Headlines

ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಮೇಲೆ ₹10 ಕೋಟಿ ವಂಚನೆ ಆರೋಪ: ಹೈದರಾಬಾದ್‌ನಲ್ಲಿ ಪ್ರಕರಣ ದಾಖಲು! | Singer Mangli Booked Rs 10 Crore Cheating Case In Hyderabad Life Threat Alleged Sat

ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಮೇಲೆ ₹10 ಕೋಟಿ ವಂಚನೆ ಆರೋಪ: ಹೈದರಾಬಾದ್‌ನಲ್ಲಿ ಪ್ರಕರಣ ದಾಖಲು! | Singer Mangli Booked Rs 10 Crore Cheating Case In Hyderabad Life Threat Alleged Sat



ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಮೇಲೆ ₹10 ಕೋಟಿ ವಂಚನೆ ಆರೋಪ: ಹೈದರಾಬಾದ್‌ನಲ್ಲಿ ಪ್ರಕರಣ ದಾಖಲು! | Singer Mangli Booked Rs 10 Crore Cheating Case In Hyderabad Life Threat Alleged Sat

ಖ್ಯಾತ ಗಾಯಕಿ ಮಂಗ್ಲಿ ಮತ್ತು ಇತರ ಮೂವರ ವಿರುದ್ಧ 10 ಕೋಟಿ ರೂ. ಮೈಕ್ರೋಫೈನಾನ್ಸ್ ವಂಚನೆ ಆರೋಪದ ಮೇಲೆ ಹೈದರಾಬಾದ್‌ನಲ್ಲಿ ಎಫ್‌ಐ‌ಆರ್ ದಾಖಲಾಗಿದೆ. ವಕೀಲರೊಬ್ಬರು ನೀಡಿದ ದೂರಿನಲ್ಲಿ ಹಣ ಹಿಂದಿರುಗಿಸದೆ ವಂಚಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ (Mangli) ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಮೈಕ್ರೋಫೈನಾನ್ಸ್ ವ್ಯವಹಾರದಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ಮಂಗ್ಲಿ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಏನಿದು ಪ್ರಕರಣ?

ಹೈದರಾಬಾದ್ ಮೂಲದ ವಕೀಲರಾದ ಸುಬ್ಬರಾವ್ ಎಂಬುವವರು ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ್ದಾರೆ. ಮೈಕ್ರೋಫೈನಾನ್ಸ್ ಸ್ಕೀಮ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಂಗ್ಲಿ ಮತ್ತು ಅವರ ತಂಡವು ತಮಗೆ 10 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಹೂಡಿಕೆಯ ಹೆಸರಿನಲ್ಲಿ ಹಣ ಪಡೆದು ಈಗ ಅದನ್ನು ಹಿಂದಿರುಗಿಸದೆ ದ್ರೋಹ ಬಗೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೀವ ಬೆದರಿಕೆ ಆರೋಪ:

ಕೇವಲ ಹಣಕಾಸಿನ ವಂಚನೆ ಮಾತ್ರವಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜೀವ ಬೆದರಿಕೆ ಕೂಡ ಇದೆ ಎಂದು ವಕೀಲ ಸುಬ್ಬರಾವ್ ದೂರಿದ್ದಾರೆ. ಮಂಗ್ಲಿ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳು ತಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಾಯಕಿ ಮಂಗ್ಲಿ ಮತ್ತು ಇತರೆ ಮೂವರ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ತನಿಖೆ ಚುರುಕು:

ವಕೀಲರ ದೂರಿನನ್ವಯ ಪಂಜಗುಟ್ಟಾ ಪೊಲೀಸರು ಬಿಎನ್ಎಸ್ (Bharatiya Nyaya Sanhita) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೂರಿನಲ್ಲಿರುವ ಸತ್ಯಾಸತ್ಯತೆ ಮತ್ತು ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸದ್ಯ ಹೈದರಾಬಾದ್ ಪೊಲೀಸ್ ವಲಯದಲ್ಲಿ ಈ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ.

ಜಾನಪದ ಹಾಡುಗಳು ಹಾಗೂ ಟಾಲಿವುಡ್‌ನ ದೊಡ್ಡ ಸಿನಿಮಾಗಳಲ್ಲಿ ಹಾಡುವ ಮೂಲಕ ಮಂಗ್ಲಿ ಅವರು ಭಾರತಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡದಲ್ಲೂ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಮಂಗ್ಲಿ ವಿರುದ್ಧ ಇಂತಹ ಗಂಭೀರ ಹಣಕಾಸು ವಂಚನೆ ಆರೋಪ ಕೇಳಿಬಂದಿರುವುದು ಅವರ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಈ ಬಗ್ಗೆ ಗಾಯಕಿ ಮಂಗ್ಲಿ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.



Source link

Leave a Reply

Your email address will not be published. Required fields are marked *