PM Modi ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್ | Sanjay Raut Predict Political Earthquake Shake Pm Modi Govt After December 19th

PM Modi ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್ | Sanjay Raut Predict Political Earthquake Shake Pm Modi Govt After December 19th



PM Modi ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್ | Sanjay Raut Predict Political Earthquake Shake Pm Modi Govt After December 19th

ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್, ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ರಾವತ್ ನೀಡಿದ ಕಾರಣವೇನು ಗೊತ್ತಾ?

ಮುಂಬೈ (ಡಿ.17) ಮೂರನೇ ಅವಧಿಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವು ಹೊಸ ಯೋಜನೆಗಳೊಂದಿಗೆ ಭರ್ಜರಿಯಾಗಿ ಸಾಗುತ್ತಿದೆ. ದೇಶ ವಿದೇಶದಲ್ಲೂ ಮೋದಿ ಸರ್ಕಾರದ ಮನ್ನಣೆ, ಜನಪ್ರಿಯತೆ ಹೆಚ್ಚಿಸಿದೆ. ಇಷ್ಟೇ ಅಲ್ಲ ಮೂರನೇ ಅವಧಿ ಮೋದಿ ಸರ್ಕಾರದ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮೈಲುಗೈ ಸಾಧಿಸಿದೆ. ಇದೀಗ ಉದ್ಧವಾ ಠಾಕ್ರೆ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಡಿಸೆಂಬರ್ 19ಕ್ಕೆ ರಾಜಕೀಯ ಭೂಕಂಪ ಸಂಭವಿಸಲಿದೆ. ಇದರ ಪರಿಣಾಮ ಮೋದಿ ಸರ್ಕಾರ ಪತನವಾಗಲಿದೆ ಎಂದು ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ.

ಪೃಥ್ವಿರಾಜ್ ಚವ್ಹಾಣ್ ಬೆನ್ನಲ್ಲೇ ಸಂಜಯ್ ರಾವತ್ ಸ್ಫೋಟಕ ಹೇಳಿಕೆ

ಡೆಲ್ಲಿ ಪೊಲಿಟಿಕಲ್ ಸರ್ಕಲ್ ಜೊತೆಗಿನ ಮಾತುಕತೆಯಲ್ಲಿ ಸಂಜಯ್ ರಾವತ್ ಬಿಜೆಪಿ ಸರ್ಕಾರ ಪತನದ ಕುರಿತು ಭವಿಷ್ಯ ನುಡಿದಿದ್ದಾರೆ. ರಾಜಕೀಯ ಭೂಕಂಪದಲ್ಲಿ ಮೋದಿ ಸರ್ಕಾರ ಪನತವಾಗಲಿದೆ. ಡಿಸೆಂಬರ್ 19 ಅತ್ಯಂತ ಪ್ರಮುಖ ದಿನ ಎಂದಿದ್ದಾರೆ. ಅಮೆರಿಕದ ಮಧ್ಯಪ್ರವೇಶವಾಗಿದೆ. ಮಹತ್ವದ ಬದಲಾವಣೆಗಳು ನಡೆಯುತ್ತಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

ನಾಯಕರಿಗೆ ದೆಹಲಿಯಲ್ಲೇ ಇರಲು ಸೂಚನೆ

ಬಿಜೆಪಿ ಈಗಾಗಲೇ ತನ್ನ ನಾಯಕರಿಗೆ ಮಹತ್ವದ ಸೂಚನೆ ನೀಡಿದೆ. ಪ್ರಮುಖ ನಾಯಕರು ದೆಹಲಿಯಲ್ಲೇ ಇರಲು ಸೂಚನೆ ನೀಡಿದ್ದಾರೆ. ಯಾರೂ ಕೂಡ ದೆಹಲಿ ಬಿಟ್ಟು ತೆರಳದಂತೆ ಸೂಚಿಸಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಸೂಚನೆ ಬಿಜಿಪಿಯಲ್ಲೇ ಕೆಲ ಬದಲಾವಣೆಗಳ ಸೂಚನೆ ನೀಡುತ್ತಿದೆ ಎಂದು ಸಂಜಯ್ ರಾವತ್ ಊಹಿಸಿದ್ದಾರೆ.

ಬಾಂಬ್ ಸಿಡಿಸಿದ್ದ ಪೃಥ್ವಿರಾಜ್ ಚೌವ್ಹಾನ್

ಆಪರೇಶನ್ ಸಿಂದೂರ್ ಕುರಿತು ವಿವಾದಿತ ಹೇಳಿಕೆ ನೀಡಿ ಭಾರೀ ಟೀಕೆಗೆ ಗುರಿಯಾಗಿರುವ ಮಾಹಾರಷ್ಟ್ರ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ್ ಚವ್ಹಾಣ್ ಬಿಜೆಪಿ ಬದಲಾವಣೆ ಈ ಕುರಿತು ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 19ಕ್ಕೆ ಮಹತ್ವದ ರಾಜಕೀಯ ಕ್ರಾಂತಿಯಾಗಲಿದೆ. ಹೊಸ ಪ್ರಧಾನಿ ಬರಲಿದ್ದಾರೆ. ಮೋದಿ ಪ್ರಧಾನಿ ಅವಧಿ ಅಂತ್ಯವಾಗಲಿದೆ. ಮಹಾರಾಷ್ಟ್ರದ ಪ್ರಮುಖ ನಾಯಕ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಪೃಥ್ವಿರಾಜ್ ಚವ್ಹಾಣ್ ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಇದೀಗ ಸಂಜಯ್ ರಾವತ್ ಕೂಡ ಡಿಸೆಂಬರ್ 19ರಂದು ರಾಜಕೀಯ ಭೂಕಂಪ ಎಂದಿದ್ದಾರೆ.



Source link

Leave a Reply

Your email address will not be published. Required fields are marked *