Headlines

College ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ | Boyfriend Banawo Campaign Allagedly Spreads In Colleges Female Students Indore Spark Buzz

College ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ | Boyfriend Banawo Campaign Allagedly Spreads In Colleges Female Students Indore Spark Buzz



College ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ | Boyfriend Banawo Campaign Allagedly Spreads In Colleges Female Students Indore Spark Buzz

ಬಾಯ್‌ಫ್ರೆಂಡ್ ಕ್ಯಾಂಪೇನ್, ವಿದ್ಯಾರ್ಥಿನಿಯರ ಕೂಪಕ್ಕೆ ತಳ್ಳಿ ಹುಡುಗರ ಜೊತೆ ವಿಡಿಯೋ ಕಾಲ್ ಲೈಂಗಿಕತೆ, ವಿದ್ಯಾರ್ಥಿನಿ ಒಬ್ಬಳು ಈ ಅಭಿಯಾನ ಆರಂಭಿಸಿದ್ದಾಳೆ. ಬಳಿಕ ಆಕೆಯ ಗೆಳತಿಯರು ಸೇರಿದಂತೆ ಹಲವರನ್ನು ಒತ್ತಾಯಪೂರ್ವಕವಾಗಿ ಕೂಪಕ್ಕೆ ತಳ್ಳಿದ್ದಾಳೆ.

ಇಂದೋರ್ (ಮಾ.06) ಹದಿ ಹರೆಯದ ಕಾಲೇಜು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ ಮೋಸದ ಬಲೆಗೆ ಬೀಳಿಸುವ ಘಟನೆಗಳು ಹಲವೆಡೆ ಎಗ್ಗಿಲ್ಲದೆ ನಡೆಯುತ್ತಿದೆ ಇದೀಗ ಇಂದೋರ್ ನಗರದ ಕಾಲೇಜು ವಿದ್ಯಾರ್ಥಿನಿಯರನ್ನು ಬಾಯ್‌ಫ್ರೆಂಡ್ ಬನಾವೋ ಅಭಿಯಾನದಡಿ ಸಿಲುಕಿಸಿ ನರಕಕ್ಕೆ ತಳ್ಳುತ್ತಿರುವ ಪ್ರಕರಣವೊಂದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಾಯ್‌ಫ್ರೆಂಡ್ ಮಾಡಿ ಅಭಿಯಾನ ಆರಂಭಿಸಿದ್ದಾಳೆ. ಬಳಿಕ ತನ್ನ ರೂಂ ಮೇಟ್ಸ್, ಕಾಲೇಜು ಗೆಳತಿಯರನ್ನು ಒತ್ತಾಯಪೂರ್ವಕವಾಗಿ ಅಪರಿಚಿತ ಹುಡುಗರ ಜೊತೆ ಸಂಪರ್ಕ ಬೆಳೆಸುವಂತೆ ಮಾಡಿದ್ದಾಳೆ. ಪ್ರತಿ ದಿನ ರಾತ್ರಿ ವಿಡಿಯೋ ಕಾಲ್ ಮಾಡಿ ವರ್ಚುವಲ್ ಲೈಂಗಿಕತೆ ಪ್ರಚೋದಿಸುವ ಈ ಕ್ಯಾಂಪೇನ್ ಇಂದೋರ್‌ನಲ್ಲಿ ಆತಂಕ ಹೆಚ್ಚಿಸಿದೆ.

ಇಂದೋರ್‌ನಲ್ಲಿ ನಡೆದಿದೆ ಎನ್ನಲಾಗಿರುವ ಈ ಅಭಿಯಾನ ಹಾಗೂ ಅಕ್ರಮ ಪೋಷಕರ ಆತಂಕ ಹೆಚ್ಚಿಸಿದೆ. ಈ ಅಭಿಯಾನ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾಲೇಜು ವಿದ್ಯಾರ್ಥಿನಿಯರು ಕೂಪದಲ್ಲಿ ಸಿಲುಕಿ ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಏನಿದು ಬಾಯ್‌ಫ್ರೆಂಡ್ ಬನಾವೋ ಕ್ಯಾಂಪೇನ್

ಇಂದೋರ್ ಖಾಸಗಿ ಕಾಲೇಜು ಒಂದರ ವಿದ್ಯಾರ್ಥಿನಿ ಕ್ಯಾಂಪಸ್‌ನಲ್ಲಿ ಬಾಯ್‌ಫ್ರೆಂಡ್ ಮಾಡಿಕೊಳ್ಳಿ ಅಭಿಯಾನ ಆರಂಭಿಸಿದ್ದಾರೆ. ಹಾಸ್ಟೆಲ್‌ನಲ್ಲಿನ ವಿದ್ಯಾರ್ಥಿನಿಯರು, ಕಾಲೇಜಿನ ಗೆಳತಿಯರನ್ನು ಈ ಕೂಪಕ್ಕೆ ತಳ್ಳಿದ್ದಾಳೆ. ಅಪರಿಚಿತ ಹುಡುಗರ ಫೋನ್ ನಂಬರ್ ನೀಡಿ ಅವರ ಜೊತೆ ಪ್ರೀತಿ ಹಾಗೂ ಲೈಂಗಿಕತೆಗೆ ಸಹಕರಿಸಲ ಒತ್ತಾಯಿಸಿದ್ದಾಳೆ. ಪ್ರತಿ ದಿನ ರಾತ್ರಿ ಅಪರಿಚಿತ ಹುಡುಗರ ಜೊತೆ ವಿಡಿಯೋ ಕಾಲ್ ಮಾಡಿ ವರ್ಚುವಲ್ ಲೈಂಗಿಕತೆ ಮಾಡುವ ಈ ಅಭಿಯಾನ ಸದ್ದಿಲ್ಲದೆ ಹರಡುತ್ತಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ವರದಿಯಾಗಿದೆ.

ಹಲವು ವಿದ್ಯಾರ್ಥಿನಿಯರನ್ನು ಈ ಕೂಪಕ್ಕೆ ತಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅಭಿಯಾನ ಹಲವು ಕಾಲೇಜುಗಳಿಗೆ ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ. ಹಲವು ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹಲವು ವಿದ್ಯಾರ್ಥಿನಿಯರು ವಿಡಿಯೋ ಕಾಲ್ ಬಳಿಕ ಭೇಟಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕುಕೃತ್ಯ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.



Source link

Leave a Reply

Your email address will not be published. Required fields are marked *