ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ? | Bigg Boss Kannada Season 12 Winner Gilli Nata Reaction On Sarkari Shale H8 Movie Complaint

ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ? | Bigg Boss Kannada Season 12 Winner Gilli Nata Reaction On Sarkari Shale H8 Movie Complaint



ಬ್ಯಾಕ್‌ಸ್ಟೇಜ್‌ನಲ್ಲಿ ಸತ್ಯ ಬಾಯಿಬಿಟ್ಟ ಗಿಲ್ಲಿ ನಟ; Bigg Boss ಟ್ರೋಫಿ ಗೆದ್ಮೇಲೆ ಹೀಗಾ? | Bigg Boss Kannada Season 12 Winner Gilli Nata Reaction On Sarkari Shale H8 Movie Complaint

Bigg Boss Kannada Season 12 ವಿಜೇತ ಗಿಲ್ಲಿ ನಟನ ಬಗ್ಗೆ ಫಿಲ್ಮ್‌ ಛೇಂಬರ್‌ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗ ಗಿಲ್ಲಿ ನಟ ಅವರು ಮಾತನಾಡಿದ್ದಾರೆ. ಸೂಪರ್‌ ಹಿಟ್‌ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. 

ಗಿಲ್ಲಿ ನಟ ಬಿಗ್‌ ಬಾಸ್‌ ಶೋನಿಂದ ಹೊರಗಡೆ ಬಂದಬಳಿಕವೂ ಕೂಡ ನಮ್ಮ ಸಿನಿಮಾದ ಬಗ್ಗೆ ಪ್ರಚಾರ ಮಾಡಿಲ್ಲ, ನಮ್ಮ ಸಿನಿಮಾ ಬಗ್ಗೆ ಪೋಸ್ಟ್‌ ಹಂಚಿಕೊಂಡಿಲ್ಲ ಎಂದು ಸರ್ಕಾರಿ ಶಾಲೆ H8 ಸಿನಿಮಾ ತಂಡವು ಆರೋಪ ಮಾಡಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಲಾಗಿತ್ತು. ಈಗ ಗಿಲ್ಲಿ ನಟ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಸೂಪರ್‌ ಹಿಟ್‌ ಸಿನಿಮಾ

ಸೂಪರ್‌ ಹಿಟ್‌ ಎನ್ನುವ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ನಟ ಅವರು ಭಾಗವಹಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಆಗ ಗಿಲ್ಲಿ ನಟ ಅವರು ಬಂದು ಮಾತನಾಡಿದ್ದಾರೆ.

ಗಿಲ್ಲಿ ನಟ ಹೇಳಿದ್ದೇನು?

ಸರ್ಕಾರಿ ಶಾಲೆ H8 ಸಿನಿಮಾ ತಂಡವು ಫಿಲ್ಮ್ ಚೇಬರ್‌ಗೆ ದೂರು ಕೊಟ್ಟಿರುವ ಬಗ್ಗೆ ಮಾತನಾಡಿದ ಗಿಲ್ಲಿ ನಟ ಅವರು, “ನಾನು ಫಿಲ್ಮ್ ಚೇಬರ್‌ಗೆ ಮಾಹಿತಿ ಕೊಟ್ಟಿದ್ದೇನೆ. ಎರಡೂವರೆ ವರ್ಷದ ಹಿಂದೆ ಆ ಸಿನಿಮಾವನ್ನು ಮಾಡಿದ್ದೆನು. ನಮಗೆ ಕೆಲಸದ ಒತ್ತಡ ಇತ್ತು, ನಾನು ಮತ್ತೆ ಸಿನಿಮಾ ತಂಡವನ್ನು ಸಂಪರ್ಕ ಮಾಡಿಲ್ಲ. ಫಿಲ್ಮ್ ಚೇಬರ್‌ಗೆ ನಾನು ಕ್ಲಾರಿಟಿ ಕೊಟ್ಟಿದ್ದೇನೆ” ಎಂದು ಹೇಳಿದ್ದಾರೆ.

ಸಾಧುಕೋಕಿಲ ಬಳಿ ವೇದಿಕೆ ಕೆಳಗಡೆ ಮಾತನಾಡಿದ್ದೇನು?

“ನಾನು ಆ ಸಿನಿಮಾದಲ್ಲಿ ಎರಡು ಸೀನ್‌ನಲ್ಲಿ ನಟಿಸಿದ್ದೇನೆ, ಸಿನಿಮಾ ಪ್ರಚಾರಕ್ಕೆ ಬಂದಿಲ್ಲ ಎಂದು ಅವರು ಫಿಲ್ಮ್‌ ಚೇಂಬರ್‌ಗರ ದೂರು ನೀಡಿದ್ದಾರೆ” ಎಂದು ಸಾಧು ಕೋಕಿಲ ಬಳಿ ಗಿಲ್ಲಿ ನಟ ಅವರು ಹೇಳಿಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಒನ್‌ ಮ್ಯಾನ್‌ ಶೋ ಎಂಬಂತೆ ಗಿಲ್ಲಿ ನಟ ಅವರು ಆಟ ಆಡಿದ್ದರು. ಪ್ರತಿಸ್ಪರ್ಧಿಗಳ ಮಾತುಗಳಿಗೆ ಕೌಂಟರ್‌ ಕೊಡುತ್ತ, ಅವರ ಆಟವನ್ನು ವಿಮರ್ಶೆ ಮಾಡುತ್ತ, ಅಷ್ಟೇ ಅಲ್ಲದೆ ಕಾಮಿಡಿ ಮಾಡುತ್ತ, ಹಾಡು ಹಾಡಿ, ಡ್ಯಾನ್ಸ್‌ ಮಾಡಿ ಮನರಂಜನೆ ನೀಡಿದ್ದರು.

ಮುಂದೆ ಏನು ಮಾಡುತ್ತಾರೆ?

ಗಿಲ್ಲಿ ನಟ ಅವರ ಆಟ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಹಿಂದೆ ಬಿಗ್‌ ಬಾಸ್‌ ಶೋನಲ್ಲಿ ಎಲ್ಲಿಯೂ ಇಲ್ಲದಷ್ಟು ಅವರಿಗೆ ಅಭಿಮಾನಿಗಳು ಸೃಷ್ಟಿಯಾಗಿದದಾರೆ. ಇಷ್ಟು ಕ್ರೇಜ್‌ ಈ ಬಾರಿ ಮಾತ್ರ ಇರೋದು. ಅಂದಹಾಗೆ ಮುಂದೆ ಗಿಲ್ಲಿ ನಟ ಅವರು ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *