ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc

ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc



ಸಪ್ತಪದಿಯ ಸಾರ್ಥಕತೆ: ಶತಾಯುಷಿ ದಂಪತಿಯ ಅಪರೂಪದ ಪ್ರೇಮಕಾವ್ಯ- ವಿಡಿಯೋ ನೋಡಿ ನೆಟ್ಟಿಗರ ಕಣ್ಣೀರು | Centenarian Couple Love Story Netizens Tear Up After Seeing The Video Suc

ಇಂದಿನ ಕಾಲದಲ್ಲಿ ಮದುವೆಗಳು ಮುರಿದು ಬೀಳುತ್ತಿರುವಾಗ, ಶತಾಯುಷಿ ದಂಪತಿಯೊಬ್ಬರ ಪ್ರೀತಿಯ ವಿಡಿಯೋ ವೈರಲ್ ಆಗಿದೆ. ಹಾಸಿಗೆ ಹಿಡಿದಿರುವ ಪತ್ನಿಗೆ ಪತಿ ಪ್ರೀತಿಯಿಂದ ಇಡ್ಲಿ ತಿನ್ನಿಸಲು ಯತ್ನಿಸುತ್ತಿರುವ ದೃಶ್ಯವು, ಸಪ್ತಪದಿಯ ನಿಜವಾದ ಅರ್ಥವನ್ನು ಸಾರುತ್ತಾ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಇರುವಷ್ಟು ಪಾವಿತ್ರ್ಯತೆ ಇನ್ನಾವುದಕ್ಕೂ ಇಲ್ಲ. ಆದರೆ ಇಂದು ಎಲ್ಲವೂ ಎಡವಟ್ಟಾಗುತ್ತಿದೆ. ಚಿಕ್ಕ ಪುಟ್ಟ ವಿಷಯಗಳು ದೊಡ್ಡದಾಗಿ ಡಿವೋರ್ಸ್​​ವರೆಗೂ ಹೋಗುತ್ತಿವೆ. ಇದೇ ಕಾರಣಕ್ಕಾಗಿಯೇ ಫ್ಯಾಮಿಲಿ ಕೋರ್ಟ್​ಗಳು ಎಷ್ಟೇ ಹೊಸದಾಗಿ ಸ್ಥಾಪನೆ ಮಾಡಿದರೂ ಸಾಲುತ್ತಿಲ್ಲ. ಹೊಂದಾಣಿಕೆ ಎನ್ನುವುದು ಬಲು ಕಷ್ಟ ಎನ್ನುವಂತೆಯೇ ಆಗಿದೆ. ಆದರೆ ಹಿಂದೂ ಸಂಪ್ರದಾಯದಲ್ಲಿ, ಮದುವೆಯ ಸಂದರ್ಭದಲ್ಲಿ ಮಾಡುವ ಬಹುದೊಡ್ಡ ಸಂಪ್ರದಾಯ ಸಪ್ತಪದಿ ತುಳಿಯುವುದುದ. ವಧು-ವರರು ಅಗ್ನಿಸಾಕ್ಷಿಯಾಗಿ ಏಳು ಹೆಜ್ಜೆಗಳನ್ನು ಇಟ್ಟು, ಏಳು ಪ್ರತಿಜ್ಞೆಗಳನ್ನು ಮಾಡುವ ಅತ್ಯಂತ ಮಹತ್ವದ ವಿಧಿ. ಇದು ದಂಪತಿಯ ನಡುವಿನ ಜನುಮ ಜನುಮಗಳ ಅನುಬಂಧ, ಬದ್ಧತೆ, ಮತ್ತು ಒಟ್ಟಿಗೆ ಬಾಳುವ ಸಂಕೇತವಾಗಿದೆ. ಈ ಏಳು ಹೆಜ್ಜೆಗಳು ಹಸಿವು, ಶಕ್ತಿ, ಸಂಪತ್ತು, ಸಂತೋಷ, ಸಂತಾನ, ಋತುಗಳಿಗೆ ಹೊಂದಾಣಿಕೆ, ಮತ್ತು ಸ್ನೇಹವನ್ನು ಪ್ರತಿನಿಧಿಸುತ್ತವೆ.

ಭಾವುಕರನ್ನಾಗಿಸಿದ ವಿಡಿಯೋ

ಹತ್ತಾರು ಮಂದಿ ಒಟ್ಟಿಗೆ ಇದ್ದರೆ ಕೂಡು ಕುಟುಂಬ ಎನ್ನುವುದು ಕಾಲ ಕ್ರಮೇಣ ಮಕ್ಕಳ ಜೊತೆ ಅಪ್ಪ ಅಮ್ಮ ಇರುವುದು ಕೂಡು ಕುಟುಂಬ ಎನ್ನಿಸಿತು. ಆದರೆ ಈಗ ಗಂಡ ಮತ್ತು ಹೆಂಡತಿ ಒಟ್ಟಿಗೆ ಇದ್ದರೆ ಅದನ್ನು ಕೂಡು ಕುಟುಂಬ ಎನ್ನಲಾಗುತ್ತಿದೆ ಎನ್ನುವ ಮಾತು ಬಹಳ ಜನಜನಿತವಾಗಿಬಿಟ್ಟಿದೆ. ಆದರೆ ಇದರ ನಡುವೆಯೇ, ಇದೀಗ ಶತಾಯಿಷಿ ದಂಪತಿಯ ಪ್ರೀತಿಯ ವಿಡಿಯೋ ಒಂದು ವೈರಲ್​ ಆಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ. ಅಬ್ಬಾ ಹೀಗೂ ಒಂದು ಜೀವನ ಇರತ್ತಾ? ಇವೆಲ್ಲಾ ಮುಂದಿನ ಪೀಳಿಗೆ ನೋಡಲು ಸಾಧ್ಯನಾ? ಪ್ರೀತಿ ಎನ್ನುವುದಕ್ಕೆ ಹೀಗೆಲ್ಲಾ ಅರ್ಥ ಇದೆಯಾ ಎಂದು ಪ್ರಶ್ನೆಗಳ ಸುರಿಮಳೆಯೇ ಆಗಿದ್ದು, ವೀಕ್ಷಕರನ್ನು ಈ ವಿಡಿಯೋ ಭಾವುಕರನ್ನಾಗಿಸುತ್ತದೆ.

ಶತಾಯುಷಿಗಳ ಪ್ರೇಮ

chinnesamy_coundar ಎನ್ನುವವರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಇದನ್ನು ನೋಡಿದರೆ ಇಬ್ಬರಿಗೂ ನೂರು ವಯಸ್ಸು ದಾಟಿರುವುದು ತಿಳಿಯುತ್ತದೆ. ಪತ್ನಿಗೆ ವಯೋಸಹಜ ಕಾಯಿಲೆ. ಹಾಸಿಗೆ ಹಿಡಿದಿದ್ದಾಳೆ. ಆದರೆ ಆಕೆಗಿಂತಲೂ ವಯಸ್ಸಿನಲ್ಲಿ ಹಿರಿಯರಾಗಿರುವ ಪತಿ ಇಡ್ಲಿ, ಸಾಂಬಾರ್​ ಇರುವ ಪ್ಲೇಟ್​ ಅನ್ನು ಪತ್ನಿಗೆ ಕೊಟ್ಟಿದ್ದಾರೆ. ಆದರೆ ಪತ್ನಿಗೆ ಅದು ಸೇರುತ್ತಿಲ್ಲ. ಊಟ ಮಾಡದಿದ್ದರೆ ಸಮಸ್ಯೆಯಾಗುತ್ತದೆ ಎಂದು ಪತಿ, ಪತ್ನಿಗೆ ಪ್ರೀತಿಯಿಂದ ತಿಳಿಹೇಳಿದರೂ ಆಕೆಗೆ ಅದ್ಯಾಕೋ ಸೇರುತ್ತಿಲ್ಲ.

ಇಡ್ಲಿ ತಿನ್ನಿಸುವ ವಿಡಿಯೋ

ಬಳಿಕ ಪತಿಯೇ ಇಡ್ಲಿಯನ್ನು ತುಂಡು ಮಾಡಿ, ಪತ್ನಿಗೆ ತಿನ್ನಿಸಿದ್ದಾರೆ. ಆದರೆ ಹೂಂ ಹೂಂ. ಈಗಲೂ ಆಕೆ ಒಪ್ಪುತ್ತಿಲ್ಲ. ಬಹುಶಃ ಅದನ್ನು ತಿನ್ನಲು ಆಗುವುದಿಲ್ಲ ಏನೋ ತಿಳಿದಿಲ್ಲ. ತೀವ್ರ ಅನಾರೋಗ್ಯವಾಗಿದ್ದಾಗ ಯಾವುದೇ ಪದಾರ್ಥ ಸೇರುವುದಿಲ್ಲ ಎನ್ನುವಂತೆ ಈ ವಿಡಿಯೋದಲ್ಲಿ ನೋಡಬಹುದು. ಆದರೂ ಬಿಡದ ಪತಿ, ಆಕೆಗೆ ತಿನ್ನಿಸುವ ವಿಡಿಯೋ ಇದಾಗಿದೆ. ಇಂಥ ಪ್ರೀತಿಯನ್ನು ನೋಡುತ್ತಿರುವ ನಾವೇ ಧನ್ಯ. ಬಹುಶಃ ಮುಂದಿನ ಪೀಳಿಗೆಗೆ ಖಂಡಿತ ಇಂಥ ಪ್ರೀತಿಯ ವಿಡಿಯೋ ಸಿಗದೇ ಇರಬಹುದು ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ.



Source link

Leave a Reply

Your email address will not be published. Required fields are marked *