Headlines

Rishab Shetty ಕಾಂತಾರ 1 ಹೊಗಳಿದ ಯಶ್‌, ಸಂದೀಪ್‌ ರೆಡ್ಡಿ ವಂಗಾ: ಕೃತಜ್ಞತೆ ಸಲ್ಲಿಸಿದ ರಿಷಬ್‌ ಶೆಟ್ಟಿ | Yash Sandeep Reddy Vanga Praise Kantara 1 Rishab Shetty Gratitude Gvd

ರಿಷಬ್‌ ಶೆಟ್ಟಿಯ ‘ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಯಾವ ಸಿನಿಮಾವನ್ನೂ ಸುಲಭಕ್ಕೆ ಮೆಚ್ಚಿಕೊಂಡು ಟ್ವೀಟ್‌ ಮಾಡದ ಯಶ್‌ ಕೂಡ ಮೆಚ್ಚಿದ್ದಾರೆ. ಅನಿಮಲ್‌ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಹೊಗಳಿದ್ದಾರೆ.

‘ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಯಾವ ಸಿನಿಮಾವನ್ನೂ ಸುಲಭಕ್ಕೆ ಮೆಚ್ಚಿಕೊಂಡು ಟ್ವೀಟ್‌ ಮಾಡದ ಯಶ್‌ ಕೂಡ ಮೆಚ್ಚಿದ್ದಾರೆ. ಅನಿಮಲ್‌ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಹೊಗಳಿದ್ದಾರೆ.

ಯಶ್‌, ‘ಕಾಂತಾರ ಚಾಪ್ಟರ್‌ 1 ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಹೊಸ ಬೆಂಚ್‌ ಮಾರ್ಕ್‌. ರಿಷಬ್‌ ಶೆಟ್ಟಿ ಅವರೇ, ನಿಮ್ಮ ಖಚಿತ ದೃಷ್ಟಿಕೋನ, ಅಪಾರ ತಾಳ್ಮೆ, ಸಹಿಷ್ಣುತೆ ಮತ್ತು ಪರಿಶುದ್ಧ ಭಕ್ತಿ ಪ್ರತೀ ಫ್ರೇಮ್‌ನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ರುಕ್ಮಿಣಿ ಮತ್ತು ಗುಲ್ಶನ್‌ ದೇವಯ್ಯ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಚಿತ್ರ ರಾಕೇಶ್ ಪೂಜಾರಿ ಅವರ ಪ್ರತಿಭೆಯನ್ನು ದೊಡ್ಡ ಮಟ್ಟದಲ್ಲಿ ಬೆಳಕಿಗೆ ತರುವ ಮೂಲಕ ಅರ್ಥಪೂರ್ಣ ಗೌರವ ಸಲ್ಲಿಸಿದೆ’ ಎಂದಿದ್ದಾರೆ.

ಸಂದೀಪ್‌ ರೆಡ್ಡಿ ವಂಗಾ, ‘ಕಾಂತಾರ ಚಾಪ್ಟರ್‌ 1 ಮಾಸ್ಟರ್‌ಪೀಸ್‌. ಭಾರತೀಯ ಚಿತ್ರರಂಗ ಹಿಂದೆಂದೂ ಈ ಥರದ ಸಿನಿಮಾ ನೋಡಿರಲಿಲ್ಲ. ಅದ್ಭುತ ಸಿನಿಮ್ಯಾಟಿಕ್‌ ಅನುಭವ ನೀಡಿದ ನೈಜ ದೈವಿಕ ಸಿನಿಮಾ. ರಿಷಬ್‌ ಶೆಟ್ಟಿ ಅವರ ಒನ್‌ ಮ್ಯಾನ್‌ ಶೋ. ಪ್ರತಿಯೊಂದನ್ನೂ ಅದ್ಭುತವಾಗಿ ನಿಭಾಯಿಸಿದ ಅವರಿಗೆ ನಮಸ್ಕಾರ. ಅಜನೀಶ್‌ ಲೋಕನಾಥ್‌ ಹಿನ್ನೆಲೆ ಸಂಗೀತ ಅದ್ಭುತ’ ಎಂದಿದ್ದಾರೆ.

ಭಾರತೀಯ ಚಿತ್ರರಂಗದ ಗಣ್ಯರಾದ ನಿವಿನ್‌ ಪೌಲಿ, ಲಕ್ಷ್ಮೀ ಮಂಚು, ಜೋಗಿ ಪ್ರೇಮ್‌, ಉಪೇಂದ್ರ, ರಾಧಿಕಾ ಪಂಡಿತ್‌ ಸೇರಿದಂತೆ ಹಲವರು ‘ಕಾಂತಾರ 1’ ಸಿನಿಮಾ ನೋಡಿ ಚಿತ್ರತಂಡವನ್ನು ಅಭಿನಂದಿಸಿದ್ದಾರೆ.

ಕೃತಜ್ಞತೆ ಸಲ್ಲಿಸಿದ ರಿಷಬ್‌ ಶೆಟ್ಟಿ

ಯಶ್‌ ಪ್ರಶಂಸೆಗೆ ಕೃತಜ್ಞತೆ ಸಲ್ಲಿಸಿದ ರಿಷಬ್‌ ಶೆಟ್ಟಿ, ‘ನಿಮ್ಮ ಸಿನಿಮಾ ಜರ್ನಿ ಮತ್ತು ವಿಷನ್‌ ಎಂದೆಂದೂ ನಮಗೆಲ್ಲ ಸ್ಫೂರ್ತಿ. ನಿಮ್ಮ ಸಾಧನೆಯನ್ನು ಕಂಡು ನಾವೆಲ್ಲ ಹೆಮ್ಮೆ ಪಡುತ್ತೇವೆ. ಯಾವತ್ತೂ ನನ್ನ ಜೊತೆ ನಿಂತು ನನ್ನ ಕೆಲಸವನ್ನು ಬೆಂಬಲಿಸುವ ನಿಮಗೆ ಕೃತಜ್ಞತೆ’ ಎಂದಿದ್ದಾರೆ.

Source link

Leave a Reply

Your email address will not be published. Required fields are marked *