ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni

ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni



ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni

ಅವಳ ಹೆಸರು ಕಮೋಲ್ವಾನ್ ಚಾನಾಗೊ. ಮಿಸ್‌ ಥೈಲ್ಯಾಂಡ್‌ (Miss Thailand) ಬ್ಯೂಟಿ ಪೇಜೆಂಟ್‌ ಸ್ಪರ್ಧಿ. ಸ್ಟೇಜ್‌ನಲ್ಲಿದ್ದಾಗಲೇ ಆಕೆಯ ಹಲ್ಲು ಕಳಚಿ ಬಿದ್ದುಬಿಡೋದ! ಆಮೇಲೇನಾಯ್ತು ನೋಡಿ..

ಇಂಟರ್‌ನೆಟ್‌ನಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿರೋ ಸುದ್ದಿ ಇದು. ಹೇಳಿಕೇಳಿ ಇಪ್ಪತ್ತರ ಆಸುಪಾಸಿನಲ್ಲಿರುವ ಸುಂದರಿ. ವಿಶ್ವಸುಂದರಿ ಆಗಬೇಕು ಅಂತ ಕನಸು ಕಂಡಿರೋ ಹುಡುಗಿ. ಆದ್ರೆ ಆ ಕನಸನ್ನು ನನಸು ಮಾಡೋಕೆ ಹೋಗಿ ಈ ಪಾಟಿ ಸಂಕಷ್ಟದಲ್ಲಿ ಬಿದ್ದಿದ್ದು ಮಾತ್ರ ಬ್ಯೂಟಿ ಪೇಜೆಂಟ್‌ನಲ್ಲಿ ಇದೇ ಮೊದಲು ಅನಿಸುತ್ತೆ.

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯ ಲೈವ್ ರೌಂಡ್ (ನೇರ ಪ್ರಸಾರ) ನಡೆಯುತ್ತಿತ್ತು. ಕಮಲವಾನ್ ಚನಾಗೋ ಎಂಬ ಬ್ಯೂಟಿ ಸೊಗಸಾಗಿ ಅಲಂಕರಿಸಲಾಗಿದ್ದ ಆ ಹೈಟೆಕ್‌ ವೇದಿಕೆಯಲ್ಲಿ ಮಾದಕವಾಗಿ ಬಳಕುತ್ತ ಪೋಸ್ ನೀಡುತ್ತಿದ್ದರು. ನಿಮಗೆಲ್ಲ ಗೊತ್ತಿರಬಹುದು, ಸುಂದರಿಯರು ಬ್ಯೂಟಿ ಪೇಜೆಂಟ್‌ಗಳಲ್ಲಿ ಪೋಸ್‌ ನೀಡಿದರಷ್ಟೇ ಸಾಕಾಗೋದಿಲ್ಲ, ಅವರು ಜಡ್ಜಸ್‌ ಕೇಳುವ ಪ್ರಶ್ನೆಗಳಿಗೆ ಜಾಣತನದ ಉತ್ತರ ನೀಡಬೇಕಾಗುತ್ತದೆ. ಬ್ಯೂಟಿಗಿಂತಲೂ ಅವರು ನೀಡುವ ಈ ಉತ್ತರ ಹೆಚ್ಚು ಮಾರ್ಕ್‌ ತಗೊಳುತ್ತೆ.

ಈ ಪುಣ್ಯಾತ್ತಿಗಿತ್ತಿಯೂ ಪೋಸ್‌ ನೀಡಿ ಮಾತನಾಡಲೆಂದು ಬಾಯಿ ತೆರೆದಿದ್ದಾಳೆ. ಏನ್ಮಾಡ್ತೀರ ಪಾಪ, ಹಲ್ಲುಗಳೇ ಕಳಚಿಕೊಂಡು ಬಿದ್ದಿವೆ. ಅಂದರೆ ಇಪ್ಪತ್ತರ ಆಸುಪಾಸಿನಲ್ಲಿರುವ ಈಕೆ ಹಲ್ ಸೆಟ್‌ ಹಾಕಿಸಿಕೊಂಡಿದ್ದಾಳಾ ಅಂದರೆ ಅಷ್ಟೆಲ್ಲ ಆಗಿಲ್ಲ ಅನ್ನಬಹುದು. ಆಕೆ ಹಲ್ಲಿಗೆ ವೆನಿಯರ್ಸ್ (Veneers) ಅಥವಾ ಕೃತಕ ಹಲ್ಲಿನ ಕವಚವನ್ನು ಅಳವಡಿಸಿಕೊಂಡಿದ್ದಳು. ಅದು ಕೆಳಗೆ ಬಿತ್ತು.

ಪರಿಸ್ಥಿತಿ ಹೇಗಿರಬಹುದು, ಊಹಿಸಿ!

ಬೇರೆ ಯಾರಾದರೂ ಆಗಿದ್ದರೆ ಏನು ಮಾಡುತ್ತಿದ್ದರೋ, ಆದರೆ ಈ ಹುಡುಗಿ ಕಮೋಲ್ವಾನ್ ಚಾನಾಗೊ ಹೀಗಾದಾಗ ಒಂದು ಕ್ಷಣ ತಬ್ಬಿಬ್ಬಾಗಿದ್ದು ಹೌದು. ವಿಶ್ವಾದ್ಯಂತ ಬ್ಯೂಟಿ ಪೇಟೆಂಟ್ ಲೈವ್ ಪ್ರಸಾರವಾಗುವಾಗ ಹಲ್ಲು ಬಿದ್ದ ದೃಶ್ಯ ಕಂಡರೆ ಭೂಮಿ ಬಿರಿದ ಹಾಗಾಗಬಹುದಲ್ವಾ.. ಆದರೆ ಈ ಹುಡುಗಿ ಮರುಕ್ಷಣದಲ್ಲೇ ಚೇತರಿಸಿಕೊಂಡು ಬಿದ್ದಿದ್ದ ವೆನಿಯರ್ಸ್‌ ಅನ್ನು ಎತ್ತಿಕೊಂಡು ಬದಿಗೆ ಹೋದರು, ಬದಿಗೆ ಹೋಗಿ ಹಲ್ಲಿಗೆ ಫಿಟ್‌ ಮಾಡಿಕೊಂಡರು. ಆಮೇಲೆ ಮತ್ತೆ ಭಾರೀ ಆತ್ಮವಿಶ್ವಾಸದಿಂದ ನಗುತ್ತ ಪೋಸ್‌ ನೀಡಿದರು. ನಿರರ್ಗಳವಾಗಿ ಮಾತನಾಡಿದರು.

ಈಕೆಯ ಕಾನ್ಫಿಡೆನ್ಸ್‌ ನೋಡಿ ಅಲ್ಲಿದ್ದವರೆಲ್ಲ ಎದ್ದು ನಿದ್ದು ಕ್ಲಾಪ್‌ ಮಾಡಿದ್ದು ವಿಶೇಷವಾಗಿತ್ತು.

ಇದು ವೈರಲ್‌ ಆದಾಗ ಸಾಕಷ್ಟು ಮಂದಿ ಮೀಡಿಯಾದವರು ಈಕೆಯನ್ನು ಸಂದರ್ಶನ ಮಾಡಿದರು. “ಅದು ಆಕಸ್ಮಿಕವಾಗಿ ಆಗಿರೋದು, ಅದಕ್ಕೆ ಯಾಕೆ ನನ್ನ ಕಾನ್ಫಿಡೆನ್ಸ್‌ ಕಳೆದುಕೊಳ್ಳಲಿ’ ಅಂತ ಆಕೆ ಆತ್ಮವಿಶ್ವಾಸದಿಂದಲೇ ಉತ್ತರಿಸಿದ್ದಾರೆ.

ವೆನಿಯರ್ಸ್ (Veneers) ಎಂದರೇನು?

ಹಲ್ಲುಗಳ ಅಂದವನ್ನು ಹೆಚ್ಚಿಸಲು, ಹಲ್ಲುಗಳ ಬಣ್ಣ ಅಥವಾ ಆಕಾರವನ್ನು ಸರಿಪಡಿಸಲು ಹಲ್ಲಿನ ಮೇಲ್ಭಾಗಕ್ಕೆ ಅಂಟಿಸುವ ತೆಳುವಾದ ಕವಚಗಳನ್ನು ವೆನಿಯರ್ಸ್ ಎನ್ನಲಾಗುತ್ತದೆ. ಸರಿಯಾದ ರೀತಿಯಲ್ಲಿ ಇವುಗಳನ್ನು ಅಂಟಿಸದಿದ್ದಾಗ ಅಥವಾ ಅತಿಯಾದ ಒತ್ತಡ ಬಿದ್ದಾಗ ಇವು ಕಳಚುವ ಸಾಧ್ಯತೆ ಇರುತ್ತದೆ. ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳೆಂದರೆ ಅಲ್ಲಿ ಕೇವಲ ರೂಪವಲ್ಲ, ಬದಲಿಗೆ ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸಕ್ಕೂ ಹೆಚ್ಚಿನ ಬೆಲೆ ಇರುತ್ತದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ ಲಕ್ಷಾಂತರ ಜನರು ಕಮಲವಾನ್ ಅವರ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ. ನಮಗೆ ಕೂದಲು ಸರಿಯಿಲ್ಲದಿದ್ದರೇ ಸಂಭಾಳಿಸುವುದೇ ಕಷ್ಟ, ಅಂಥದ್ದರಲ್ಲಿ ಇವರು ಇಷ್ಟು ದೊಡ್ಡ ಅವಘಡವನ್ನು ಸುಲಭವಾಗಿ ನಿಭಾಯಿಸಿದ್ದಾರೆ. ಇದು ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲೇ ಅತ್ಯಂತ ಐಕಾನಿಕ್ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಕಾಮಿಡಿಯಾಗಿಯೂ ನೋಡಿದ್ದಾರೆ.

Scroll to load tweet…

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ 2026ರ ಫಿನಾಲೆ ಮಾರ್ಚ್ 28 ರಂದು ಬ್ಯಾಂಕಾಕ್ನಲ್ಲಿ ನಡೆಯಲಿದ್ದು, ಇಲ್ಲಿ ಗೆದ್ದವರು ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ‘ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2026’ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಕಮಲವಾನ್ ಅವರ ಈ ಫ್ಲಾವ್ಲೆಸ್ ರಿಕವರಿ (ದೋಷರಹಿತ ಚೇತರಿಕೆ) ಅವರಿಗೆ ಕಿರೀಟ ತಂದುಕೊಡುತ್ತದೆಯೇ ಎಂದು ಕಾದು ನೋಡಬೇಕು!



Source link

Leave a Reply

Your email address will not be published. Required fields are marked *