Davanagere Shivaji Maharaj Flex Controversy: Instagram ನಲ್ಲಿ ಪ್ರಚೋದನಾತ್ಮಕ ಪೋಸ್ಟ್, ಪೇಜ್ ಅಡ್ಮಿನ್ ವಿರುದ್ಧ ಕೇಸ್! | Davanagere Shivaji Maharaj Flex Controversy Police File Case Against Page Admin

ಛತ್ರಪತಿ ಶಿವಾಜಿ ಫ್ಲೆಕ್ಸ್‌ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಪೊಲೀಸರು ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಚೋದನಾತ್ಮಕ ಪೋಸ್ಟ್ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ದಾವಣಗೆರೆ (ಸೆ.1): ದಾವಣಗೆರೆಯ ಮಟ್ಟಿಕಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್‌ಖಾನ್‌ರನ್ನು ಕೊಲ್ಲುವ ದೃಶ್ಯವನ್ನು ಚಿತ್ರಿಸುವ ಫ್ಲೆಕ್ಸ್ ಅಳವಡಿಕೆಯಿಂದ ಉಂಟಾದ ವಿವಾದ ತಾರಕಕ್ಕೇರಿದೆ. ಈ ಫ್ಲೆಕ್ಸ್‌ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅದನ್ನು ಬದಲಾಯಿಸಿದ್ದಾರೆ. ಆದರೆ, ಫ್ಲೆಕ್ಸ್ ತೆರವುಗೊಳಿಸುವ ಸಂದರ್ಭದಲ್ಲಿ ಯುವಕರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ಘಟನೆಯ ವಿಡಿಯೋ ಜೊತೆಗೆ ಪ್ರಚೋದನಾತ್ಮಕ ಬರಹವನ್ನು ಇನ್ಸ್ಟಾಗ್ರಾಮ್‌ನ ‘ಹಿಂದೂ ಆಡಳಿತ ದಾವಣಗೆರೆ’ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಆಜಾದ್ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ.

ಮೂಲಗಳ ಪ್ರಕಾರ, ಮಟ್ಟಿಕಲ್‌ನಲ್ಲಿ ಅಳವಡಿಸಲಾಗಿದ್ದ ಈ ಫ್ಲೆಕ್ಸ್ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಕೆಲವರು ದೂರಿದ್ದರು. ಇದರ ಪರಿಣಾಮವಾಗಿ, ಪೊಲೀಸರು ಫ್ಲೆಕ್ಸ್ ತೆಗೆದುಹಾಕಲು ಮುಂದಾದಾಗ, ಕೆಲವು ಯುವಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಈ ಘಟನೆಯ ವಿಡಿಯೋವನ್ನು ‘ಹಿಂದೂ ಆಡಳಿತ ದಾವಣಗೆರೆ’ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪ್ರಚೋದನಾತ್ಮಕ ಬರಹದೊಂದಿಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ‘ತಾಕತ್ ಇದ್ರೆ ಅಜಾನ್ ಬ್ಯಾನ್ ಮಾಡಿ..’ ಡಿಜೆ ಅನುಮತಿ ಕೋರಿ ಪ್ರತಿಭಟನೆ, ರೇಣುಕಾಚಾರ್ಯ ವಿರುದ್ಧ FIR

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ಆರಂಭಿಸಿರುವ ಆಜಾದ್ ನಗರ ಠಾಣೆಯ ಪೊಲೀಸರು, ವಿಡಿಯೋ ಅಪ್‌ಲೋಡ್ ಮಾಡಿದ ಮತ್ತು ಶೇರ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ‘ಹಿಂದೂ ಆಡಳಿತ ದಾವಣಗೆರೆ’ ಪೇಜ್‌ನ ಅಡ್ಮಿನ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಚೋದನಾತ್ಮಕ ಪೋಸ್ಟ್‌ಗಳು ಸಾಮಾಜಿಕ ಶಾಂತಿಗೆ ಭಂಗ ತರುವ ಸಾಧ್ಯತೆ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿದುಬಂದಿದೆ.

ಸದ್ಯ ಈ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ತನಿಖೆಯ ಫಲಿತಾಂಶದ ನಂತರ ಸ್ಪಷ್ಟತೆ ದೊರೆಯಲಿದೆ.

Source link

Leave a Reply

Your email address will not be published. Required fields are marked *