Headlines

Breaking: ಚಿನ್ನಸ್ವಾಮಿಗೆ ಐಪಿಎಲ್‌, ಬೆಂಗಳೂರಲ್ಲಿ ಐದು ಪಂದ್ಯ ಆಡಲು ಕೊನೆಗೂ ಒಪ್ಪಿದ RCB!

Breaking: ಚಿನ್ನಸ್ವಾಮಿಗೆ ಐಪಿಎಲ್‌, ಬೆಂಗಳೂರಲ್ಲಿ ಐದು ಪಂದ್ಯ ಆಡಲು ಕೊನೆಗೂ ಒಪ್ಪಿದ RCB!

Breaking: ಚಿನ್ನಸ್ವಾಮಿಗೆ ಐಪಿಎಲ್‌, ಬೆಂಗಳೂರಲ್ಲಿ ಐದು ಪಂದ್ಯ ಆಡಲು ಕೊನೆಗೂ ಒಪ್ಪಿದ RCB!

ಬೆಂಗಳೂರು (ಮಾ.3): ಐಪಿಎಲ್‌ನ ಹಾಲಿ ಚಾಂಪಿಯನ್ಸ್ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರುವುದು ಈಗ ಅಧಿಕೃತವಾಗಿದೆ. ಐಪಿಎಲ್‌ 19ರ ಸೀಸನ್‌ನ ತನ್ನ 5 ತವರು ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂದು ಆರ್‌ಸಿಬಿ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ. ಅಭಿಮಾನಿಗಳಿಗಾಗಿ ಪಂದ್ಯಗಳನ್ನು ತವರು ನೆಲಕ್ಕೆ ಮರಳಿ ತರುವ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಸಿದ ತಿಂಗಳುಗಳ ಪರಿಶ್ರಮ ಮತ್ತು ಸಮನ್ವಯದ ಫಲವಾಗಿ ಈ ಮಹತ್ವದ ಬೆಳವಣಿಗೆ ಸಾಧ್ಯವಾಗಿದೆ ಎಂದು ಫ್ರಾಂಚೈಸಿ ಹೇಳಿದೆ.

ತನ್ನ ಐಪಿಎಲ್ 2026ರ ಅಭಿಯಾನದ ಉಳಿದ ಎರಡು ತವರು ಪಂದ್ಯಗಳು ಈಗಾಗಲೇ ಘೋಷಣೆ ಆಗಿರುವಂತೆ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸಲು ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲ ನೀಡಿದ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಕರ್ನಾಟಕ ಪೊಲೀಸರಿಗೆ ಆರ್‌ಸಿಬಿ ತನ್ನ ಕೃತಜ್ಞತೆಗಳನ್ನು ಸಲ್ಲಿಸಿದೆ. ಐಪಿಎಲ್ ಸೀಸನ್‌ ಆರಂಭಕ್ಕೂ ಮುನ್ನ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ನಡೆಸಿದ ಸಾಮೂಹಿಕ ಪ್ರಯತ್ನಗಳಿಂದಾಗಿ, ಹಾಲಿ ಚಾಂಪಿಯನ್‌ ತಮ್ಮ ಹೆಚ್ಚಿನ ತವರು ಪಂದ್ಯಗಳನ್ನು ತಮ್ಮದೇ ಮೈದಾನದಲ್ಲಿ ಆಡುವುದು ಖಚಿತವಾಗಿದೆ.

ನಮ್ಮ ಅಸ್ಮಿತೆ ಜೀವಂತವಾಗುಳಿದ ಸ್ಥಳ ಚಿನ್ನಸ್ವಾಮಿ

ಈ ಬಗ್ಗೆ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ ರಾಜೇಶ್ ಮೆನನ್, "ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ ನಮ್ಮ ತವರು ಮೈದಾನವಲ್ಲ; ಇದು ಒಂದು ತಂಡವಾಗಿ ನಮ್ಮ ಅಸ್ಮಿತೆಯು ಜೀವಂತವಾಗುವ ಸ್ಥಳವಾಗಿದೆ. ಬೆಂಗಳೂರಿನ ಅಭಿಮಾನಿಗಳು ನೀಡುವ ಅದ್ಭುತ ಶಕ್ತಿಯು ನಮ್ಮ ಆಟಗಾರರಿಗೆ ಆಟದ ಪ್ರತಿ ಹಂತದಲ್ಲೂ ಸ್ಫೂರ್ತಿಯಾಗಿ ನಿಂತಿದೆ. ನಮ್ಮ ಅಭಿಮಾನಿಗಳು ನಮಗೆ ಬೇಷರತ್ತಾದ ಬೆಂಬಲ ನೀಡಿದ್ದಾರೆ ಮತ್ತು ಅವರು ತಮ್ಮ ತಂಡವನ್ನು ತವರು ನೆಲದಲ್ಲಿ ಆಡುವುದನ್ನು ನೋಡಲು ಅರ್ಹರಾಗಿದ್ದಾರೆ," ಎಂದರು.

"ಅನುಮತಿಗೆ ಸಂಬಂಧಿಸಿದ ವಿವರವಾದ ಚರ್ಚೆಗಳು ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ನಂತರ, ಆರ್‌ಸಿಬಿ ಬೆಂಗಳೂರಿನಲ್ಲಿ ಐದು ಪಂದ್ಯಗಳನ್ನು ಆಡಲಿದೆ ಎಂದು ತಿಳಿಸಲು ನಮಗೆ ಸಂತೋಷವಾಗಿದೆ. ಇದನ್ನು ಸಾಧ್ಯವಾಗಿಸಿದ ಕರ್ನಾಟಕ ಸರ್ಕಾರ, ಕೆಎಸ್‌ಸಿಎ ಮತ್ತು ಕರ್ನಾಟಕ ಪೊಲೀಸರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ," ಎಂದು ತಿಳಿಸಿದರು. ಪ್ರಯತ್ನ ಮತ್ತು ಸಕಾರಾತ್ಮಕ ಫಲಿತಾಂಶವು ಆರ್‌ಸಿಬಿ ಫ್ರಾಂಚೈಸಿಯು ತನ್ನ ತವರು ಅಭಿಮಾನಿಗಳೊಂದಿಗೆ ಹೊಂದಿರುವ ಆಳವಾದ ಸಂಬಂಧವನ್ನು ಪುನರುಚ್ಚರಿಸುತ್ತದೆ ಮತ್ತು ಚಾಂಪಿಯನ್‌ ಟೀಮ್‌ ತಮ್ಮ ಕೋಟೆಯಲ್ಲಿ ಮತ್ತೆ ಅಬ್ಬರಿಸಲಿದೆ.

Source link

Leave a Reply

Your email address will not be published. Required fields are marked *