Indian wrestlers visa scam: ಭಾರತದ ಕುಸ್ತಿಪಟುಗಳೆಂದು ಸುಳ್ಳು ಹೇಳಿ ಹಂಗೇರಿ ವೀಸಾಗೆ 11 ಅರ್ಜಿ! | 11 Fake Wrestlers Caught Seeking Hungary Visas Major Fraud Uncovered Rav

ಭಾರತೀಯ ಕುಸ್ತಿಪಟುಗಳೆಂದು ನಂಬಿಸಿ 11 ಮಂದಿ, ಭಾರತ ಕುಸ್ತಿ ಫೆಡರೇಷನ್‌ನ ನಕಲಿ ಲೆಟರ್ ಹೆಡ್ ಬಳಸಿ ಹಂಗೇರಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮಾನಗೊಂಡ ಹಂಗೇರಿ ರಾಯಭಾರಿ ಕಚೇರಿ ಸತ್ಯಾಸತ್ಯತೆ ಪರಿಶೀಲಿಸಿದಾಗ ಈ ವಂಚನೆ ಬಯಲಾಗಿದ್ದು, ಇದರ ಹಿಂದೆ ಮಾನವ ಕಳ್ಳಸಾಗಣೆ ಜಾಲದ ಶಂಕೆ ವ್ಯಕ್ತವಾಗಿದೆ.

ನವದೆಹಲಿ (ಮಾ.13): ಭಾರತೀಯ ಕುಸ್ತಿಪಟುಗಳೆಂದು ನಂಬಿಸಿ 11 ಮಂದಿ ನಕಲಿ ದಾಖಲೆಗಳೊಂದಿಗೆ ಹಂಗೇರಿ ವೀಸಾಗೆ ಅರ್ಜಿ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವಂಚಕ ಜಾಲದ ಹಿಂದೆ ಮಾನವ ಕಳ್ಳಸಾಗಣೆಯ ಶಂಕೆ ವ್ಯಕ್ತವಾಗಿದೆ.

ಮಾ.15ರಿಂದ 22ರವರೆಗೆ ಬುಡಾಪೆಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಭಾಗವಹಿಸುವುದಕ್ಕೆ ಭಾರತ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ನ ಲೆಟರ್ ಹೆಡ್‌ ಬಳಸಿ, 11 ಮಂದಿಗೆ ವೀಸಾ ನೀಡುವಂತೆ ಹಂಗೇರಿಯಾ ರಾಯಭಾರಿ ಕಚೇರಿಗೆಗೆ ಶಿಪಾರಸು ಪತ್ರ ನೀಡಿ ವೀಸಾ ನೀಡುವಂತೆ ಕೋರಲಾಗಿದೆ.

ಇದನ್ನೂ ಓದಿ: ವಿಶ್ವ ಕುಸ್ತಿಯಲ್ಲಿ ಆತಂಕ; ಭಾರತದ ಮೇಲೆ ನಿಷೇಧ?

ಆದರೆ ಅರ್ಜಿಯಲ್ಲಿದ್ದ ಕೆಲ ತಪ್ಪುಗಳಿಂದಾಗಿ ಅನುಮಾನಗೊಂಡು ದೂತವಾಸ ಕಚೇರಿಯು ಡಬ್ಲ್ಯುಎಫ್‌ಐಗೆ ಸತ್ಯಾಸತ್ಯತೆ ಪರಿಶೀಲನೆ ಕೋರಿ ಇಮೇಲ್‌ ಕಳುಹಿಸಿತ್ತು. ಈ ವೇಳೆ ಫೆಡರೇಷನ್‌ ಅಧ್ಯಕ್ಷ ಸಂಜಯ್‌ ಕುಮಾರ್‌ ಸಿಂಗ್‌, ಅಂತಹ ಯಾವುದೇ ಪತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಬಗ್ಗೆ ಸಂಜಯ್‌ ಪ್ರತಿಕ್ರಿಯಿಸಿದ್ದು, ‘ಇದು ಮಾನವ ಕಳ್ಳಸಾಗಣೆಗೆ ಸಂಬಂಧಪಟ್ಟಿರಬಹುದು. ಫೆಡರೇಷನ್‌ ಹೆಸರಿನಲ್ಲಿ ನಕಲಿ ದಾಖಲೆ ಬಳಸಿಕೊಂಡು ಕ್ರೀಡಾಪಟುಗಳೆಂದು ನಟಿಸಿ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ್ದಾರೆ ಎನ್ನುವ ಸಂಶಯವಿದೆ’ ಎಂದಿದ್ದಾರೆ.

Source link

Leave a Reply

Your email address will not be published. Required fields are marked *