Retired DySP death in Davanagere ದಾವಣಗೆರೆ: ನಿವೃತ್ತ ಡಿವೈಎಸ್‌ಪಿ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ | Davangere Retired Dysp Ends In Tragedy After Shooting Himself With Rifle

ದಾವಣಗೆರೆಯ ಕೆಟಿಜೆ ನಗರದಲ್ಲಿ, ನಿವೃತ್ತ ಡಿವೈಎಸ್‌ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014ರಲ್ಲಿ ನಿವೃತ್ತರಾಗಿದ್ದ ಅವರ ಈ ದುರಂತ ಅಂತ್ಯಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆ(ನ.29): ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಆತ್ಮ೧ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆಯೇ, ದಾವಣಗೆರೆಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ.

ಗುಂಡು ಹಾರಿಸಿಕೊಂಡು‌ ನಿವೃತ್ತ ಡಿವೈಎಸ್‌ಪಿ ದುರಂತ ಅಂತ್ಯ:

ನಗರದ ಕೆಟಿಜೆ ನಗರದ ನಿವಾಸಿ ಮತ್ತು ನಿವೃತ್ತ ಡಿವೈಎಸ್‌ಪಿ ಹೆಚ್.ವೈ. ತುರಾಯಿ (70) ಅವರು ತಮ್ಮ ವೈಯಕ್ತಿಕ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. 2014 ರಲ್ಲಿ ಪೊಲೀಸ್ ಸೇವೆಯಿಂದ ನಿವೃತ್ತಿ ಹೊಂದಿದ್ದ ತುರಾಯಿ ಅವರು, ತಮ್ಮದೇ ಮನೆಯಲ್ಲಿ ಈ ದುರಂತಕ್ಕೆ ಶರಣಾಗಿದ್ದಾರೆ.

ಮಗ ಮೇಲ್ಮಹಡಿಯಲ್ಲಿದ್ದಾಗ ನಡೆದ ದುರಂತ:

ಘಟನೆ ನಡೆದ ಸಂದರ್ಭದಲ್ಲಿ ಮೃತ ಅಧಿಕಾರಿಯ ಮಗ ಮನೆಯ ಮೇಲ್ಮಹಡಿಯಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ. ಆದರೆ, ತುರಾಯಿ ಅವರ ಈ ದಿಢೀರ್ ಆತ್ಮ೧ಹತ್ಯೆಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕುಟುಂಬ ಅಥವಾ ಇಲಾಖಾ ಒತ್ತಡದಂತಹ ಯಾವುದೇ ಅಂಶಗಳು ಸಾವಿಗೆ ಕಾರಣವೇ ಎಂಬುದರ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ರೈಫಲ್ ಬಳಸಿ ಆತ್ಮ೧ಹತ್ಯೆ ಮಾಡಿಕೊಂಡಿರುವುದು ಪೊಲೀಸ್ ವಲಯದಲ್ಲಿ ತೀವ್ರ ಆಘಾತ ಮತ್ತು ಚರ್ಚೆಗೆ ಕಾರಣವಾಗಿದೆ.

Source link

Leave a Reply

Your email address will not be published. Required fields are marked *