ.13) ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಸೇರಿದಂತೆ ಭೂಮಂಡಲ, ಸೌರಮಂಡಲಗಳ ಕುತೂಹಲ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಇದ್ದೇ ಇದೆ. ಭೂಮಿ ತಿರುಗುವಿಕೆ, ನಕ್ಷತ್ರಗಳ ಚಲನೆ, ಚಂದ್ರನ ಮೇಲ್ಮೈ ಹೀಗೆ ಪ್ರತಿಯೊಂದು ಕೌತುಕದ ವಿಷಯ . ಇದಕ್ಕೆ ಪೂರಕವಾಗಿ ವಿಜ್ಞಾನಿಗಳ ಸತತ ಅಧ್ಯಯನ ಹೊಸ ಹೊಸ ಮಾಹಿತಿಗಳನ್ನು ನೀಡುತ್ತದೆ. ಇದು ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಸೂರ್ಯ ಹಾಗೂ ನಕ್ಷತ್ರ ಸಮೂಹಗಳ ವಲಸೆ ಕುರಿತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗೈಯಾ ಬಾಹ್ಯಾಕಾಶ ಕೇಂದ್ರ ಮಹತ್ವದ ಮಾಹಿತಿ ನೀಡಿದೆ. ಈ ಅಧ್ಯಯನದ ಪ್ರಕಾರ ಸೂರ್ಯ ಹಾಗೂ ನಕ್ಷತ್ರ ಸಮೂಹಗಳು 400 ರಿಂದ 600 ಕೋಟಿ ವರ್ಷಗಳ ಹಿಂದೆ ಮಿಲ್ಕಿ ವೇ ಅಂದರೆ ಕ್ಷೀರಪಥದ ಮಧ್ಯಭಾಗದಿಂದ ಹೊರಗಿನ ಪ್ರದೇಶಕ್ಕೆ ವಲಸೆ ಬಂದಿದೆ ಎಂದಿದೆ. ಇದಕ್ಕೆ ಪೂರಕ ದಾಖಲೆಯನ್ನು ನೀಡಿದೆ.

ಸೂರ್ಯನ ಮೂಲಸ್ಥಾನ

10 ಸಾವಿರ ಜ್ಯೋತಿವರ್ಷಗಳ ಹಿಂದೆ ಸೂರ್ಯ ಬೇರೆ ಸ್ಥಾನದಲ್ಲಿದ್ದ. ಅಂದರೆ ಸೂರ್ಯ ಹುಟ್ಟು, ನಕ್ಷತ್ರಗಳ ಹುಟ್ಟಿನ ಕೇಂದ್ರ ಸ್ಥಾನ. ಅದು ಅದು ಮಿಲ್ಕಿ ವೇನ ಕೇಂದ್ರ ಭಾಗವಾಗಿತ್ತು. ಇಲ್ಲಿನ ವಾತಾವರಣ ನಕ್ಷತ್ರಗಳ ಉಗಮಕ್ಕೆ ಪೂರಕವಾಗಿತ್ತು. ಅಂದರೆ ಕ್ಷೀರಪಥದದ ಕೇಂದ್ರ ಭಾಗದಲ್ಲಿರುವ ನೈಸರ್ಗಿಕ ಅನಿಲ ಹಾಗೂ ಧೂಳು ನಕ್ಷತ್ರಗಳ ಉಗಮಕ್ಕೆ ಕಾರಣವಾಗಿದೆ. ಆದರೆ ಈ ಮಿಲ್ಕಿ ವೇ ಕೇಂದ್ರ ಭಾಗ ಭಾರಿ ಘರ್ಷಣೆಯ ಸ್ಥಾನವಾಗಿತ್ತು. ಹೀಗಾಗಿ ಸೂರ್ಯ ಹಾಗೂ ನಕ್ಷತ್ರಗಳ ಸಮೂಹ ಕ್ಷೀರಪಥದಂದ ವಲಸೆ ಬಂದು ಈಗಿರುವ ಸುರಕ್ಷಿತ ಸ್ಥಳದಲ್ಲಿದೆ ಎಂದು ಅಧ್ಯಯನ ಹೇಳುತ್ತಿದೆ.

ಸೂರ್ಯನಷ್ಟೇ ವಯಸ್ಸು, ತಾಮಪಾನ ಸೇರಿದಂತೆ ರಾಸಾಯನಿಕ ಸಂಯೋಜನೆ ಹೊಂದಿರುವ ಬರೋಬ್ಬರಿ 6,594 ನಕ್ಷತ್ರಗಳನ್ನು ಗೈಯಾ ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ವಿಶೇಷ ಅಂದರೆ ಈ ನಕ್ಷತ್ರಗಳು ಸೂರ್ಯನ ಅಕ್ಕ ಪಕ್ಕದಲ್ಲೇ ಗೋಚರಿಸಿದೆ. ಕ್ಷೀರಪಥದ ಕೇಂದ್ರ ಭಾಗದದಲ್ಲಿನ ಘರ್ಷಣೆಯಿಂದ ಸೂರ್ಯ ಹಾಗೂ ನಕ್ಷತ್ರಗಳನ್ನು ಪಥದಿಂದ ಹೊರಗೆ ತಳ್ಳಿದೆ. ಪರಿಣಾಮ ಈ ಸಾಮೂಹಿಕ ವಲಸೆ ಆರಂಭಗೊಂಡಿತು.

ವಲಸೆಯಿಂದ ಜೀವಿಗಳ ಉಗಮ

ಭೂಮಿ, ಸಸ್ಯ ಸಂಕಲು, ಜೀವಿಗಳ ಉಗಮ ಕುರಿತು ಸಾಕಷ್ಟು ಅಧ್ಯಯನ ವರದಿಗಳಿವೆ. ಇದೀಗ ಗೈಯಾ ಸಂಶೋಧನಾ ಕೇಂದ್ರ ವಿಜ್ಞಾನಿಗಳ ಹೊಸ ಅಧ್ಯಯನ ಈ ಕುರಿತು ಬೆಳಕು ಚೆಲ್ಲುತ್ತಿದೆ. ಸೂರ್ಯ ಹಾಗೂ ನಕ್ಷತ್ರ ಸಮೂಹಗಳು ಸಾಮೂಹಿಕ ವಲಸಯ ನಂತರ ಈಗಿರುವ ಸುರಕ್ಷಿತ ಸ್ಥಾನದಲ್ಲಿ ನೆಲೆ ನಿಂತಿತ್ತು. ಅಪಾಯಕಾರಿ ಸ್ಥಳದಿಂದ ಸೂರ್ಯ ಹಾಗೂ ನಕ್ಷತ್ರಗಳು ವಲಸೆ ಬಂದು ಈಗಿನ ಸ್ಥಾನದಲ್ಲಿ ನೆಲೆನಿಂತ ಕಾರಣದಿಂದಲೇ ಭೂಮಿಯ ಮೇಲೆ ಜೀವಿಗಳ ಉಗಮಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು 400 ರಿಂದ 600 ಕೋಟಿ ವರ್ಷಗಳ ಹಿಂದೆ ನಡೆದ ಘಟನೆ. ಸದ್ಯ ಯಾವುದೇ ಅಪಾಯ ಭೂಮಿಗೂ ಇಲ್ಲ, ಸೌರಮಂಡಲಕ್ಕೂ ಇಲ್ಲ. ಆದರೆ ಉಗಮ, ಸೂರ್ಯ ಹಾಗೂ ನಕ್ಷತ್ರಗಳ ಕುರಿತ ಅಧ್ಯಯನ ಈ ಹೊಸ ಮಾಹಿತಿಯನ್ನು ನೀಡಿದೆ.



Source link

Leave a Reply

Your email address will not be published. Required fields are marked *