Headlines

ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd



ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

ರಾಮ್ ಚರಣ್ ಮತ್ತು ಉಪಾಸನಾ ಪ್ರೀತಿಸಿ, ಹಿರಿಯರ ಒಪ್ಪಿಗೆಯೊಂದಿಗೆ ಮದುವೆಯಾದರು. ಆದರೆ ಮದುವೆಯ ನಂತರ ಅವರು ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಬಯಸಿದ್ದರೇ? ಈ ಬಗ್ಗೆ ಉಪಾಸನಾ ಅವರೇ ಒಂದು ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ರಾಮ್ ಚರಣ್ ಇತ್ತೀಚೆಗೆ ಮತ್ತೆ ತಂದೆಯಾಗಿದ್ದಾರೆ. ಚರಣ್ ಮತ್ತು ಉಪಾಸನಾಗೆ ಮೊದಲು ಮಗಳು ಕ್ಲೀಂಕಾರಾ ಜನಿಸಿದ್ದು, ಇತ್ತೀಚೆಗೆ ಗಂಡು-ಹೆಣ್ಣು ಅವಳಿ ಮಕ್ಕಳು ಜನಿಸಿದ್ದಾರೆ. ಅವರಿಗೆ ಶಿವರಾಮ್ ಮತ್ತು ಅನ್ವೀರಾ ದೇವಿ ಎಂದು ಹೆಸರಿಡಲಾಗಿದೆ. ಚಿರಂಜೀವಿ ಕುಟುಂಬಕ್ಕೆ ವಾರಸುದಾರ ಬಂದಿದ್ದರಿಂದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಮದುವೆಗೂ ಮುನ್ನ ರಾಮ್ ಚರಣ್ ಮತ್ತು ಉಪಾಸನಾ ಪ್ರೀತಿಸುತ್ತಿದ್ದರು. ಆದರೆ ಆ ವಿಷಯ ಯಾರಿಗೂ ತಿಳಿದಿರಲಿಲ್ಲ. ಇಬ್ಬರೂ ಮಧ್ಯರಾತ್ರಿ ರೈಡ್ ಹೋಗುತ್ತಿದ್ದರಂತೆ. ರಾಮ್ ಚರಣ್ ನೀಡುತ್ತಿದ್ದ ಸರ್‌ಪ್ರೈಸ್‌ಗಳು ತನ್ನನ್ನು ಬಹಳ ಇಂಪ್ರೆಸ್ ಮಾಡಿತ್ತು ಎಂದು ಉಪಾಸನಾ ಹೇಳಿದ್ದಾರೆ.

ಒಂದು ದಿನ ಉಪಾಸನಾ, ‘ಮದುವೆಯಾದ ಮೇಲೆ ನಾವು ಎಲ್ಲಿ ವಾಸಿಸುತ್ತೇವೆ?’ ಎಂದು ರಾಮ್ ಚರಣ್ ಅವರನ್ನು ಕೇಳಿದರಂತೆ. ಆಗ ಚರಣ್ ತಾನು ಖರೀದಿಸಿದ ಜಾಗದ ಬಗ್ಗೆ ಹೇಳಿ, ಅಲ್ಲಿ ಮನೆ ಕಟ್ಟುವುದಾಗಿ ತಿಳಿಸಿದ್ದಾರೆ. ಇದನ್ನು ಕೇಳಿ ಉಪಾಸನಾಗೆ ಏನು ಹೇಳಬೇಕೆಂದು ತಿಳಿಯದೆ ಮೌನವಾದರು. ಅವಿಭಕ್ತ ಕುಟುಂಬದಿಂದ ಬಂದ ತನಗೆ ಒಂಟಿಯಾಗಿರುವುದು ಇಷ್ಟವಿಲ್ಲ ಎಂದು ಮನಸ್ಸಿನ ಮಾತು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ರಾಮ್ ಚರಣ್, ‘ನಾವು ವೀಕೆಂಡ್‌ನಲ್ಲಿ ಮಾತ್ರ ಆ ಮನೆಯಲ್ಲಿ ಇರುತ್ತೇವೆ, ಉಳಿದ ದಿನಗಳಲ್ಲಿ ಪೋಷಕರೊಂದಿಗೇ ಇರುತ್ತೇವೆ’ ಎಂದರಂತೆ. ಆಗ ತನ್ನ ಮನಸ್ಸು ನಿರಾಳವಾಯಿತು ಎಂದು ಉಪಾಸನಾ ತಿಳಿಸಿದ್ದಾರೆ. ‘ನೀನು ಎಲ್ಲವನ್ನೂ ಚೆನ್ನಾಗಿ ನಿಭಾಯಿಸುತ್ತೀಯ’ ಎಂದು ಚರಣ್ ಯಾವಾಗಲೂ ಹೇಳುತ್ತಾರೆ. ‘ಅವರು ತಾಳ್ಮೆಯಿಂದ ಇತರರ ಮಾತನ್ನು ಕೇಳುತ್ತಾರೆ’ ಎಂದು ಉಪಾಸನಾ ಪತಿಯನ್ನು ಹೊಗಳಿದ್ದಾರೆ.

ಪ್ರಮುಖ ಪಾತ್ರದಲ್ಲಿ ಶಿವರಾಜ್‌ಕುಮಾರ್

ರಾಮ್ ಚರಣ್ ಸದ್ಯ ಬುಚ್ಚಿಬಾಬು ಸಾನಾ ನಿರ್ದೇಶನದ ‘ಪೆದ್ದಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿದ್ದು, ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಆಗಿರುವ ಈ ಚಿತ್ರ ಏಪ್ರಿಲ್ 30 ರಂದು ಬಿಡುಗಡೆಯಾಗಲಿದೆ. ರಾಮ್ ಚರಣ್ ಅವರ ಹಿಂದಿನ ಚಿತ್ರ ‘ಗೇಮ್ ಚೇಂಜರ್’ ಡಿಸಾಸ್ಟರ್ ಆಗಿತ್ತು. ಹಾಗಾಗಿ ‘ಪೆದ್ದಿ’ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ನೀಡುವ ನಿರೀಕ್ಷೆಯಲ್ಲಿದ್ದಾರೆ.



Source link

Leave a Reply

Your email address will not be published. Required fields are marked *