ಹೆದ್ದಾರಿಯಲ್ಲಿ ಹಣದ ಮಳೆ! ಪತನಗೊಂಡ ವಿಮಾನದಿಂದ ರಸ್ತೆಗೆ ಬಿದ್ದ ಬ್ಯಾಂಕ್‌ನೋಟುಗಳು; 15 ಜನರ ಸಾವು | Bolivia Military Plane Crash Banknotes Highway 15 Killed El Alto Airport San

ಹೆದ್ದಾರಿಯಲ್ಲಿ ಹಣದ ಮಳೆ! ಪತನಗೊಂಡ ವಿಮಾನದಿಂದ ರಸ್ತೆಗೆ ಬಿದ್ದ ಬ್ಯಾಂಕ್‌ನೋಟುಗಳು; 15 ಜನರ ಸಾವು | Bolivia Military Plane Crash Banknotes Highway 15 Killed El Alto Airport San



ಹೆದ್ದಾರಿಯಲ್ಲಿ ಹಣದ ಮಳೆ! ಪತನಗೊಂಡ ವಿಮಾನದಿಂದ ರಸ್ತೆಗೆ ಬಿದ್ದ ಬ್ಯಾಂಕ್‌ನೋಟುಗಳು; 15 ಜನರ ಸಾವು | Bolivia Military Plane Crash Banknotes Highway 15 Killed El Alto Airport San

ಬೊಲಿವಿಯಾ ರಾಜಧಾನಿ ಸಮೀಪ ಹೊಸ ನೋಟುಗಳನ್ನು ಸಾಗಿಸುತ್ತಿದ್ದ ಕಾರ್ಗೋ ವಿಮಾನ ಪತನಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ರನ್-ವೇಯಿಂದ ಜಾರಿದ ವಿಮಾನ ಹೆದ್ದಾರಿಗೆ ನುಗ್ಗಿದ್ದರಿಂದ, ರಸ್ತೆಯುದ್ದಕ್ಕೂ ಚಲಾವಣೆಯಲ್ಲಿಲ್ಲದ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಲಾ ಪಾಜ್ (ಫೆ.28): ಬೊಲಿವಿಯಾ ರಾಜಧಾನಿ ಸಮೀಪ ಸರ್ಕಾರದ ಹಣವನ್ನು ಸಾಗಿಸುತ್ತಿದ್ದ ಕಾರ್ಗೋ ವಿಮಾನವೊಂದು ಶುಕ್ರವಾರ ಭೀಕರವಾಗಿ ಪತನಗೊಂಡಿದೆ. ಈ ದುರಂತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಪತನದ ರಭಸಕ್ಕೆ ಹೆದ್ದಾರಿಯಲ್ಲಿದ್ದ ಹತ್ತಾರು ವಾಹನಗಳು ಜಖಂಗೊಂಡಿದ್ದು, ವಿಮಾನದಲ್ಲಿದ್ದ ಹೊಸ ನೋಟುಗಳು ರಸ್ತೆಯುದ್ದಕ್ಕೂ ಹರಡಿಕೊಂಡಿವೆ.

ರನ್-ವೇಯಿಂದ ಜಾರಿ ಹೆದ್ದಾರಿಗೆ ನುಗ್ಗಿದ ವಿಮಾನ

ರಕ್ಷಣಾ ಸಚಿವ ಮಾರ್ಸೆಲೊ ಸಲಿನಾಸ್ ಅವರ ಪ್ರಕಾರ, ಹೊಸದಾಗಿ ಮುದ್ರಿಸಲಾದ ಬೊಲಿವಿಯನ್ ಕರೆನ್ಸಿಯನ್ನು ಹೊತ್ತೊಯ್ಯುತ್ತಿದ್ದ ಹರ್ಕ್ಯುಲಸ್ C-130 (Hercules C-130) ವಿಮಾನವು ಲಾ ಪಾಜ್ ನಗರಕ್ಕೆ ಹೊಂದಿಕೊಂಡಿರುವ ಎಲ್ ಆಲ್ಟೊ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್-ವೇಯಿಂದ ನಿಯಂತ್ರಣ ತಪ್ಪಿ ಪಕ್ಕದ ಹೊಲಕ್ಕೆ ನುಗ್ಗಿದೆ. ಅಗ್ನಿಶಾಮಕ ಸಿಬ್ಬಂದಿ ವಿಮಾನವನ್ನು ಆವರಿಸಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾವಿನ ಸಂಖ್ಯೆ ಮತ್ತು ವಾಹನಗಳ ಹಾನಿ

ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ತೋವರ್ ಅವರು ಕನಿಷ್ಠ 15 ಜನರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಮೃತರು ವಿಮಾನದಲ್ಲಿದ್ದವರೇ ಅಥವಾ ಹೆದ್ದಾರಿಯಲ್ಲಿದ್ದ ಕಾರುಗಳಲ್ಲಿದ್ದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತದ ತೀವ್ರತೆಗೆ ಸುಮಾರು 15 ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ವಿಮಾನದ ಅವಶೇಷಗಳು, ಧ್ವಂಸಗೊಂಡ ಕಾರುಗಳು ಮತ್ತು ರಸ್ತೆಯ ಮೇಲೆ ಮೃತದೇಹಗಳು ಬಿದ್ದಿರುವುದು ಕಂಡುಬಂದಿದೆ.

Scroll to load tweet…

ನೋಟು ಆಯ್ದುಕೊಳ್ಳಲು ಮುಗಿಬಿದ್ದ ಜನರು

ವಿಮಾನವು ಸೆಂಟ್ರಲ್ ಬ್ಯಾಂಕ್‌ಗೆ ಸೇರಿದ ನೋಟುಗಳನ್ನು ಸಾಗಿಸುತ್ತಿತ್ತು. ವಿಮಾನ ಪತನಗೊಂಡು ನೋಟುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡ ಸಾರ್ವಜನಿಕರು ಹಣವನ್ನು ಸಂಗ್ರಹಿಸಲು ಮುಗಿಬಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಆದರೆ, ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಡೇವಿಡ್ ಎಸ್ಪಿನೋಜಾ ಅವರು ಈ ನೋಟುಗಳಿಗೆ ಇನ್ನೂ ಕಾನೂನುಬದ್ಧ ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನೋಟುಗಳು ಚಲಾವಣೆಗೆ ಬರಲು ಸಿದ್ಧವಾಗಿದ್ದವು ಆದರೆ ಅವುಗಳಿಗೆ ಇನ್ನೂ ಸರಣಿ ಸಂಖ್ಯೆಗಳನ್ನು (Serial Numbers) ನೀಡಿರಲಿಲ್ಲ. ಸಾಂತಾ ಕ್ರೂಜ್ ನಗರದಿಂದ ಲಾ ಪಾಜ್‌ಗೆ ಎಷ್ಟು ಮೊತ್ತದ ಹಣವನ್ನು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಬ್ಯಾಂಕ್ ಬಹಿರಂಗಪಡಿಸಿಲ್ಲ.

ತನಿಖೆ ಪ್ರಗತಿಯಲ್ಲಿ: ವಾಯುಪಡೆಯ ಜನರಲ್ ಸೆರ್ಗಿಯೋ ಲೋರಾ ಅವರ ಪ್ರಕಾರ, ವಿಮಾನದಲ್ಲಿದ್ದ ಆರು ಸಿಬ್ಬಂದಿಗಳ ಪೈಕಿ ಇಬ್ಬರು ಪತ್ತೆಯಾಗಿಲ್ಲ. ಸದ್ಯಕ್ಕೆ ವಿಮಾನ ನಿಲ್ದಾಣದ ಎಲ್ಲಾ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *