Headlines

ತನ್ನ ಡಿಎನ್‌ಎ ಬಳಸಿ ಸೂಪರ್‌ ರೇಸ್ ಸೃಷ್ಟಿಗೆ ಎಪ್ಸ್ಟೀನ್ ಪ್ಲಾನ್! ನ್ಯೂಮೆಕ್ಸಿಕೋದ ಫಾರ್ಮ್‌ ಹೌಸ್‌ ಬಳಸಲು ಯೋಚನೆ | Epstein Planned To Create A Super Race Using His Dna

ತನ್ನ ಡಿಎನ್‌ಎ ಬಳಸಿ ಸೂಪರ್‌ ರೇಸ್ ಸೃಷ್ಟಿಗೆ ಎಪ್ಸ್ಟೀನ್ ಪ್ಲಾನ್! ನ್ಯೂಮೆಕ್ಸಿಕೋದ ಫಾರ್ಮ್‌ ಹೌಸ್‌ ಬಳಸಲು ಯೋಚನೆ | Epstein Planned To Create A Super Race Using His Dna



ತನ್ನ ಡಿಎನ್‌ಎ ಬಳಸಿ ಸೂಪರ್‌ ರೇಸ್ ಸೃಷ್ಟಿಗೆ ಎಪ್ಸ್ಟೀನ್ ಪ್ಲಾನ್! ನ್ಯೂಮೆಕ್ಸಿಕೋದ ಫಾರ್ಮ್‌ ಹೌಸ್‌ ಬಳಸಲು ಯೋಚನೆ | Epstein Planned To Create A Super Race Using His Dna

ಲೈಂಗಿಕ ಶೋಷಣೆಗ ಬಳಸುವ ಉದ್ದೇಶದಿಂದ ಅಪ್ರಾಪ್ತ ಮಕ್ಕಳ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೆರಿಕದ ಜೆಫ್ರೀ ಎಫ್‌ಸ್ಟೀನ್‌ ತನ್ನ ಡಿಎನ್‌ಎ ಬಳಸಿಕೊಂಡು ಸೂಪರ್‌ ರೇಸ್‌ (ಶ್ರೇಷ್ಠ ಮಾನವ ಕುಲ) ಸೃಷ್ಟಿಸುವ ಭಯಾನಕ ಯೋಜನೆಯೊಂದನ್ನು ಹಾಕಿಕೊಂಡಿದ್ದ!

ವಾಷಿಂಗ್ಟನ್: ಲೈಂಗಿಕ ಶೋಷಣೆಗ ಬಳಸುವ ಉದ್ದೇಶದಿಂದ ಅಪ್ರಾಪ್ತ ಮಕ್ಕಳ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೆರಿಕದ ಜೆಫ್ರೀ ಎಫ್‌ಸ್ಟೀನ್‌ ತನ್ನ ಡಿಎನ್‌ಎ ಬಳಸಿಕೊಂಡು ಸೂಪರ್‌ ರೇಸ್‌ (ಶ್ರೇಷ್ಠ ಮಾನವ ಕುಲ) ಸೃಷ್ಟಿಸುವ ಭಯಾನಕ ಯೋಜನೆಯೊಂದನ್ನು ಹಾಕಿಕೊಂಡಿದ್ದ!

ಸಾಯುವ ಮುನ್ನ ತನ್ನ ಸಂಪತ್ತು, ಜಮೀನು ಮತ್ತು ಸಾಮಾಜಿಕ ನೆಟ್‌ವರ್ಕ್‌ ಬಳಸಿಕೊಂಡು ಶ್ರೇಷ್ಠ ಜನಾಂಗದ ಸೃಷ್ಟಿಯ ಭಯಾನಕ ರಹಸ್ಯ ಯೋಜನೆ ಕುರಿತು ಕೆಲ ವಿಜ್ಞಾನಿಗಳು ಹಾಗೂ ಉದ್ಯಮಿಗಳ ಮುಂದೆಯೂ ಆತ ಹೇಳಿಕೊಂಡಿದ್ದ ಎನ್ನಲಾಗಿದೆ.

ನ್ಯೂ ಮೆಕ್ಸಿಕೋದಲ್ಲಿರುವ ತನ್ನ ಫಾರ್ಮ್‌ ಹೌಸ್‌ನಲ್ಲಿ ತನ್ನ ವೀರ್ಯ ಬಳಸಿ ಗರ್ಭಿಣಿಯಾಗುವ ಮಹಿಳೆಯರನ್ನು ಇರಿಸುವ ಯೋಜನೆಯೂ ಆತನಿಗಿತ್ತು. ಇದನ್ನು ಕೆಲ ವಿಜ್ಞಾನಿಗಳು ಹಾಗೂ ಇತರರ ಜತೆಗೆ ಹೇಳಿಕೊಂಡಿದ್ದ.

20 ಮಹಿಳೆಯರನ್ನು ಗರ್ಭಿಣಿ ಮಾಡಲು ಎಪ್ಸ್ಟೀನ್ ಬಯಸಿದ್ದ!

ನಾಸಾ ವಿಜ್ಞಾನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರ ಪ್ರಕಾರ, ಎಪ್‌ಸ್ಟೀನ್‌ 20 ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಲು ಬಯಸಿದ್ದ. ರೆಪೋಸಿಟರಿ ಫಾರ್‌ ಜರ್ಮಿನಲ್‌ ಚಾಯ್ಸ್‌ ವೀರ್ಯ ಬ್ಯಾಂಕ್‌ನಿಂದ ಆತ ಪ್ರಭಾವಿತನಾಗಿದ್ದ. ಈ ಬ್ಯಾಂಕ್‌ ಸದ್ಯ ತನ್ನ ಕಾರ್ಯ ಸ್ಥಗಿತಗೊಳಿಸಿದ್ದು, ನೊಬೆಲ್‌ ಪ್ರಶಸ್ತಿ ವಿಜೇತರ ವೀರ್ಯ ದಾನಕ್ಕಾಗಿಯೇ ಸ್ಥಾಪಿಸಲಾಗಿತ್ತು. ಈ ಮೂಲಕ ಮಾನವ ಕುಲವನ್ನು ಶ್ರೇಷ್ಠಗೊಳಿಸುವ ಉದ್ದೇಶ ಈ ಬ್ಯಾಂಕ್‌ಗಿತ್ತು.

ಎಪ್‌ಸ್ಟೀನ್‌ಗೆ ಅತಿಮಾನವವಾದದ ಮೇಲೆ ತೀವ್ರ ಕುತೂಹಲ ಬೆಳೆಸಿಕೊಂಡಿದ್ದ. ತಂತ್ರಜ್ಞಾನ, ಜೆನೆಟಿಕ್‌ ಎಂಜಿನಿಯರಿಂಗ್‌ ಮತ್ತು ಎಐ ಬಳಸಿಕೊಂಡು ಅತಿಮಾನವರ ಸೃಷ್ಟಿ ಈ ಸಿದ್ಧಾಂತದ ಹಿಂದಿನ ನಂಬಿಕೆ. 20ನೇ ಶತಮಾನದ ಆರಂಭದಲ್ಲಿ ಚರ್ಚೆಯಲ್ಲಿದ್ದ ಸುಜನನಶಾಸ್ತ್ರ (ಅತ್ಯುತ್ತಮ ಮನುಷ್ಯನ ತಳಿ ಸೃಷ್ಟಿ)ಕ್ಕೆ ಹತ್ತಿರವಾದ ಪರಿಕಲ್ಪನೆ ಇದು ಎಂದು ಟೀಕಾಕಾರು ಹೇಳಿಕೊಳ್ಳುತ್ತಾರೆ. ಈ ಮೂಲಕ ನಿರ್ದಿಷ್ಟ ಗುಣಲಕ್ಷಣಗಳಿರುವ ಜನರನ್ನು ಸೃಷ್ಟಿಸಿ ಮಾನವ ಜನಾಂಗವನ್ನು ಸುಧಾರಿಸುವುದು ಈ ಸಿದ್ಧಾಂತದ ಧ್ಯೇಯ. ಇದೇ ವಾದವನ್ನು ನಂತರ ನಾಝಿಗಳೂ ಅಳವಡಿಸಿಕೊಂಡಿದ್ದರು.

ಉನ್ನತ ವಿಜ್ಞಾನಿಗಳ ಸೆಳೆಯಲೆತ್ನ:

ತನ್ನ ಕಾರ್ಯಸಾಧನೆಗಾಗಿ ಆತನ ಉನ್ನತ ವಿಜ್ಞಾನಿಗಳಿಗೆ ಆತ್ಮೀಯನಾಗಲೂ ಬಯಸಿದ್ದ. ಅವರಿಗೆ ಹಣಕಾಸು ನೆರವು, ಕಾರ್ಯಕ್ರಮಗಳ ಆಯೋಜನೆಯಂಥ ನೆರವು ನೀಡುತ್ತಿದ್ದ. ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿಗಳಾದ ಮುರ್ರೆ ಜೆಲ್‌-ಮನ್‌, ಸ್ಟಿಫನ್‌ ಹಾಕಿಂಗ್‌, ಸ್ಟಿಫನ್‌ ಜಯ್‌ ಗೌಲ್ಡ್‌, ಜಾರ್ಜ್‌ ಎಂ. ಚರ್ಚ್‌ ರಂಥ ಪ್ರಮುಖ ಪ್ರತಿಷ್ಠಿತ ಹಾಗೂ ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿಗಳನ್ನು ಆತ ಆಕರ್ಷಿಸಿದ್ದ. ಆದರೆ, ಈತನ ಯೋಜನೆಯನ್ನು ಅಸಾಧ್ಯವಾದ ಮತ್ತು ಆತಂಕಕಾರಿ ಯೋಜನೆ ಎಂದು ಬಹುತೇಕರು ಭಾವಿಸಿದ್ದರು.



Source link

Leave a Reply

Your email address will not be published. Required fields are marked *