ಪೀಕೆ

ಇದೊಂದು ಆ್ಯಕ್ಷನ್ ಸಿನಿಮಾ. ಅಲ್ಲಲ್ಲಿ ಪ್ರೇಕ್ಷಕನಿಗೆ ಸುಧಾರಿಸಿಕೊಳ್ಳಲು ಕೊಂಚ ವಿರಾಮ ಬಿಟ್ಟರೆ ಆರಂಭದಿಂದ ಕೊನೆಯವರೆಗೂ ಕದನವೇ. ಯಾರು ಯಾರಿಗೆ ಯಾಕೆ ಹೊಡೆಯುತ್ತಿದ್ದಾರೆ ಅಂತ ಯೋಚಿಸಲೂ ಪುರುಸೊತ್ತಿಲ್ಲದಂತೆ ಹೊಡೆತ ಬೀಳುತ್ತಿರುತ್ತದೆ, ಗನ್ ಘರ್ಜಿಸುತ್ತಿರುತ್ತದೆ. ಇನ್ನೊಂದು ಬಗೆಯಲ್ಲಿ ನೋಡಿದರೆ ಇದು ಶೂನ್ಯದಿಂದ ಶ್ರೀಮಂತನಾಗಿ ಬೆಳೆದ ವಿಜಯ್ ಆದಿತ್ಯ ರಾಯ್ ಸಾಹಸಯಾತ್ರೆ.

ಅಧಿಕಾರಶಾಹಿ ವ್ಯವಸ್ಥೆ, ಕಪ್ಪು ಹಣ, ನೀಚತನಗಳೇ ರಾರಾಜಿಸುವ ಜಗತ್ತಿನಲ್ಲಿ ಆ ಲೋಕದ ಮ್ಯಾನರಿಸಂ ಇಟ್ಟುಕೊಂಡೇ ಮಾನವೀಯತೆಯನ್ನೂ ಎದೆಯೊಳಗೆ ಬಚ್ಚಿಟ್ಟುಕೊಂಡ ನಾಯಕ. ಆತ ತನ್ನ ಜಾಣ್ಮೆ, ಕಸುವು, ಸಾಹಸಗಳಿಂದ ಅಲ್ಪ ಅವಧಿಯಲ್ಲೇ ಆತ ಹೇಗೆ ಅಧಿಕಾರಸ್ಥರ ಫೇವರಿಟ್ ಆಗ್ತಾನೆ ಮತ್ತು ಅದೇ ಕಾರಣಕ್ಕೆ ಅವರ ಕೆಂಗಣ್ಣಿಗೂ ತುತ್ತಾಗುತ್ತಾನೆ. ಇದರಿಂದ ಆತ ಪಾರಾಗುವ ಬಗೆ ಸಿನಿಮಾದ ಹೈಲೈಟ್. ಹಿನ್ನೆಲೆಯಲ್ಲಿ ದೇವರ ಮೇಲಿನ ಜನರ ನಂಬಿಕೆಯನ್ನು ಅಧಿಕಾರಶಾಹಿಗಳು ಟ್ರಸ್ಟ್ ಮಾಫಿಯಾ ಮೂಲಕ ಹೇಗೆಲ್ಲ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವ ಅಂಶವೂ ಇದೆ.

ಚಿತ್ರ : ಟೆರರ್‌ನಿರ್ದೇಶನ : ರಂಜನ್ ಶಿವರಾಮ್‌ತಾರಾಗಣ : ಆದಿತ್ಯ, ಶ್ರೀನಗರ ಕಿಟ್ಟಿ, ಧರ್ಮ, ದೇವರಾಜ್, ಶರತ್ ಲೋಹಿತಾಶ್ವ, ಕುಮಾರ್ ಬಂಗಾರಪ್ಪ

ನಾಯಕನ ಮಾತಿಗಿಂತ ಆತನ ಗನ್, ಫೈಟ್ ಮಾತಾಡೋದೇ ಜಾಸ್ತಿ. ಹೀಗಾಗಿ ಆದಿತ್ಯ ಅವರ ನಟನೆಗಿಂತಲೂ ಫೈಟ್ ಚೆನ್ನಾಗಿದೆ ಅನ್ನಬಹುದು. ದೇವರಾಜ್, ಶಶಿಕುಮಾರ್, ಶರತ್ ಲೋಹಿತಾಶ್ವ, ಶ್ರೀನಗರ ಕಿಟ್ಟಿ ಮೊದಲಾದವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನವೀನ್ ಅಕ್ಷಿ ಸಿನಿಮಾಟೋಗ್ರಫಿ, ಶ್ರೀಕಾಂತ್ ಗೌಡ ಎಡಿಟಿಂಗ್ ಹಾಗೂ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಚೆನ್ನಾಗಿದೆ. ಹೊಸತನದ ನಿರೀಕ್ಷೆ ಇಲ್ಲದೇ ಫೈಟಿಂಗ್ ಆಸ್ವಾದಿಸಬಯಸುವವರು ಈ ಸಿನಿಮಾ ನೋಡಬಹುದು.

Source link
ಟೆರರ್ ಸಿನಿಮಾ ವಿಮರ್ಶೆ: ಟ್ರಸ್ಟ್ ಮಾಫಿಯಾ, ಅಧಿಕಾರದ ಆಟ, ಗುದ್ದಾಟದ ಮಧ್ಯೆ ಕಥೆಯ ಹರಿವು