ಭಾರತದ ‘ವೀನಸ್’ ಎಂದೇ ಖ್ಯಾತರಾದ ನಟಿ ಮಧುಬಾಲಾ

ಸಿನಿಮಾ ಲೋಕದ ಸೌಂದರ್ಯದ ದೇವತೆ, ಭಾರತದ ‘ವೀನಸ್’ ಎಂದೇ ಖ್ಯಾತರಾದ ಆ ನಟಿಯದ್ದು ಕೋಟ್ಯಾಂತರ ಅಭಿಮಾನಿಗಳನ್ನು ಮರುಳುಗೊಳಿಸಿದ ಮಾಂತ್ರಿಕ ಕಣ್ಣುಗಳು. ಆಕೆಯ ಒಂದು ಕಿರುನಗೆಗೆ ಅಂದಿನ ಕಾಲದ ಇಡೀ ಚಿತ್ರರಂಗವೇ ಫಿದಾ ಆಗಿತ್ತು. ಆದರೆ ಆ ಸುಂದರ ಕಣ್ಣುಗಳ ಹಿಂದೆ ಯಾರೂ ಕಾಣದ ಕಣ್ಣೀರಿನ ಕಡಲಿತ್ತು. ಬೆಳ್ಳಿತೆರೆಯ ಮೇಲೆ ರಾಣಿಯಂತೆ ಮಿಂಚಿದ ಈ ಚೆಲುವೆಯ ನಿಜ ಜೀವನ ಸಿನೆಮಾ ಕಥೆಗಿಂತಲೂ ಹೆಚ್ಚು ನೋವಿನಿಂದ ಕೂಡಿದೆ ಎಂಬುದು ಇಂದಿನ ತಲೆಮಾರಿನ ಅನೇಕರಿಗೆ ತಿಳಿದಿಲ್ಲ.

ಮುಮ್ರಾಜ್ ಜೆಹಾನ್ ಬೇಗಂ ದೆಹ್ನವಿ

ಫೆಬ್ರವರಿ 14, ಪ್ರೇಮಿಗಳ ದಿನದಂದೇ ಜನಿಸಿದ ಮುಮ್ರಾಜ್ ಜೆಹಾನ್ ಬೇಗಂ ದೆಹ್ನವಿಯೇ ಈಕೆ. ತೆರೆಯ ಮೇಲಿನ ಈ ನಟಿಯ ಹೆಸರು ಮಧುಬಾಲಾ (Madubala), ಜೀವನದುದ್ದಕ್ಕೂ ನಿಜವಾದ ಪ್ರೀತಿಗಾಗಿ ಹಾತೊರೆದರು. 11 ಮಕ್ಕಳ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಮಧುಬಾಲಾ, ಕೇವಲ 8ನೇ ವಯಸ್ಸಿನಲ್ಲಿಯೇ ಮುಂಬೈಗೆ ಬಂದು ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದರು. ಆಕೆಯ ಗ್ಲಾಮರ್ ಮತ್ತು ನಟನೆ ಇತಿಹಾಸ ಸೃಷ್ಟಿಸಿತು ನಿಜ, ಆದರೆ ಆಕೆಯ ಬದುಕಿನಲ್ಲಿ ಸುಖ ಎಂಬುದು ಮರೀಚಿಕೆಯಾಗಿತ್ತು. ಮಧುಬಾಲಾ ತನ್ನ ಜೀವಿತಾವಧಿಯಲ್ಲಿ ಏಳು ಬಾರಿ ಪ್ರೀತಿಯಲ್ಲಿ ಬಿದ್ದರೂ, ಆಕೆಗೆ ದಕ್ಕಿದ್ದು ಮಾತ್ರ ಕಣ್ಣೀರು ಮತ್ತು ಹತಾಶೆ.

ಮಧುಬಾಲಾರ ಮೊದಲ ಪ್ರೀತಿ ಬಾಲ್ಯದ ಗೆಳೆಯ ಲತೀಫ್. ಮುಂಬೈಗೆ ಬರುವಾಗ ಆಕೆಯೇ ಕೊಟ್ಟಿದ್ದ ಕೆಂಪು ಗುಲಾಬಿಯನ್ನು ಲತೀಫ್ ಆಕೆ ಸಾಯುವವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದ ಎಂಬುದು ಒಂದು ಮನಕಲಕುವ ಕಥೆ. ಆಕೆ ದೊಡ್ಡ ನಟಿಯಾದ ಮೇಲೂ ಲತೀಫ್ ಪ್ರತಿ ವರ್ಷ ಆಕೆಯ ಸಮಾಧಿಯ ಮೇಲೆ ಗುಲಾಬಿ ಇಡುತ್ತಿದ್ದನಂತೆ. ನಂತರ ನಿರ್ದೇಶಕ ಕಿದಾರ್ ಶರ್ಮಾ ಆಕೆಯನ್ನು ಇಷ್ಟಪಟ್ಟರೂ, ವಯಸ್ಸಿನ ವ್ಯತ್ಯಾಸದಿಂದ ಅದು ಮದುವೆಯವರೆಗೆ ಹೋಗಲಿಲ್ಲ. ಇನ್ನು ‘ಮಹಲ್’ ನಿರ್ದೇಶಕ ಕಮಲ್ ಅದ್ರೋಹಿ ಅವರ ಜೊತೆ ಪ್ರೀತಿಯಾದರೂ, ಅವರು ಈಗಾಗಲೇ ವಿವಾಹಿತರಾಗಿದ್ದರು. ಮಧುಬಾಲಾ ಯಾರ ಜೀವನದಲ್ಲೂ ‘ಎರಡನೇ ಹೆಂಡತಿ’ಯಾಗಿ ಇರಲು ಇಷ್ಟಪಡಲಿಲ್ಲ, ಹಾಗಾಗಿ ಆ ಸಂಬಂಧಕ್ಕೂ ಬ್ರೇಕ್ ಬಿತ್ತು.

’ಮುಘಲ್-ಎ-ಆಜಮ್’ ಚಿತ್ರದ ಸೆಟ್‌ನಲ್ಲಿ ಶುರುವಾದ ಈ ಪ್ರೇಮ ಕಥೆ

ಮಧುಬಾಲಾರ ಬದುಕಿನ ಅತ್ಯಂತ ದೊಡ್ಡ ಪ್ರೇಮ ಅಂದರೆ ಅದು ದಿಲೀಪ್ ಕುಮಾರ್. ‘ಮುಘಲ್-ಎ-ಆಜಮ್’ ಚಿತ್ರದ ಸೆಟ್‌ನಲ್ಲಿ ಶುರುವಾದ ಈ ಪ್ರೇಮ ಕಥೆ ಇಡೀ ಬಾಲಿವುಡ್‌ನಲ್ಲೇ ಸಂಚಲನ ಮೂಡಿಸಿತ್ತು. ಅವರಿಬ್ಬರೂ ಮದುವೆಯಾಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮಧುಬಾಲಾರ ತಂದೆ ಅತಾವುಲ್ಲಾ ಖಾನ್ ಅವರ ಹಠಮಾರಿ ಸ್ವಭಾವ ಮತ್ತು ನ್ಯಾಯಾಲಯದ ಒಂದು ಪ್ರಕರಣ ಈ ಪ್ರೇಮ ಪಕ್ಷಿಗಳನ್ನು ಬೇರ್ಪಡಿಸಿತು. ದಿಲೀಪ್ ಕುಮಾರ್ ಎದುರು ಮಧುಬಾಲಾ ಅನಿವಾರ್ಯವಾಗಿ ತನ್ನ ತಂದೆಯ ಪರವಾಗಿ ಸಾಕ್ಷ್ಯ ನೀಡಬೇಕಾಯಿತು. ಇದು ಅವರ ಸಂಬಂಧಕ್ಕೆ ಕೊಳ್ಳಿ ಇಟ್ಟಿತು. ಪ್ರೀತಿಯಲ್ಲಿ ಸೋತ ಮಧುಬಾಲಾ ಮಾನಸಿಕವಾಗಿ ಜರ್ಜರಿತರಾದರು.

ಅಂತಿಮವಾಗಿ ಒಂಟಿತನದ ಭೀತಿಯಿಂದ ಮಧುಬಾಲಾ 1960 ರಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರನ್ನು ವಿವಾಹವಾದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಅವರಿಗೆ ಹೃದಯದಲ್ಲಿ ರಂಧ್ರವಿರುವ ಕಾಯಿಲೆ ಉಲ್ಬಣಿಸಿತು. ಆಕೆ ರಕ್ತ ಕೆಮ್ಮುತ್ತಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ, ಕಿಶೋರ್ ಕುಮಾರ್ ಆಕೆಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬ ನೋವಿನ ಕಥೆಯಿದೆ. ಆಕೆಯನ್ನು ಅವಳ ತಂದೆಯ ಮನೆಯಲ್ಲೇ ಬಿಟ್ಟು ಬಂದ ಕಿಶೋರ್, ಮೂರ್ನಾಲ್ಕು ತಿಂಗಳಿಗೊಮ್ಮೆ ಭೇಟಿ ನೀಡುತ್ತಿದ್ದರು.

ಲಕ್ಷಾಂತರ ಜನ ಆರಾಧಿಸಿದರೂ, ಏಳು ಬಾರಿ ಪ್ರೀತಿಯಲ್ಲಿ ಸೋತ ಮಧುಬಾಲಾ, ಕೇವಲ 36ನೇ ವಯಸ್ಸಿನಲ್ಲಿ ಅಕ್ಷರಶಃ ಒಂಟಿಯಾಗಿ ಕಣ್ಣು ಮುಚ್ಚಿದರು. ಸಾಯುವ ಸಮಯದಲ್ಲಿ ಆಕೆಯ ಪಕ್ಕದಲ್ಲಿ ಯಾರೂ ಇರಲಿಲ್ಲ. ಸಿನಿಮಾ ರಂಗದ ಇತಿಹಾಸದಲ್ಲಿ ಇಷ್ಟು ಸುಂದರ ನಟಿಯೊಬ್ಬಳು ಇಷ್ಟು ದಾರುಣವಾಗಿ ಅಂತ್ಯ ಕಂಡಿದ್ದು ನಿಜಕ್ಕೂ ಒಂದು ದೊಡ್ಡ ಟ್ರಾಜಿಡಿ.

Source link
ನಟಿಯಾಗಿದ್ದಾಗ ಕೋಟಿ ಕೋಟಿ ಆಸ್ತಿ, ಬ್ಯೂಟಿ ತೋರಿಸಿ 7 ಜನರೊಂದಿಗೆ ನಂಟು: ಕೊನೆಗಾಲದಲ್ಲಿ ಯಾರೂ ಇಲ್ಲದೇ ಬೀದಿ ಹೆಣವಾದ ಸುಂದರಿ!