Gundlupet POCSO case ಹೊಟ್ಟೆ ನೋವೆಂದ ಬಾಲಕಿ: ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ! | Pocso Case In Gundlupet Minor Girl Complaining Of Stomach Pain Gives Birth In Ambulance Rav

ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಗ್ರಾಮದಲ್ಲಿ, ಹೊಟ್ಟೆನೋವಿನಿಂದ ಬಳಲುತ್ತಿದ್ದ 17 ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಗೆ ತನ್ನ ಸಂಬಂಧಿ ಸುರೇಶ್ ಕಾರಣ ಎಂದು ಬಾಲಕಿ ಹೇಳಿಕೆ ಆಧರಿಸಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಗುಂಡ್ಲುಪೇಟೆ (ಮಾ.22): 17 ವರ್ಷದ ಬಾಲಕಿಯೊಬ್ಬಳಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮರಾಜನಗರ ಸಿಮ್ಸ್‌ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ.

ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತೆಯ ಸಂಬಂಧಿಯೂ ಆಗಿರುವ ದೇಶಿಪುರ ಗ್ರಾಮದ ಸುರೇಶ್‌ (46) ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಘಟನೆ:

ದೇಶಿಪುರ ಗ್ರಾಮದ 17 ವರ್ಷದ ಬಾಲಕಿಗೆ 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದಾರೆ. ಬಳಿಕ ಅಲ್ಲಿಂದ ಚಾಮರಾಜನಗರದ ಸಿಮ್ಸ್‌ಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ.

ಇದೇ ವೇಳೆ ಗರ್ಭಿಣಿಯಾಗಲು ಸಂಬಂಧಿಕ ಸುರೇಶ್‌ ಕಾರಣ ಎಂದು ಅಪ್ರಾಪ್ತೆಯು ತನ್ನ ತಂದೆ ಬಳಿ ನಿವೇದಿಸಿಕೊಂಡಿದ್ದಾಳೆ.

ಬಳಿಕ ಅಪ್ರಾಪ್ತೆಯ ತಂದೆ ಬೇಗೂರು ಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದು, ಸುರೇಶ್‌ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಹಸಗೂಲಿ ಗ್ರಾದ ವೃದ್ಧನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೋ ಅಡಿ ಆರೋಪಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Source link

Leave a Reply

Your email address will not be published. Required fields are marked *